ಮನೆ ಯೋಗಾಸನ ದ್ವಿಹಸ್ತಭುಜಾಸನ

ದ್ವಿಹಸ್ತಭುಜಾಸನ

0

    ದ್ವಿಹಸ್ತ ,=ಎರಡು ಕೈಗಳು; ಭುಜ =ಹೆಗಲು ತೋಳು.ಈ ಆಸನವು ‘ಏಕ ಹಸ್ತ’ ಭುಜಾಸನದ ವ್ಯತ್ಯಾಸಭಂಗಿ.

 ಅಭ್ಯಾಸ ಕ್ರಮ

1. ಮೊದಲು,ಪಾದಗಳನ್ನು 18 ಅಂಗುಲದಷ್ಟು ಅಗಲಿಸಿ ನಿಲ್ಲಬೇಕು. 2.  ಬಳಿಕ ಮಂಡಿಗಳನ್ನು ಬಗ್ಗಿಸಿ ಅಂಗೈಗಳನ್ನು ಪಾದಗಳ ನಡು ತಾಣದಲ್ಲಿ ನೆಲದ ಮೇಲೆ ಊರಿಡಬೇಕು.

3. ಆಮೇಲೆ ಬಲಗಾಲನ್ನೆತಿ,ಅದನ್ನು ಬಲತೋಳಿನ ಮೇಲೆ ಬರುವಂತೆ ಮಾಡಿ, ಬಲತೊಡೆಯ ಹಿಂಬದಿಯನ್ನು ಬಲ ಮೆಲ್ದೋಳಿನ ಹಿಂಬದಿಗೆ ಒರಗಿಸಿಟ್ಟು ಬಳಿಕ ಎಡತೊಡೆಯನ್ನು ಎಡ ಮೇಲ್ದೋಳಿನ ಮೇಲೆ ಒರಗಿಸಬೇಕು.

4. ಅನಂತರ ಉಸಿರನ್ನು ಹೊರ ಬಿಟ್ಟು ಪಾದಗಳನ್ನು ನೆಲದಿಂದ ಮೇಲೆತ್ತಿ,ಕೈಗಳ ಮೇಲೆ ಸಮತೋಲನ ಮಾಡಿ, ದೇಹವನ್ನು ನಿಲ್ಲಿಸಬೇಕು.ಬಳಿಕ ತೋಳುಗಳನ್ನು ನೀಳವಾಗಿ ನಿಲ್ಲಿಸಿ ಪಾದಗಳನ್ನು ಮೇಲ್ಗಡೆಗೆಯೇ ಜೊತೆ ಸೇರಿಸಿಡಬೇಕು.

5. ಈ ಭಂಗಿಯಲ್ಲಿ ಸಾಮಾನ್ಯ ರೀತಿಯಿಂದ ಉಸಿರಾಡುತ್ತ ಸುಮಾರಿ 20—30  ಸೆಕೆಂಡುಗಳ ಕಾಲ ನಡೆಸಬೇಕು.

6. ಕೊನೆಯಲ್ಲಿ ಉಸಿರನ್ನು ಮತ್ತೆ ಹೊರಕ್ಕೆ ಬಿಟ್ಟು, ಮೊಣಕೈಗಳನ್ನು ಬಗ್ಗಿಸಿ ದೇಹವನ್ನು ನೆಲಕ್ಕಿಳಿಸಿ ಕಾಲುಗಳನ್ನು ಬಿಚ್ಚಿ ಅವುಗಳನ್ನು ಮುಂಗಡಗೆ ನೀಳವಾಗಿ ಚಾಚಿ ವಿಶ್ರಾಂತಿ ಪಡೆಯಬೇಕು.

 ಪರಿಣಾಮಗಳು

     ಈ ಆಸನದಿಂದಾಗುವ ಸತ್ಛಲಗಳೂ ಏಕಹಸ್ತಭುಜಾಸನ ಕ್ಕಿರುವಂತೆಯೇ ಹೌದು.