ಮನೆ ಯೋಗಾಸನ ದ್ವಿಪಾದ ಶೀರ್ಷಾಸನ

ದ್ವಿಪಾದ ಶೀರ್ಷಾಸನ

0

 ‘ದ್ವಿಪಾದ’ ವೆಂದರೆ ಎರಡೂ ಪಾದಗಳು. ತೋರಿಸಿರುವ  ‘ಏಕಪಾದ ಶೀರ್ಷಾಸನ’ದಲ್ಲಿ ಒಂದು ಕಾಲನ್ನು ಮಾತ್ರ ಕತ್ತಿನ ಹಿಂಬದಿಯಲ್ಲಿಟ್ಟರೆ, ಈ ಆಸನದಲ್ಲಿ ಎರಡೂ ಕಾಲುಗಳನ್ನು ಆಸ್ಥಾನದಲ್ಲಿಯೇ ಇರಿಸಿ, ಕೈಗಳೆ ರಡನ್ನೂ ಜೋಡಿಸಿ,ಎದೆಯ ಮುಂಗಡೆಯಟ್ಟು, ಇಡೀ ದೇಹವನ್ನು ಭಿನ್ನಿನಬಾಲವೆನಿಸಿದ ತ್ರಿಕದ ಮೇಲೆಯೇ ಸಮತೋಲನ ಮಾಡಬೇಕು. ಇದು ಕಷ್ಟಕರವಾದದು ಮತ್ತು ಇದರಲ್ಲಿ ಹಿಂದಕ್ಕೆ ಬೀಳುವ ಸಂಭವುಂಟು.  ಈ ಭಂಗಿಯೂ ಕೂಡ, ‘ಯೋಗ ನಿದ್ರಾಸ’ನದ ಭಂಗಿಯನ್ನೇ ಬಹುವಾಗಿ ಹೋಲುತ್ತದಾದರೂ, ಇದರಲ್ಲಿ ದೇಹವು ನೆಟ್ಟಗೆ ನಿಲ್ಲುತ್ತದೆ. ‘ಯೋಗನಿದ್ರಾಸನ’ದಲ್ಲಿ ನೆಲದ ಮೇಲೆ ಒರಗಿರುತ್ತದೆ.

Join Our Whatsapp Group

 ಅಭ್ಯಾಸ ಕ್ರಮ

1. ಮೊದಲು, ನೆಲದ ಮೇಲೆ ಕುಳಿತು,ಕಾಲುಗಳನ್ನು ಮುಂಗಡಗೆ ನೀಳವಾಗಿ ಚಾಕಿರಬೇಕು.

2. ಬಳಿಕ ಎರಡೂ ಮಂಡಿಗಳನ್ನೂ ಬಗ್ಗಿಸಿ, ಪಾದಗಳನ್ನು ಮುಂಡದ ಬಳಿ ತರಬೇಕು.

3. ಅನಂತರ ಉಸಿರನ್ನು ಹೊರ ಬಿಟ್ಟು ಬಲಗಾಲಿನ ಗಿಣ್ಣನ್ನು ಎರಡೂ ಕೈಗಳಿಂದ ಹಿಡಿದುಕೊಂಡು ಮುಂಡವನ್ನು ತುಸು ಮುಂಬಾಗಿಸಿ ಬಲಗಾಲನ್ನು ಕತ್ತಿನ ಹಿಂಬದಿಗೆ ಸೇರಿಸಿಟ್ಟು, ಏಕಪಾದಶೀರ್ಷಾಸನದ ಭಂಗಿಗೆ ತರಬೇಕು. ಆಗ ಬಲ ತೊಡೆಯ ಹಿಂಬದಿಯು ಬಲ ಭುಜದ ಹಿಂಬದಿಯನ್ನು ಮುಟ್ಟಿರುತ್ತದೆ.ಆಮೇಲೆ ಕೈಗಳ ಬಿಗಿತದಿಂದ ಕಾಲ್ಗೀಣನ್ನು ಸಡಿಲಿಸಿ,ಕೆಲವು ಸಲ ಉಸಿರಾಟ ನಡೆಸಬೇಕು

