ಮನೆ ಆರೋಗ್ಯ ಕಾರ್ಯ ದೋಷದ ಚಿತ್ತ ವಿಕಲತೆ

ಕಾರ್ಯ ದೋಷದ ಚಿತ್ತ ವಿಕಲತೆ

0

 ಇಚ್ಚಿತ್ತವಿಕಲತೆಯೇ (ಸ್ಕಿಜೊಫ್ರೀನಿಯಾ) ಸಾಮಾನ್ಯವಾಗಿ ಕಂಡುಬರುವ ಚಿತ್ತ ವಿಕಲತೆ. ಈ ಖಾಯಿಲೆಯಲ್ಲಿ,ಮನಸ್ಸಿನ ವಿವಿಧ ಕ್ರಿಯೆಗಳಲ್ಲಿ ಪರಸ್ಪರ ಹೊಂದಾಣಿಕೆ ಸುವ್ಯವಸ್ಥೆ ಇರುವುದಿಲ್ಲ. ಚಿಕಿತ್ಸೆ ನಡೆಸದಿದ್ದರೆ ಈ ಖಾಯಿಲೆ ಬಹಳ ವರ್ಷಗಳ ಕಾಲ.ಕೆಲವು ಸಾರಿ ಜೀವನ ಪರ್ಯಂತ ರೋಗಿಯನ್ನು ಕಾಡುತ್ತದೆ.

Join Our Whatsapp Group

    ಮೇನಿಯ ವಿಕಲತೆ ಇನ್ನೊಂದು ಬಗೆಯ ಕಾರ್ಯ ದೋಷ ಚಿತ್ತವಿಕಲತೆ. ಇದರಲ್ಲಿ ಎಲ್ಲವೂ ವಿಪರೀತವೇ. ಅತಿಯಾದ ಮಾತು,ವಿಪರೀತ ಚಟುವಟಿಕೆ ಕಾಣಿಸುತ್ತದೆ. ರೋಗಿ ವಿನಾಕಾರಣ ವಿಪರೀತ ಸಂತೋಷಪಡುತ್ತಾನೆ. ತಾನು ಬಹು ದೊಡ್ಡವನೆಂದು ನಂಬಿ ಅದರಂತೆ ನಡೆಯುತ್ತಾನೆ, ಈ ಖಾಯಿಲೆ ಕೆಲವು ವಾರ ಅಥವಾ ಕೆಲವು ತಿಂಗಳುಗಳ ಕಾಲ ಇರುತ್ತದೆ ನಂತರ ಸ್ವಲ್ಪ ಸಮಯದ ನಂತರ ಮತ್ತೆ ಬರಬಹುದು

    ಇದಕ್ಕೆ ವಿರುದ್ಧವಾದ ಕಾಯಿಲೆ ಖಿನ್ನತೆ.ಈ ಖಾಯಿಲೆಯಲ್ಲಿ ವ್ಯಕ್ತಿ ವಿನಾಕಾರಣ ದುಃಖಪಡುತ್ತಾನೆ. ಅಳುತ್ತಾನೆ. ಯಾವುದೇ ಚಟುವಟಿಕೆಯಲ್ಲಿ ಆಸಕ್ತಿ ತೋರಿಸನು. ಜೀವಿಸಿರುವುದರಲ್ಲಿ ಅರ್ಥವಿಲ್ಲ ಎಂದುಕೊಂಡು ಸ್ವಹತ್ಯೆಗೆ ಪ್ರಯತ್ನಿಸ ಬಹುದು. ಇದೂ ಕೂಡಾ ಕೆಲವು ವಾರ ಅಥವಾ ತಿಂಗಳುಗಳಿರುತ್ತದೆ.

    ಅನೇಕ ಸಾರಿ ವ್ಯಕ್ತಿ ಕೆಲವು ಕಾಲ ಮಿನಿಯಾ ವಿಕಲತೆಯಿಂದಲೂ ಕೆಲವು ಕಾಲ ಖಿನ್ನತೆಯಿಂದಲೂ ಸರದಿಯಂತೆ ಬಳಲಬಹುದು.  ಖಾಯಿಲೆಯ ನಡುವೆ ಆತ ಎಲ್ಲರಂತೆ ಚೆನ್ನಾಗಿರುತ್ತಾನೆ.

     ಪ್ರತಿಫಲಿತ ಚಿತ್ತ ವಿಕಲತೆ (ರಿಯಾಕ್ಟಿವ್ ಸೈಕ್ಲೋಸಿಸ್) ವ್ಯಕ್ತಿ ತೀವ್ರ ನಷ್ಟಕ್ಕೀಡಾದಾಗ, ತೀವ್ರವಾದ ನಿರಾಸೆ ಅಥವಾ ವಿಫಲತೆಗೆ ಒಳಗಾದಾಗ ಕಾಣಿಸಿಕೊಳ್ಳುತ್ತದೆ.