ಮನೆ ಸ್ಥಳೀಯ ದಸರಾ ಮಹೋತ್ಸವ: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ವಿವಿಧ ಕಾರ್ಯಕ್ರಮಗಳು

ದಸರಾ ಮಹೋತ್ಸವ: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ವಿವಿಧ ಕಾರ್ಯಕ್ರಮಗಳು

0

ಮೈಸೂರು: ದಸರಾ ಮಹೋತ್ಸವ 2024 ರ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ರ ಅಂಗವಾಗಿ  ವಿವಿಧ ಕಾರ್ಯಕ್ರಮಗಳನ್ನು ಅಕ್ಟೋಬರ್ 4 ರಿಂದ 6 ರವರೆಗೆ  ಬೆಳಿಗ್ಗೆ 7 ಗಂಟೆಯಿಂದ  ಮೈಸೂರಿನ ರಂಗಾಚಾರ್ಲು ಪುರಭವನ( ಟೌನ್ ಹಾಲ್ ನಿಂದ) ದ ಆವರಣದಲ್ಲಿ ಆಯೋಜಿಸಲಾಗಿದೆ

1. ಜಾವಾ ಮೋಟಾರ್ ಬೈಕ್

ಅಕ್ಟೋಬರ್ 4 ರಂದು ಪಾರಂಪರಿಕ ಜಾವಾ ಮೋಟಾರ್ ಬೈಕ್ ಸವಾರಿಯನ್ನು ಏರ್ಪಡಿಸಿದ್ದು, ಮೋಟಾರ್ ಬೈಕ್ ಸವಾರಿಗೆ 25 ರಿಂದ 50 ವರ್ಷ ವಯೋಮಿತಿಯುಳ್ಳ ವಿದ್ಯಾರ್ಥಿಗಳು/ ಯುವಕರು ಹಾಗೂ ಪುರುಷರು ಭಾಗವಹಿಸಬಹುದಾಗಿದ್ದು, ಮೊದಲು ನೋಂದಣಿ ಮಾಡಿಕೊಳ್ಳುವ 10 ಮಂದಿ ಜಾವ ಮೋಟಾರ್ ಬೈಕುವುಳ್ಳ ಆಸಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು( ಕಡ್ಡಾಯವಾಗಿ ಜಾವಾ ಮೋಟಾರ್ ಬೈಕ್ ತರುವುದು).  ಮೋಟಾರ್ ಬೈಕ್ ಸವಾರಿಯೂ ರಂಗಾಚಾರ್ಲು ಪುರಭವನ( ಟೌನ್ ಹಾಲ್ )ದಿಂದ ಪ್ರಾರಂಭವಾಗಿ, ದೊಡ್ಡ ಗಡಿಯಾರ ಗೋಪುರ(ಸಿಲ್ವರ್ ಜುಬಿಲಿ ಕ್ಲಾಕ್ ಟವರ್), ಫ್ರೀ ಮೇಸನ್ಸ್ ಕ್ಲಬ್, 10ನೇ ಚಾಮರಾಜೇಂದ್ರ ವೃತ್ತ ಅಂಬಾ ವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಲಾನ್ಸ್‌ಡೌನ್ ಕಟ್ಟಡ, ಬನುಮಯ್ಯ ಶಿಕ್ಷಣ ಸಂಸ್ಥೆ, ಮೈಸೂರು ಮಹಾನಗರ ಪಾಲಿಕೆ(ಕಾರ್ಪೋರೇಷನ್ ಕಛೇರಿ), ಮಹಾರಾಜ ಸಂಸ್ಕೃತ ಪಾಠಶಾಲೆ, ಸಾರ್ವಜನಿಕ ಕಛೇರಿಗಳ ಸಂಕೀರ್ಣ(ಕಾಡಾ- Public Office), ಅಂಬಾವಿಲಾಸ ಅರಮನೆ (ವರಹಗೇಟ್), ಗನ್‌ಹೌಸ್, ಶಿವರಾತ್ರೀಶ್ವರ ಮಠದ ಆಡಳಿತ ಕಟ್ಟಡ, 6 ಗೇಟ್, ಕರ್ಜನ್ ಪಾರ್ಕ್, ಬ್ಯಾಂಡ್ ಹೌಸ್, ಆಡಳಿತ ತರಬೇತಿ ಸಂಸ್ಥೆ (ATI) ಕೆ.ಎಸ್.ಆರ್.ಪಿ ಕಟ್ಟಡ ಮೈಸೂರು ಪ್ರವೇಶದ್ಧಾರ, ಲಲಿತ್ ಮಹಲ್, ಪೋಸ್ಟಲ್ ಟ್ರೈನಿಂಗ್ ಸೆಂಟರ್(PTC),  ವಸಂತ್ ಮಹಲ್(ಡಯಟ್) ಹಾದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹತ್ತಿರ ಮುಕ್ತಾಯಗೊಳ್ಳಲಿದೆ.

