ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ ಸೋಮವಾರ ಬೆಳಗ್ಗೆ ಬಂಗಾಳ ಕೊಲ್ಲಿಯಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ.
ಇದರ ಕೇಂದ್ರಬಿಂದು ಮ್ಯಾನ್ಮಾರ್ ಬಳಿ ಬಂಗಾಳ ಕೊಲ್ಲಿಯ ಕೆಳಗೆ ಇದೆ. ಭೂಕಂಪವು 15.32 ಅಕ್ಷಾಂಶ ಮತ್ತು 92.84 ರೇಖಾಂಶದಲ್ಲಿ ಕೇಂದ್ರೀಕೃತವಾಗಿತ್ತು. 10 ಕಿಲೋಮೀಟರ್ ಆಳವಿರುವ ಇದು ಭಾರತದ ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿದೆ.
2023 ಜೂನ್ 05ರಂದು 07:40:23ಕ್ಕೆ 3.9 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು15.32 ಅಕ್ಷಾಂಶ ಮತ್ತು 92.84 ರೇಖಾಂಶದಲ್ಲಿದ್ದು 10 ಕಿಮೀ ಆಳಹೊಂದಿದೆ. ಇದು ಬಂಗಾಳಕೊಲ್ಲಿಯಲ್ಲಿ ಕೇಂದ್ರ ಬಿಂದು ಇದೆ.
ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಆ ಸಮಯದಲ್ಲಿ, ಢಾಕಾ ಮತ್ತು ಬಾಂಗ್ಲಾದೇಶದ ಇತರ ಭಾಗಗಳಲ್ಲಿ ಕಂಪನದ ಅನುಭವವಾಯಿತು.