ಮನೆ ರಾಷ್ಟ್ರೀಯ ದೆಹಲಿಯ ಎನ್‌ ಸಿಆರ್‌, ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪ

ದೆಹಲಿಯ ಎನ್‌ ಸಿಆರ್‌, ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪ

0

ನವದೆಹಲಿ: ದೆಹಲಿಯ ಎನ್‌ ಸಿಆರ್‌ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಭೂಕಂಪ ಸಂಭವಿಸಿದೆ.

ಭೂ ಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.1ರಷ್ಟಿದ್ದು, ಭೂಕಂಪದ ಕೇಂದ್ರ ಸ್ಥಾನ ಅಫ್ಘಾನಿಸ್ತಾನದ ಹಿಂದೂಕುಶ್‌ ಪ್ರದೇಶ ಎಂದು ಗುರುತಿಸಲಾಗಿದೆ. ಉತ್ತರ ಭಾರತ ಹಾಗೂ ನೆರೆಯ ಪಾಕಿಸ್ತಾನದಾದ್ಯಂತ ಭೂಕಂಪನದಿಂದ ಜನರು ಬೆಚ್ಚಿಬಿದ್ದಿರುವುದಾಗಿ ವರದಿ ವಿವರಿಸಿದೆ.

ಇಂದು ಮಧ್ಯಾಹ್ನ ಭೂಕಂಪನ ಸಂಭವಿಸಿದ್ದು, ನೋಯ್ಡಾ, ಘಾಜಿಯಾಬಾದ್‌ ಮತ್ತು ಗುರ್ಗಾಂವ್‌ ನಲ್ಲಿ ಪರಿಣಾಮ ಹೆಚ್ಚಿದ್ದು, ಜನರು ಮನೆ ಮತ್ತು ಕಚೇರಿಯಿಂದ ಹೊರಗೆ ಓಡಿಬಂದಿರುವುದಾಗಿ ವರದಿ ವಿವರಿಸಿದೆ.

ಭೂಗರ್ಭ ಶಾಸ್ತ್ರ ಇಲಾಖೆ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ತುರ್ತು ಅಗತ್ಯ ಸೇವೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.