ಈ ಜಗತ್ತಿನಲ್ಲಿರುವ ಮಾನವರು ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶಗಳೆಂಬ ಪಂಚಭೂತಗಳಿಂದಾದ ಶರೀರವನ್ನು ಹೊಂದಿದ್ದಾರೆ. ಎಲ್ಲಾ ನಕ್ಷತ್ರ ಕಾಯಗಳಲ್ಲಿ ಜನರು ಅಥವಾ ಪ್ರಾಣಿಗಳಿರುವುದರ ಸುಳಿವು ಸಿಕ್ಕಿಲ್ಲ. ಕೇವಲ ಭೂಮಿಯಲ್ಲಿ ಮಾತ್ರವೇ ನಾನಾ ರೀತಿಯ ಪ್ರಾಣಿಗಳು, ಸಸ್ಯಗಳು, ಜಲಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಜೊತೆಗೆ ಮಾನವರು ಇರುವದು ಕಂಡುಬಂದಿರುವುದು. ಗೃಹನಕ್ಷತ್ರ ಮತ್ತು ಆಕಾಶಕಾಯಗಳ ಪ್ರಭಾವವು ಭೂಮಿಯಲ್ಲಿನ ಸಸ್ಯ, ಪ್ರಾಣಿ ಮತ್ತು ಮಾನವರ ಮೇಲೆ ಯಾವ ರೀತಿ ಆಗುವದು ಎಂಬುದು ಸಂಶೋಧನೆಯ ವಿಷಯವಾಗಿದೆ.
ಬೇರೆ ಯಾವುದಾದರೂ ನಕ್ಷತ್ರಕಾಯ, ಗ್ರಹಗಳಲಿನ ಮಾನವರಿದ್ದಾರೆಯೇ?, ಪ್ರಾಣಿಗಳಿವೆಯೇ ? ಎಂಬ ಶೋಧನೆ ನಿರಂತರ ನಡೆದು ಬಂದಿರುವುದು. ವೇದಕಾಲದಿಂದಲೂ ಋಷಿಮುನಿಗಳು ಈ ಕಾರ್ಯ ಮಾಡುತ್ತಿದ್ದರು. ಇಂದು ವಿಜ್ಞಾನಿಗಳ ಸಹ ಸಂಶೋಧನೆ ಮುಂದುವರಿಸಿದ್ದಾರೆ. ವಿಶ್ವದಲ್ಲಿ ಇಂದು ರಾಕೆಟ್ ಅನ್ನು ಉಪಯೋಗಿಸಿ ಉಪಗ್ರಹಗಳನ್ನು ಹಾರಿಸಿ ಅನ್ಯಗ್ರಹಗಳ ಶೋಧನಾ ಕಾರ್ಯ ಮಾಡಲಾಗುತ್ತಿದೆ.
ನಮ್ಮ ಜೀವನದಲ್ಲಿ ಯಾವುದೇ ಕಾರ್ಯವನ್ನು ಆರಂಭಿಸುವಾಗ ಅನುಕೂಲವಾದ ಗ್ರಹ ಕಾರ್ಯಗಳ ಬಲವನ್ನು ನೋಡಿಯೇ ಕಾರ್ಯ ಮಾಡುವದನ್ನು ಪ್ರಗತಿಶೀಲ ಕಾರ್ಯವೆಂದು ನಂಬಲಾಗಿದೆ. ಪ್ರತಿದಿನ ಮಾಡುವ ಕೆಲಸದಲ್ಲಿ ಸರಿಯಾದ ಫಲಸಿಗದಿದ್ದಾಗ ಭವಿಷ್ಯದಲ್ಲಿ ಆಸಕ್ತಿ ಮೂಡಿ ಗ್ರಹ, ತಾರೆಗಳ ಕಡೆಗೆ ಮಾನವನ ಮನಸ್ಸು