ಗುವಾಹಟಿ, ಅಸ್ಸಾಂ: ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ 5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ NCS ತಿಳಿಸಿದೆ.
ಅಷ್ಟೇ ಅಲ್ಲ ರಾಜಧಾನಿ ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲೂ ಕಂಪನದ ಅನುಭವವಾಗಿದೆ.
ಭೂಕಂಪವು ಭೂಮಿಯ 16 ಕಿಲೋಮೀಟರ್ ಆಳದಲ್ಲಿ ಆಗಿದ್ದು, ತಡರಾತ್ರಿ ಸುಮಾರು 2:25 ಗಂಟೆಗೆ ಈ ಕಂಪನ ಸಂಭವಿಸಿದೆ ಎಂದು ಭೂಕಂಪ ಮಾನಿಟರಿಂಗ್ ಏಜೆನ್ಸಿ ಮೂಲಗಳು ತಿಳಿಸಿವೆ. ಭೂಕಂಪನ ಚಟುವಟಿಕೆಯ ಕೇಂದ್ರಬಿಂದು ಮತ್ತು ಪ್ರಭಾವದ ಬಗ್ಗೆ ವಿವರಗಳು ತಕ್ಷಣವೇ ಸ್ಪಷ್ಟವಾಗಿಲ್ಲ.
ರಿಕ್ಟರ್ ಮಾಪಕದಲ್ಲಿ 5 ರ ತೀವ್ರತೆ ದಾಖಲಾಗಿದ್ದು, ಈ ಭೂಕಂಪವನ್ನು ಮಧ್ಯಮ ತೀವ್ರತೆಯ ಕಂಪನ ಎಂದು ಪರಿಗಣಿಸಲಾಗುತ್ತದೆ. ಭೂಮಿ ಕಂಪಿಸಿದ್ದರಿಂದ ಮನೆಯ ಒಳಾಂಗಣ ವಸ್ತುಗಳು ಅಲುಗಾಡಿರುವುದು ಕಂಡು ಬಂದಿದೆ. ಈ ಭೂಕಂಪ ದೊಡ್ಡ ಶಬ್ದ ಮತ್ತು ಸಣ್ಣ ಹಾನಿ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ.
Saval TV on YouTube