2. ಪಾರಂಪರಿಕ ಉಡುಗೆಯಲ್ಲಿ ದಂಪತಿಗಳಿಗಾಗಿ ಪಾರಂಪರಿಕ ಟಾಂಗಾ ಸವಾರಿ

ಅಕ್ಟೋಬರ್ 5 ರಂದು “ಪಾರಂಪರಿಕ ಉಡುಗೆಯಲ್ಲಿ ದಂಪತಿಗಳಿಗಾಗಿ ಪಾರಂಪರಿಕ ಟಾಂಗಾ ಸವಾರಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಕಾರ್ಯಕ್ರಮದಲ್ಲಿ 25 ರಿಂದ 55 ವರ್ಷ ವಯೋಮಿತಿಯುಳ್ಳ ದಂಪತಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಮೊದಲು ನೋಂದಣಿ ಮಾಡಿಕೊಳ್ಳುವ 50 ಜೋಡಿಗಳಿಗೆ ಮಾತ್ರ ಆದ್ಯತೆ ಮೇರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಟಾಂಗಾ ಸವಾರಿಯು ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾಗಿ ದೊಡ್ಡ, ಗಡಿಯಾರ ಗೋಪುರ (ಸಿಲ್ವರ್ ಜ್ಯುಬಿಲಿ ಕ್ಲಾಕ್ ಟವರ್), ಫ್ರೀ ಮೇಸನ್ಸ್ ಕ್ಲಬ್, 10ನೇ ಚಾಮರಾಜೇಂದ್ರ ವೃತ್ತ, ಅಂಬಾ ವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್‌ಡೌನ್ ಕಟ್ಟಡ, ಜಗನ್ ಮೋಹನ ಅರಮನೆ, ಪರಕಾಲ ಮಠ, ಶೇಷಾದ್ರಿ ಹೌಸ್- ವಾಣಿಜ್ಯ ತೆರಿಗೆ ಕಛೇರಿ (Commercial Tax Office), ಪದ್ಮಾಲಯ, ಹಳೇ ಜಿಲ್ಲಾಧಿಕಾರಿಗಳ ಕಛೇರಿ, ಕ್ರಾಫರ್ಡ್ ಹಾಲ್, ಹೋಟೆಲ್ ಮೆಟ್ರೊಪೋಲ್, ಮೈಸೂರು ರೈಲ್ವೆ ಜಂಕ್ಷನ್, ಕೃಷ್ಣ ರಾಜೇಂದ್ರ ಆಸ್ಪತ್ರೆ(ಕೆ.ಆರ್.ಆಸ್ಪತೆ) ವೃತ್ತ, ಮೈಸೂರು ಮೆಡಿಕಲ್ ಕಾಲೇಜು, ಆಯುರ್ವೇದಿಕ್ ಆಸ್ಪತ್ರೆ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್, ಕಾವೇರಿ ಎಂಪೋರಿಯಮ್, ಗಾಂಧಿ ವೃತ್ತ ಹಾದು ರಂಗಾಚಾರ್ಲು ಪುರಭವನ(ಟೌನ್‌ಹಾಲ್) ಹತ್ತಿರ ಮುಕ್ತಾಯಗೊಳ್ಳಲಿದೆ.