ಓಡುತ್ತದೆ. ಉನ್ನತವಾದ ಅಧ್ಯಯನ ಸಾಮರ್ಥ್ಯ ಹೊಂದಿದ ವಿಜ್ಞಾನವೂ ಸಹ ಈ ಗ್ರಹ ನಕ್ಷತ್ರಗಳ ಶೋಧನೆಯನ್ನು ಸತತ ನಡೆಸಿರುವುದು. ಭೂಮಿಯಲ್ಲಿ ಮಾತ್ರವೇ ಜನರಿರುವದು ಬೇರೆಯಲ್ಲಿಯೂ ಜನರಿಲ್ಲ ಇದ್ದರೂ, ಇದೇ ರೀತಿ ಇದ್ದಾರೆ ಎಂದು ಸಂಶೋಧನೆ ನಡೆದಿದೆ. ಭೂಮಿಯನ್ನು ಬಿಟ್ಟು ಮಂಗಳಗ್ರಹ, ಗುರುಗ್ರಹ, ಚಂದ್ರಲೋಕ ಮತ್ತು ಶನಿಗ್ರಹಗಳಲ್ಲಿ ಸಂಶೋಧನೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಈ ಭೂಮಿಯಲ್ಲಿ ಅಭಿವೃದ್ಧಿ ಹೊಂದಿದ ವಿಜ್ಞಾನವು ಯಕ್ಷ, ಕಿನ್ನರ, ಇಂದ್ರಲೋಕ ಹಾಗೂ ದೇವತೆಗಳ ರೂಪದಲ್ಲಿರುವ ಯಾವುದೇ ಅಜ್ಞಾತ ಜೀವಿಗಳೊಂದಿಗೆ ಸಮನ್ವಯವನ್ನು ಸಾಧಿಸಲು ಸಾಧ್ಯವೇ ಎಂಬುದನ್ನು ತಿಳಿಯಬಯಸಿದೆ.
ಬೇರೆ ಯಾವುದಾದರೂ ನಕ್ಷತ್ರಕಾಯದಲ್ಲಿರುವ ಆತ್ಮಗಳು ನಮ್ಮ ಸನಿಹದಲ್ಲಿಯೇ ದಲ್ಲಿ ಅಕ್ಕಪಕ್ಕದಲ್ಲಿಯೇ ಇದ್ದರೂ ಇರಬಹುದು ಎಂಬ ನಂಬಲಾಗಿದೆ. ಈ ಪುಸ್ತಕದಲ್ಲಿ ಅನೇಕ ಸಾವಿರವರ್ಷಗಳಿಂದ ಅನೇಕ ಶಾಸ್ತ್ರಗಳ ಮೂಲಕವಾಗಿ ಕಂಡು ಹಿಡಿದ ತತ್ವಗಳನ್ನು ಅಧ್ಯಯನ ಮಾಡುವ ಇಚ್ಛೆಯನ್ನು ಪ್ರಕಟಿಸಲಾಗಿದೆ.
ಹೇಗೆ ಭೂಮಿಯಲಿನ ವಾತಾವರಣವು ವಿಭಿನ್ನ ರೀತಿಯ ವನಸ್ಪತಿ, ಮಣ್ಣು, ನೀರು, ಗಾಳಿ, ಉಷ್ಣತೆಯನ್ನು ಹೊಂದಿ ಪ್ರಾಣಿಗಳ ಹಾಗೂ ಸಸ್ಯಗಳ ಜೀವನಕ್ಕೆ ಹೇಗೆ ಅನುಕೂಲವಾಗಿರುವುದೋ ಅದೇ ರೀತಿ ಆಕಾಶ ಗಂಗೆಯಲ್ಲಿ ನಕ್ಷತ್ರಗಳ ಸಮೂಹವೇ ಇರುವುದು. ಸೌರಮಂಡಲದ ಗ್ರಹ ಮಂಡಳಿಯು ತಮ್ಮ ನಿರ್ಧಾರಿತ ಗತಿಯಲ್ಲಿದ್ದರೂ ಭೂಮಂಡಲವನ್ನು ಜ್ಯೋತಿರ್ಮಯವಾಗಿಸುತ್ತದೆ.
