Saval TV on YouTube
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಭೂಕಂಪನ ಅನುಭವವಾಗಿದೆ.
ಭೂಮಿ ಕಂಪನದಿಂದ ಕಟ್ಟಡಗಳಲ್ಲಿರುವವರಿಗೆ ನಡುಕದ ಅನುಭವ ಉಂಟಾಗಿದ್ದು, ಈ ವಲಯದಲ್ಲಿ ಅನೇಕರು ಮನೆಯಿಂದ ಓಡಿ ಬಂದಿದ್ದಾರೆ.
ಉತ್ತರಾಖಂಡ, ನೇಪಾಳದಲ್ಲಿ ಭೂಕಂಪ ಉಂಟಾಗಿದ್ದು ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ. ಇದರ ಪರಿಣಾಮ ದೆಹಲಿಯಲ್ಲಿ ಭೂಕಂಪನ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.














