ಮನೆ ರಾಷ್ಟ್ರೀಯ ಎಷ್ಟು ಲಂಚ ತಿನ್ನುತ್ತೀಯಾ ತಿನ್ನು; ಅಧಿಕಾರಿಯ ಮೇಲೆ ಹಣ ಎಸೆದು ಆಕ್ರೋಶ ಹೊರಹಾಕಿದ ಜನ

ಎಷ್ಟು ಲಂಚ ತಿನ್ನುತ್ತೀಯಾ ತಿನ್ನು; ಅಧಿಕಾರಿಯ ಮೇಲೆ ಹಣ ಎಸೆದು ಆಕ್ರೋಶ ಹೊರಹಾಕಿದ ಜನ

0

ಅಧಿಕಾರಿ ತನ್ನ ಕಚೇರಿಯಲ್ಲಿ ಕೆಲಸ ಕಾರ್ಯಗಳಿಗೆ ಕಚೇರಿಗೆ ಬಂದ ಜನರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ, ಅಧಿಕಾರಿಯ ಕಾರ್ಯವೈಖರಿಯಿಂದ ಬೇಸತ್ತ ಜನರು ಅಧಿಕಾರಿಯ ಕಚೇರಿಗೆ ತೆರಳಿ ತಮ್ಮ ತಮ್ಮ ಕೈಯಲ್ಲಿದ್ದ ಹಣವನ್ನು ಅಧಿಕಾರಿಯ ಮೇಲೆ ಎಸೆದು ಎಷ್ಟು ದುಡ್ಡು ಬೇಕು ತಿನ್ನು… ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Join Our Whatsapp Group

ಅಂದಹಾಗೆ ಈ ವಿಡಿಯೋ ಗುಜರಾತ್ ಗೆ ಸೇರಿದ್ದು ಎನ್ನಲಾಗಿದ್ದು, ಇಲ್ಲಿನ ಸರಕಾರಿ ಕಚೇರಿಯಲ್ಲಿರುವ ಅಧಿಕಾರಿಯೊಬ್ಬರು ಕೆಲಸ ಕಾರ್ಯಗಳಿಗಾಗಿ ಬಂದ ಜನರಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ.

ಇದರಿಂದ ಬೇಸತ್ತ ಜನ ಒಗ್ಗಟ್ಟಾಗಿ ಸರಕಾರಿ ಕಚೇರಿಗೆ ಬಂದು ಕುತ್ತಿಗೆಗೆ ಘೋಷಣೆಗಳ ನಾಮಫಲಕವನ್ನು ನೇತು ಹಾಕಿಸಿಕೊಂಡು ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ವಿಡಿಯೋ ದಲ್ಲಿ ಜನರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಅಧಿಕಾರಿ ಕೈ ಮುಗಿದು ಕುಳಿತಿರುವುದು ಕಂಡುಬಂದಿದೆ.

ಜೊತೆಗೆ ಸೇರಿದ್ದ ಜನ ಗುಜರಾತಿ ಭಾಷೆಯಲ್ಲಿ ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡಿರುವುದು ಕಾಣಬಹುದು. ಅಲ್ಲದೆ ಜನರು ತಂದಿರುವ ಕಂತೆ ಕಂತೆ ಹಣವನ್ನು ಭ್ರಷ್ಟ ಅಧಿಕಾರಿಯ ಮೇಲೆ ಸುರಿಯುತ್ತಿರುವುದು ಕಾಣಬಹುದು ಆದರೆ ಇದು ಯಾವ ಸರಕಾರಿ ಕಚೇರಿಯಲ್ಲಿ ನಡೆದಿರುವುದು ಎಂಬುದು ಮಾತ್ರ ಸ್ಪಷ್ಟ ಇಲ್ಲ, ವಿಡಿಯೋ ಮಾತ್ರ ವೈರಲ್ ಆಗುತ್ತಿದೆ.