ಇದು ಮಾನವನು ರಾಕೆಟ್ ಯುಗವನ್ನು ಪ್ರವೇಶಿಸಿದ್ದಾನೆ. ಆಂತರಿಕ್ಷದಲ್ಲಿ ಉಪಗ್ರಹ ಕೇಂದ್ರವನ್ನು ಮಾಡಿಕೊಂಡಿದ್ದಾನೆ. ಬೇರೆ ಗ್ರಹಗಳಲ್ಲಿ ಇರಬಹುದಾದ ಮಾನವರನ್ನು ಹುಡುಕುತ್ತಲಿದ್ದಾನೆ. ಅದೇ ರೀತಿ ನಕ್ಷತ್ರ ಯುದ್ಧದ ತಯಾರಿಯನ್ನು ಸಹ ಮಾಡುತ್ತಲಿದ್ದಾನೆ. ಭೂಮಿಯ ಸನಿಹದಲ್ಲಿರುವ ಗ್ರಹದಲ್ಲಿ ಮಾನವನು ಅಸ್ತಿತ್ವವನ್ನು ಕಲ್ಪಿಸಿಕೊಂಡಿದ್ದಾನೆ.
ಈ ಚರಾಚರ ಜಗತ್ತಿನ ಮೂಲ ಕೇಂದ್ರ ಬಿಂದು ಸೂರ್ಯನಾಗಿದ್ದಾನೆ. ದೂರದ ತಾರೆಗಳ ಜ್ಯೋತಿಯನ್ನು ಪ್ರತಿಫಲಿಸಿ, ಭೂಮಿಯಲ್ಲಿ ಪಂಚ ತತ್ವಗಳನ್ನು ಸೃಷ್ಟಿಸಿ ಈ ಸಂಸಾರವನ್ನು ಕ್ರಿಯಾಶೀಲವನ್ನಾಗಿಸಿದ್ದಾನೆ.
ಸೂರ್ಯನ ಶಕ್ತಿಯನ್ನು ತಳಿಯಲು ಸಾವಿರಾರು ವರ್ಷಗಳಲ್ಲಿ ಮಾಡಿದ ಕಾರ್ಯವು ಸಾಗರದಲ್ಲಿರುವ ಒಂದು ಹನಿಯಷ್ಟಾಗಿರುವುದು. ವಿಜ್ಞಾನ ಮತ್ತು ಜ್ಯೋತಿಷ್ಯಗಳ ಮೂಲಕವಾಗಿ ಜನನ ಮತ್ತು ಮರಣಗಳನ್ನು ತಿಳಿಯುವಂತಾದರೆ ಈ ಜೀವನದ ರಹಸ್ಯವನ್ನು ತಿಳಿದ ಸಾಧನೆ ನಮ್ಮದಾಗುವುದು.
ಆಕಾಶ ಗಂಗೆಯಲ್ಲಿರುವ ನಕ್ಷತ್ರ ಸಮುದಾಯದ ಬಗೆಗೆ ನಮ್ಮ ಪುರಾಣ ಕಥೆಗಳು, ಯುನಾನಿ, ಮಿಶ್ರದೇಶದ ಅಭಿಪ್ರಾಯಗಳು ಅದೇ ರೀತಿ ಪಾಶ್ಚಾತ್ಯರ ಸಂಖ್ಯಾ ವಿಶೇಷ ಜ್ಞಾನವು ವಿಮರ್ಶೆಯ ವಿಷಯವಾಗಿರುವದು. ಚಂದ್ರನ ಮೇಲೆ ಬಿದ್ದು ಪ್ರತಿಫಲಿತವಾದ ಬೆಳಕು ಭೂಮಂಡಲದ ಜೀವಿಗಳ ಮೇಲೆ ಪ್ರಭಾವ ಬೀರುವುದೆಂಬುದನ್ನು ಜ್ಯೋತಿಷ್ಯಶಾಸ್ತ್ರ ಮಾತ್ರವಲ್ಲ ವಿಜ್ಞಾನವು ಸಹ ಒಪ್ಪಿಕೊಂಡಿರುವುದು.
ಆಕಾಶ ಗಂಗೆಯಲ್ಲಿರುವ ದೂರದ ಆಕಾಶ ಕಾಯಗಳನ್ನ ನಕ್ಷತ್ರಗಳೆಂದು ತಿಳಿಯಲಾಗಿದೆ. ಈ ನಕ್ಷತ್ರಗಳ ಜಗತ್ತಿನಿಂದ ನಮಗೆ ಬರುವ ಸಂದೇಶವು ಚಂದ್ರನ ಮೂಲಕವಾಗಿ ಭೂಮಿಯನ್ನು ತಲುಪುವುದು. ನಕ್ಷತ್ರಗಳು, ರಾಶಿಗಳು ಇವುಗಳ ಪ್ರಭಾವವು ಭೂಮಿಗೆ ವಿಕಿರಣಗಳ ರೂಪದಲ್ಲಿ ಬಂದು ಮುಟ್ಟುವುದೆಂದು ನಂಬಲಾಗಿದೆ.
ಭೂಮಿಯಲ್ಲಿರುವ ಮನುಷ್ಯ ಕಾಲಪುರುಷನಾಗಿ ನಕ್ಷತ್ರ, ಸೂರ್ಯ, ಮತ್ತು ಚಂದ್ರರೊಂದಿಗೆ ಸೇರಿ ಗತಶೀಲನಾಗಿ ಒಂದೇ ಮಂಡಲದಲ್ಲಿದ್ದಾನೆ. ಇದರಲ್ಲಿ ಅನೇಕ ಗುಣಗಳು ಮತ್ತು ದೋಷಗಳು ಅಡಗಿರುವವು. ನಕ್ಷತ್ರಗಳ ಬಗೆಗೆ ನಮ್ಮ ಹಿಂದಿನ ವಿದ್ವಾಂಸರು ತಿಳಿದು ಯಾವ ರೀತಿ ಮಾನ್ಯತೆ ನೀಡಿದ್ದರು. ಅದಕ್ಕೆ ಇಂದು ಹೊಸ ಅಂಶಗಳು ಸೇರಿಕೊಂಡಿವೆ.
ನಕ್ಷತ್ರಗಳ ಪಾರ್ಯಾವರಣ ಮತ್ತು ಭೌತಿಕ ಗುಣಗಳು ಮಾನವರ ಮೇಲೆ ಯಾವ ರೀತಿ ಪರಿಣಾಮವನ್ನುಂಟು ಮಾಡುತ್ತದೆ ಎಂಬುದರ ತುಲಾನಾತ್ಮಕ ಅಧ್ಯಯನ ಈ ಗ್ರಂಥದಲ್ಲಿರುವದು. ವಿಶ್ವದ ಎಲ್ಲಾ ಧರ್ಮದವರೂ ಭಿನ್ನಸಂಸ್ಕೃತಿಯವರು ಸಹ ತಮ್ಮ ವ್ಯವಹಾರಗಳನ್ನು ಆರಂಭಿಸುವ ಸಮಯದಲ್ಲಿ ಒಳ್ಳೆಯದು, ಕೆಟ್ಟದ್ದು ಎಂದು ಸಮಯದ ಬಗ್ಗೆ ಲಕ್ಷವಹಿಸುತ್ತಾರೆ. ವಿಜ್ಞಾನಿಗಳು ಸಹ ಹವಾಮಾನದಲ್ಲಿ ಅನುಕೂಲವಾದ, ಪ್ರತಿಕೂಲವಾದ ವಾತಾವರಣ ವಾತಾವರಣಗಳನ್ನ ಮೊದಲೇ ನಿರ್ಧರಿಸಿ ಕಾರ್ಯಕ್ರಮವನ್ನು ಕೈಗೊಳ್ಳುತ್ತಾರೆ. ರಾಕೆಟ್ ಉಡಾವಣೆಯ ಕಾಲವನ್ನು ನಿರ್ಧರಿಸುತ್ತದೆ. ಹಿಂದೆ ಯುನಾಲಿ ನಾವಿಕರು ತಮ್ಮ ಏಷ್ಯನ್ ಅಥವಾ ಯುರೋಪ್ ನೌಕಯಾತ್ರೆಯನ್ನು ಆರಂಭಿಸುವಾಗ ಶುಭಮಹೂರ್ತ ಹುಡುಕಿಯೇ ಹೊರಡುತ್ತಿದ್ದರು.
