ಮನೆ ಮನರಂಜನೆ ದುನಿಯಾ ವಿಜಯ್‌ ನಟನೆಯ ‘ಮಾರುತ’ ಚಿತ್ರದ ಚಿತ್ರೀಕರಣ ಮುಕ್ತಾಯ

ದುನಿಯಾ ವಿಜಯ್‌ ನಟನೆಯ ‘ಮಾರುತ’ ಚಿತ್ರದ ಚಿತ್ರೀಕರಣ ಮುಕ್ತಾಯ

0

ಎಸ್ ನಾರಾಯಣ್ ನಿರ್ದೇಶನದ ‘ಮಾರುತ’ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ದುನಿಯಾ ವಿಜಯ್‌ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಕಾಂಬಿನೇಶನ್‌ನಲ್ಲಿ ಮೂರನೇ ಚಿತ್ರ ಇದಾಗಿದೆ. ಈ ಹಿಂದೆ ಇವರಿಬ್ಬರು ಒಟ್ಟಾಗಿ ‘ಚಂಡ’, ‘ದಕ್ಷ’ ಚಿತ್ರಗಳನ್ನು ನೀಡಿದ್ದರು

Join Our Whatsapp Group

ಶ್ರೇಯಸ್ ಕೆ ಮಂಜು ಕೂಡ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಕೆ.ಮಂಜು ಹಾಗೂ ರಮೇಶ್ ಯಾದವ್ ಬಂಡವಾಳ ಹೂಡಿದ್ದಾರೆ. ಬೃಂದಾ ಚಿತ್ರದ ನಾಯಕಿ.

‘ಮಾರುತ’ ಕಂಟೆಂಟ್ ಆಧಾರಿತ ಚಿತ್ರ. ಇದು ಸಾಮಾನ್ಯರ ಕಥೆ. ಪ್ರತಿ ಮನೆಯಲ್ಲಿ ನಡೆಯುವ ಘಟನೆಗಳೇ ಚಿತ್ರವಾಗಿದೆ. ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನೆಲ್ಲ ಅವರಿಸಿಕೊಂಡಿರುವ ಭೂತ ಈ ಮಾರುತ. ಅದರಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳೇನು? ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ’ ಎಂದಿದ್ದಾರೆ ನಿರ್ದೇಶಕರು.

ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ ಮೊದಲಾದವರು ಚಿತ್ರದಲ್ಲಿದ್ದು, ವಿಶೇಷಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಚಿತ್ರಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನವಿದೆ.