ಮನೆ ರಾಜ್ಯ ಟರ್ಕಿಯಲ್ಲಿ ಭೂಕಂಪ ಸಂತ್ರಸ್ತರಿಗೆ ನೆರವಿಗೆ ಭಾರತ ನಿಲ್ಲಲಿದೆ: ಪ್ರಧಾನಿ ಮೋದಿ

ಟರ್ಕಿಯಲ್ಲಿ ಭೂಕಂಪ ಸಂತ್ರಸ್ತರಿಗೆ ನೆರವಿಗೆ ಭಾರತ ನಿಲ್ಲಲಿದೆ: ಪ್ರಧಾನಿ ಮೋದಿ

0

ಬೆಂಗಳೂರು(Bengaluru): ಟರ್ಕಿಯಲ್ಲಿ ಭೀಕರ ಭೂಕಂಪದಿಂದ ಮೃತರಾದವರಿಗೆ ಸಂತಾಪ ಸೂಚಿಸಿ, ಸಂತ್ರಸ್ತರ ನೆರವಿಗೆ ಭಾರತ ನಿಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಲ್ಲಿನ‌ ಮಾದಾವರದ ಬಳಿಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಸೋಮವಾರ ಆರಂಭವಾದ ಭಾರತ ಇಂಧನ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ವಿಷಯ ಪ್ರಸ್ತಾಪಿಸಿದರು.

ಟರ್ಕಿಯಲ್ಲಿ ಭೀಕರ ಭೂಕಂಪದಿಂದ ಹಲವರು ಮೃತಪಟ್ಟಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಸಂತ್ರಸ್ತರ ಪರವಾಗಿ ಭಾರತದ 140 ಕೋಟಿ ಜನರು ಇದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲ ನೆರವು ಒದಗಿಸಲು ಸಿದ್ಧ ಎಂದರು.

ಹಿಂದಿನ ಲೇಖನಹಸಿರು ಇಂಧನ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ: ಪ್ರಧಾನಿ ಮೋದಿ
ಮುಂದಿನ ಲೇಖನಕರ್ನಾಟಕ ಹೈಕೋರ್ಟ್’ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ವಿಜಯಕುಮಾರ್ ಪಾಟೀಲ್, ರಾಜೇಶ್ ರೈ ನೇಮಕ