ಅ) ಎನರಿಕ್ಸಿಯಾ ನರ್ವೋಸ್ :- ಕೆಲವು ಮಕ್ಕಳು ಬೇಕಾಗಿಯೇ ಊಟವನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಬಹಳ ತೂಕ ಕಳೆದುಕೊಳ್ಳುತ್ತವೆ, ಮಗು ಕ್ಷೀಣಿಸುತ್ತದೆ, ಕೆನ್ನೆಗಳು ಕುಳಿ ಬೀಳುತ್ತವೆ, ಕಣ್ಣುಗಳು ಒಳಕ್ಕೆ ಹೋಗುತ್ತವೆ. ಚರ್ಮ ಮೂಳೆಗೆ ಅಂಟಿಕೊಳ್ಳುತ್ತದೆ.
ಈ ಸಮಸ್ಯೆ ಇರುವ ಮಕ್ಕಳನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ಮಾಡಬೇಕು ಇಂತಹವರಿಗೆ ಬಿಹೇವಿಯರ್ ಥೆರಪಿ ಬಹಳ ಉತ್ತಮ. ಆಂಟಿಡಿಪ್ರೆಶನ್ ಔಷಧಿಗಳ ಅಗತ್ಯವೂ ಇದೆ.
ಆ) ಬುಲೀಮಿಯಾ ನರ್ವೋಸ್ :- ಈ ಸಮಸ್ಯೆ ಇರುವ ಮಕ್ಕಳು ಹೊಟ್ಟೆ ತುಂಬಾ ಎಲ್ಲವನ್ನು ತಿನ್ನುತ್ತಾರೆ. ಆದರೆ, ತಿಂದದ್ದೆಲ್ಲ ಕಕ್ಕುತ್ತಾರೆ ತಿಂದ ಆಹಾರ ಮೈಗೆ ಹಿಡಿದರೆ ದಪ್ಪ ಆಗುತ್ತೇನೆ ಎಂಬ ಭಯ. ಮನಸ್ಸನ್ನು ನಿಯಂತ್ರಿಸಲಾಗದೆ, ಹೊಟ್ಟೆ ತುಂಬಾ ತಿನ್ನುತ್ತಾರೆ. ಆದರೆ ತೆಳ್ಳಗಿರಬೇಕೆಂಬ ಭಾವನೆಯಿಂದ ತಿಂದದ್ದನ್ನೆಲ್ಲಾ ವಾಂತಿ ಮಾಡುತ್ತಾರೆ. ಇದರಿಂದ ಆರೋಗ್ಯ ಕ್ಷೀಣಿಸುತ್ತದೆ. ಇಂತಹ ಈಟಿಂಗ್ ಡಿಸಾರ್ಡರ್ ಇರುವ ಮಕ್ಕಳಿಗೆ ಬಿಹೇವಿಯರ್ ಥೆರಪಿ ಅಗತ್ಯವೂ ಇದೆ.
ಒಂದು ವರ್ಷದೊಳಗಿನ ಮಕ್ಕಳ ಬೆಳವಣಿಗೆ :-
ಮಕ್ಕಳು ಹುಟ್ಟಿದಾಗ 2.8 ರಿಂದ 3.5 ಕೆಜಿ ಇರುತ್ತಾರೆ. ಮೂರು ತಿಂಗಳ ತುಂಬುವರೆಗೆ ಪ್ರತಿ ತಿಂಗಳು ಅರ್ಧ ಕೆಜಿಯಂತೆ ತೂಕ ಹೆಚ್ಚಾಗುತ್ತದೆ. 3 ರಿಂದ 6 ತಿಂಗಳವರೆಗೆ ಪ್ರತಿ ತಿಂಗಳು ಕಾಲು ಕೆಜಿಯಂತೆ ತೂಕ ಹೆಚ್ಚಾಗುತ್ತದೆ. ಒಂದು ವರ್ಷ ತುಂಬಿದಾಗ ಹುಟ್ಟಿದಾಗ ಇದ್ದ ತೂಕ ಮೂರು ಪಟ್ಟು ಹೆಚ್ಚಾಗಿರುತ್ತದೆ.