4. ಮತ್ತೆ ಉಸಿರನ್ನು ಹೊರ ಬಿಟ್ಟು, ಎಡಗೈಯಿಂದ ಎಡಗಾಲಗಿಣ್ಣನ್ನು ಹಿಡಿದುಕೊಂಡು, ಎಡತೊಡೆಯನ್ನು ಹಿಂದಕ್ಕೆ ಸೆಳೆದೆತ್ತಿ, ಮೇಲೆ ವಿವರಿಸಿದಂತೆ ಎಡಗಾಲನ್ನು ಬಲಗಾಲ ಮೇಲಿರಿಸಬೇಕು.ಬಳಿಕ ಎಡಗಾಲ ಗಿಣ್ಣಿನ ಮೇಲಣ ಎಡಗೈ ಬಿಗಿತವನ್ನು ಸಡಿಗಿಸಿದರೂ ಗಿಣ್ಣುಗಳ ಬಳಿ ಹೆಣೆದಿಟ್ಟ ಕಾಲುಗಳನ್ನು ಸಡಿಲಿಸಬಾರದು.ಅನಂತರ,ಕೈಗಳನ್ನು ಟೊಂಕಗಳ ಪಕ್ಕದಲ್ಲಿ ನೆಲದಮೇಲಿಟ್ಟು, ತ್ರಿಕದ ಮೇಲೆ ಮಾತ್ರ ನೆಟ್ಟಗೆ ಸಮತೋಲಸ್ಥಿತಿಯಲ್ಲಿ ನಿಲ್ಲಬೇಕು. ಇದಕ್ಕೆ ಅಭ್ಯಾಸದ ಬಲ ಬೇಕು. ಈ ಭಂಗಿಯಲ್ಲಿರುವಾಗ ಸಾಮಾನ್ಯವಾದ ಉಸಿರಾಟ ನಡೆಸಲು ಯತ್ನಿಸಬೇಕು.

5. ಈಗ ಕೈಗಳನ್ನು ನೆಲದಿಂದ ಮೇಲೆತ್ತಿ,ಎದೆಯ ಮುಂಗಡೆ ಜೋಡಿಸಿಟ್ಟು, ಕೆಲವು ಸೆಕೆಂಡುಗಳ ಕಾಲ ದೇಹವನ್ನು ನೆಟ್ಟಗೆ ಮಾಡಿ, ಸಮತೋಲನ ಸ್ಥಿತಿಯಲ್ಲಿಡಬೇಕು.

ಇದು ಈ ಆಸನಭಂಗಿಯಲ್ಲಿಯ ಕಡೆಯ ಹಂತ.

6. ಈ ಭಂಗಿಯಲ್ಲಿದು, ಟೊಂಕಗಳ ಮೇಲೆ ಅಂಗೈಗಳನ್ನು ಊರಿಟ್ಟು, ಬಳಿಕ ಉಸಿರನ್ನು ಹೊರಕ್ಕೆ ದೂಡಿ,ತೋಳುಗಳನ್ನು ನೇರ ಮಾಡಿ ದೇಹದ ಭಾರವನ್ನೆಲ್ಲ ಕೈಗಳಿಗೆ ವಹಿಸಿ,ದೇಹವನ್ನು ಮೇಲೆಕ್ಕೆಳೆದು ಎತ್ತಿಡಬೇಕು ಇಲ್ಲಿ ಕಾಲ್ಗಿಣ್ಣುಗಳ ಹೆಣೆತವನ್ನು ಸಡಿಲಿಸಬಾರದು ಈ ಭಂಗಿಯನ್ನು  10 – 20 ಸೆಕೆಂಡುಗಳಕಾಲ ಅಂದರೆ ಶಕ್ತಿಗಳನುಸಾರವಾಗಿ ಈ ಭಂಗಿಯಲ್ಲಿ ನೆಲೆಸಬೇಕು .

7. ಕಡೆಯಲ್ಲಿ,ಕಾಲ್ಗಿಣ್ಣುಗಳ ಹೆಣೆ ತವನ್ನು ಬಿಚ್ಚಿ ಕಾಲುಗಳನ್ನು ನೆರವಾಗಿ ಮೇಲಕ್ಕೆ ಹಿಗ್ಗಿಸಿ,ಕೈಗಳಮೇಲೆಯೇ ಸಮತೋಲನಮಾಡಿ ನಿಲ್ಲಿಸಬೇಕು. ಇಂಥ ಹಾಸನದ ಹೆಸರು.