ಭಾರತದಲ್ಲಿ ವೈದಿಕ ಯುಗದಲ್ಲಿಯೇ ಪ್ರಥಮವಾಗಿ ಮನು ಮಹರ್ಷಿ ಮಹೂರ್ತಗಳ ಬಗೆಗೆ ಹೇಳಿದ್ದಾರೆ. ಪ್ರಾಚೀನ ಕಾಲದಲ್ಲಿ ಶಿಕ್ಷಣವನ್ನು ಆರಂಭಿಸುವಾಗಲೂ ದೀಕ್ಷ ಸಮಾರಂಭವನ್ನು ಮುಹೂರ್ತ ನೀಡಿಯೇ ನಿರ್ಧರಿಸುತ್ತಿದ್ದರು. ಶ್ರೀರಾಮನು ರಾವಣನೊಂದಿಗೆ ಯುದ್ಧವನ್ನು ಮಾಡುವಾಗ ಶುಭ ಮುಹೂರ್ತವನ್ನು ನೋಡಿಯೇ ಕಾರ್ಯಾರಂಭ ಮಾಡಿದ್ದನು. ಈ ವಿಷಯವು ವಾಲ್ಮೀಕಿ ರಾಮಾಯಣ ಮತ್ತು ತುಳಸಿ ರಾಮಾಯಣಗಳಲ್ಲಿ ಕಂಡುಬರುತ್ತದೆ.
ಭಾರತದಲ್ಲಿ ಇಂದೂ ಸಹ ಮಾನವನಿಗೆ 16 ಸಂಸ್ಕಾರಗಳನ್ನು ನೀಡುವಾಗ ಶುಭ ಮುಹೂರ್ತ ನೋಡಿಯ ನಿರ್ಧರಿಸುತ್ತಾರೆ. ಅನ್ನಪ್ರಾಶಾನ, ಉಪನಯನ, ವಿವಾಹ, ಗೃಹಪ್ರವೇಶ, ಮುಂತಾದವುಗಳಲ್ಲಿ ಶುಭ ಮಹೂರ್ತಕ್ಕೆ ಬಹಳ ಪ್ರಶಸ್ತ ಕೊಡುತ್ತಾರೆ. ಹೀಗೆ ಶುಭ ಅಥವಾ ಅಶುಭ ತಿಥಿಗಳು ನಮ್ಮ ಕ್ರಿಯಾ ಚಟುವಟಿಕೆಗಳೊಂದಿಗೆ ನೇರ ಸಂಬಂಧಗಳನ್ನು ಹೊಂದಿವೆ.
ಪಂಚಾಂಗವೆಂದರೆ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರ್ಣಗಳೆಂದು ತಿಳಿಯಲಾಗುವುದು. ಈ ಪಂಚಾಂಗದ ಮೂಲಕವಾಗಿ ವರ್ಷ ಆರಂಭದಲ್ಲಿ ಮಳೆ, ಬೆಳೆಯ ವಿಚಾರವನ್ನು ತಿಳಿಯುವರು. ಸೂರ್ಯೋದಯ, ಸೂರ್ಯಾಸ್ತಗಳ ಬಗೆಗೆ ಜನರು ತಿಳಿಯುವರು. ಗ್ರಹಣಗಳ ಸಮಯದಲ್ಲಿ ಪುಣ್ಯ ಸ್ನಾನ, ಭಕ್ತಿ ಸೇವೆ, ಪೂಜೆ, ಜಪ, ಕೈಗೊಳ್ಳುವರು ಹಬ್ಬ ಹರಿದಿನಗಳನ್ನು ಆಚರಿಸುವರು.
ಈ ರೀತಿಯಲ್ಲಿ ನಕ್ಷತ್ರ ರಾಶಿ ಹಾಗೂ ಗ್ರಹಗಳ ವಿಚಾರವು ನಮ್ಮ ಜೀವನದೊಂದಿಗೆ ಸೇರಿಕೊಂಡಿರುವುದು ಮಾನವನ ಭವಿಷ್ಯದ ಕಲ್ಪನೆಯಲ್ಲಿ ಸಹಾಯಕವಾಗಿರುವುದು.