3. ಪಾರಂಪರಿಕ ನಡಿಗೆ” ಕಾರ್ಯಕ್ರಮ

ಅಕ್ಟೋಬರ್ 06  ರಂದು “ಪಾರಂಪರಿಕ ನಡಿಗೆ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ 18 ರಿಂದ 50 ವರ್ಷ ವಯೋಮಿತಿಯುಳ್ಳ ವಿದ್ಯಾರ್ಥಿಗಳು/ ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದಾಗಿದ್ದು, ಮೊದಲು ನೋಂದಣಿ ಮಾಡಿಕೊಳ್ಳುವ 200 ಜನ ಆಸಕ್ತರಿಗೆ ಮಾತ್ರ ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ನಡಿಗೆಯು ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾಗಿ, ಸಿಲ್ವರ್ ಜೂಬಿಲಿ ಕ್ಲಾಕ್ ಟವರ್(ದೊಡ್ಡ ಗಡಿಯಾರ), ಫ್ರಿಮೇಸನ್ಸ್ ಕ್ಲಬ್, ಹತ್ತನೆ ಚಾಮರಾಜ ಒಡೆಯರ್ ವೃತ್ರ ಅಂಬಾವಿಲಾಸ ಅರಮನೆ, ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಕೃಷ್ಣರಾಜೇಂದ್ರ ಆಸ್ಪತ್ರೆ ಮೈಸೂರು ಮೆಡಿಕಲ್ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್  ಕಾವೇರಿ ಎಂಪೋರಿಯಮ್, ಗಾಂಧಿ ವೃತ್ತ ಹಾದು ರಂಗಾಚಾರ್ಲು ಪುರಭವನ (ಟೌನ್‌ಹಾಲ್) ಹತ್ತಿರ ಮುಕ್ತಾಯಗೊಳ್ಳಲಿದೆ.

ಮೂರು ದಿನಗಳನ್ನು ನಡೆಯುವ  ಕಾರ್ಯಕ್ರಮಗಳಲ್ಲಿ ನುರಿತ ಇತಿಹಾಸ ಹಾಗೂ ಪುರಾತತ್ವ ತಜ್ಞರುಗಳು ಮೈಸೂರಿನ ವಿವಿಧ ಪಾರಂಪರಿಕ ಕಟ್ಟಡಗಳ ಪರಿಚಯವನ್ನು ಮಾಡಿಕೊಡಲಿದ್ದಾರೆ.

 ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಸೆಪ್ಟಂಬರ್ 23ರಿಂದ 30ರವರೆಗೆ ದೊಡ್ಡಕೆರೆ ಮೈದಾನದ ಕರ್ನಾಟಕದ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರನ್ನು  ನೇರವಾಗಿ ಅಥವಾ ದೂರವಾಣಿ ಅಥವಾ ಕಚೇರಿಯ ಇ-ಮೇಲ್ ವಿಳಾಸ commramh@yahoo.in ಮತ್ತು ddheritagemysore@gmail.com ನ ಮೂಲಕ ಸಂಪರ್ಕಿಸಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು ಹಾಗೂ ಕಡ್ಡಾಯವಾಗಿ ದೂರವಾಣಿ ಅಥವಾ ಮೊಬೈಲ್ ಸಂಖ್ಯೆಗಳನ್ನು ನಮೂದಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಸ್ಥಿರ  ದೂ. ಸಂ:0821-2424671/ 2424673 ಹಾಗೂ ಉಪ ನಿರ್ದೇಶಕರಾದ(ಪರಂಪರೆ) ಡಾ.ಸಿ.ಎನ್.ಮಂಜುಳಾ ಅವರ ಮೊ..ಸಂ:83102 50733 ಮತ್ತು ಪ್ರಥಮ ದರ್ಜೆ ಸಹಾಯಕರಾದ ಶಶಿಧರ .ಎಸ್ ಅವರ ಮೊ..ಸಂ: 7349057976 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪುರಾರತ್ವ , ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ಹೇಳಿದ್ದಾರೆ.