 ಟಿಟ್ವಿಭಾಸನ-

ಟಿಟ್ವಿಭ ಎಂದರೆ ಮಿಣುಕುಹುವನ್ನುಳು ಹೋಲುವ ಒಂದು ಬಗೆಯ ಹುಳು.ಅಲ್ಲದೆ ಪೊದೆಯಲ್ಲಿ ವಾಸಿಸುವ ಒಂದು ವಿಧವಾದ ಸಣ್ಣ ಹಕ್ಕಿಗೂ ಈ ಹೆಸರಿದೆ.

    ಈ ಭಂಗಿಯಲ್ಲಿ ಕೆಲವು ಸೆಕೆಂಡುಗಳ ಕಾಲವಿದ್ದು, ಕಾಲುಗಳನ್ನು ಮಂಡಿಗಳಲ್ಲಿ ಭಾಗಿಸಿ ದೇಹವನ್ನು ನೆಲಕ್ಕೆ ತಗ್ಗಿಸಿ,ಕಾಲುಗಳನ್ನು ತೋಳಿನ ತೆಕ್ಕೆಯಿಂದ ಬಿಡಿಸಿ ಅವುಗಳನ್ನು ನೆಲದ ಮೇಲೆ ಮುಂಗಡೆಗೆ ಚಾಚಿ ತುಸುಹೋತ್ತು ವಿಶ್ರಮಿಸಿಕೊಳ್ಳಬೇಕು.

8. ಬೇರೆ ಬಗೆಯಲ್ಲಿಯೂ ಈ ಭಂಗಿಯನ್ನು ಅಂದರೆ ಇದೇ ವಿಧವಾದ ಚಲನವಲನಗಳನ್ನು ಅಷ್ಟೇ ಕಾಲ ಪುನರ್ವರ್ತಿಸಬೇಕು.ಇದರಲ್ಲಿ ಮೊದಲು ಎಡಗಾಲನ್ನು ಕತ್ತಿನ ಹಿಂಬದಿಗೆ ಸೇರಿಸಿ ಬಲಗಾಲನ್ನು ಅದರ ಮೇಲಿರಬೇಕು. ಕೊನೆಗೆ ಹಿಂಬದಿನಂತೆಯೇ ನೆಲದ ಮೇಲೆ ಕುಳಿತು  ವಿಶ್ರಮಿಸಿಕೊಳ್ಳಬೇಕು.

ಪರಿಣಾಮಗಳು

     ಈ ಆಸನದಲ್ಲಿ ಶ್ವಾಸಕೋಶಗಳು ಮತ್ತು ಕಿಬ್ಬೊಟ್ಟೆಯಲ್ಲಿಯ ಮಾಂಸ ಖಂಡಗಳು ಸಂಕುಚಿಸಿ ಬಿಗಿಗೊಳ್ಳುತ್ತವೆ. ಅಲ್ಲದೆ ಬೆನ್ನೆಲುಬು ಪೂರಾ ಮುಂಗಡೆಗೆ ಹಿಗ್ಗುವುದು ಮತ್ತು ಕಿಬ್ಬೊಟ್ಟೆಯಲ್ಲಿನ ಅಂಗಗಳಿಗೆ ಉತ್ತಮವಾದ ವ್ಯಾಯಾಮವು ಈ ಆಸನದಿಂದ ದೊರಕುವುದು. ‘ಯೋಗಾನಿದ್ರಾಸನ’ದಿಂದಾಗುವ ಸತ್ಛಲವು ಈ ಆಸನದಿಂದಲೂ ಸಿಕ್ಕುವುದು.ಆದರೆ ಈ ಆಸನದಲ್ಲಿ ತೊಡೆಗಳು, ಕತ್ತು ಮತ್ತು ಬೆನ್ನೆಲುಬಿನ ಕೆಳಬದಿಯಲ್ಲಿರುವ ತ್ರಿಕಾಸ್ಥಿತಿಯು ನೆಲೆಸಿರುವ ಭಾಗ ಇವು ಅವಕ್ಕಿಂತಲೂ ಹೆಚ್ಚಿನ  ಹಿಗ್ಗಿಗೆ ಒಳಪಡುವುವು.