ಸ್ಟಾಕ್’ಹೋಮ್: ಅಮೆರಿಕದ ಮೂವರು ಅರ್ಥಶಾಸ್ತ್ರಜ್ಞರಿಗೆ 2022 ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಸಂದಿದೆ.
ಬೆನ್ ಡೆನ್ಮಾರ್ಕ್, ಡಗ್ಲಾಸ್ ಡೈಮಂಡ್, ಫಿಲಿಫ್ ಡಿಬ್‌ವಿಗ್ ಅವರಿಗೆ ಅರ್ಥಶಾಸ್ತ್ರದ ನೊಬೆಲ್ ಸಂದಿದೆ.ಈ ಮೂವರು ಅರ್ಥಶಾಸ್ತ್ರಜ್ಞರು ಆರ್ಥಿಕತೆಯಲ್ಲಿ ಬ್ಯಾಂಕುಗಳ ಪಾತ್ರ ಎಂಬ ವಿಷಯವಾಗಿ ಮಹಾ ಪ್ರಬಂಧ ಮಂಡಿಸಿದ್ದರು.
ವಿಶೇಷವಾಗಿ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಬ್ಯಾಂಕುಗಳು ಮಹತ್ವ ಏನು ಎಂಬುದರ ಬಗ್ಗೆ ವಿಸ್ತಾರವಾಗಿ ಈ ಮೂವರು ಅರ್ಥಶಾಸ್ತ್ರಜ್ಞರು ಸಂಶೋಧನೆ ನಡೆಸಿದ್ದರು. ರಾಯಲ್ ಸ್ವಿಡಿಶ್ ಅಕಾಡೆಮಿ ಸೋಮವಾರ ಈ ಘೋಷಣೆ ಮಾಡಿದೆ.