ಮನೆ ಮನೆ ಮದ್ದು ಕಿವಿ ನೋವು

ಕಿವಿ ನೋವು

0

1. ಬಾಣಂತಿಯರು ಕಿವಿಯಲ್ಲಿ ಬೆಳ್ಳುಳ್ಳಿಯನ್ನು ಹತ್ತಿಯಲ್ಲಿ ಸುತ್ತಿ ಇಟ್ಟುಕೊಳ್ಳುವ ರೂಢಿ ಮೊದಲಿನಿಂದಲೂ ಇದೆ. ಶೀತ ಗಾಳಿ ಕಿವಿಯಲ್ಲಿ ಪ್ರವೇಶಿಸಿ,ಕಿವುಡಾಗುವುದರಿಂದ ರಕ್ಷಣೆ ಮಾಡಬಹುದು.

Join Our Whatsapp Group

2. ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಸೌಟಿನಲ್ಲಿ ಹಾಕಿ ಬಿಸಿಯಾದಾಗ ಓಮಿನ ಕಾಳನ್ನು ಹಾಕಿ, ಶೋಧಿಸಿಕೊಂಡು ಐದು ತೊಟ್ಟು ಬೆಚ್ಚನೆಯ ಎಣ್ಣೆಯನ್ನು ಹಾಕುವುದರಿಂದ ನೋವು ಕಡಿಮೆಯಾಗುವುದು

3. ಸೌಟಿನಲ್ಲಿ ಎರಡು ಚಮಚ ಕೊಬ್ಬರಿ ಎಣ್ಣೆ ಹಾಕಿ ಅದರಲ್ಲಿ ಪುಡಿ ಮಾಡಿದ ಇಂಗು, ಪುಡಿ ಮಾಡಿದ ಬೆಳ್ಳುಳ್ಳಿ ಹಾಕಿ,ತಣಿಸಿ, ತಣಿಸಿ ಶೋಧಿಸಿ, ಉಗುರು ಬೆಚ್ಚಗಿನ ಎಣ್ಣೆಯನ್ನೇ ಕಿವಿಗೆ ಹಾಕಿದರೆ ನೋವು ನಿವಾರಣೆಯಾಗುತ್ತದೆ.

4. ಕಿವಿಯ ನೋವು ಇದ್ದಾಗ ತುಲಸಿ ರಸವನ್ನು ಹಾಕುವುದರಿಂದ ಅಥವಾ ಈರುಳ್ಳಿ ರಸವನ್ನು ಹಾಕುವುದರಿಂದ ನಿವಾರಣೆ ಆಗುವುದು.

5. ಬೇವಿನ ಸೊಪ್ಪಿನ ರಸವನ್ನು ಒಂದು ಚಮಚ ಕಿವಿಗೆ ಹಾಕಲು ಕ್ರಿಮಿ ಕೀಟಗಳು ನಾಶವಾಗಿ ನೋವು ಮಾಣುವುದು.

6. ಕಿವಿ ಹುಣ್ಣಾಗಿ ನೋವು ಎಂದು ಹೇಳುವ ರೋಗಿಗೆ ತುಳಸಿ ಸೊಪ್ಪಿನ ರಸವನ್ನು ಹಾಕುವುದರಿಂದ ಗುಣವಾಗುವುದು.

7. ಅಡಿಗೆ ಉಪ್ಪನ್ನು ಒಂದು ಒಳಲೆಯ ನೀರಿಗೆ ಒಂದು ಚಿಟಿಕೆ ಹಾಕಿ ಕಿವಿಗೆ ಐದು ತೊಟ್ಟು ಹಾಕುವುದರಿಂದ ನೋವು ಕಡಿಮೆಯಾಗಿ ಕ್ರಿಮಿ ಕೀಟಗಳು ನಾಶವಾಗಿ ಸೋರುವುದು ನಿಂತು ಹೋಗುತ್ತದೆ.

8. ಕಿವಿ ನೋವು ಇರುವಾಗ ಈರುಳ್ಳಿ ರಸ ತುಳಸಿ ರಸಗಳಲ್ಲಿ ಯಾವುದಾದರೂ ಒಂದನ್ನು ಒಂದು ಚಮಚ ಹಾಕುವುದರಿಂದ ನೋವು ನಿವಾರಣೆ ಆಗುವುದು.