ನವದೆಹಲಿ(New Delhi): ಚೀನಾ(China) ಮೂಲದ ಸ್ಮಾರ್ಟ್ಫೋನ್ ತಯಾರಿಕಾ(ಟೆಲಿಕಾಂ)(Telecom) ಕಂಪನಿ (Companny) ಶಿವೋಮಿ(Xiomi) ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಬರೋಬ್ಬರಿ 5,551 ಕೋಟಿ ರೂಪಾಯಿ ವಶಕ್ಕೆ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಈ ಅತಿದೊಡ್ಡ ಕಾರ್ಯಾಚರಣೆ ನಡೆಸಲಾಗಿದೆ.
1999ರ ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ಈ ದಾಳಿ ನಡೆಸಲಾಗಿದ್ದು, ಶಿವೋಮಿಯ ನಾಲ್ಕು ಬ್ಯಾಂಕ್ಗಳ ಖಾತೆಯಲ್ಲಿದ್ದ ಇಷ್ಟೊಂದು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯ ಕಳೆದ ಒಂದು ತಿಂಗಳ ಕಾಲ ಸುದೀರ್ಘ ತನಿಖೆ ನಡೆಸಿದ್ದು, ಇದೀಗ ಇಷ್ಟೊಂದು ಹಣ ವಶಪಡಿಸಿಕೊಂಡಿದೆ.
ಇದು ವಾರ್ಷಿಕವಾಗಿ ಭಾರತದಲ್ಲಿ 34,000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ.
ದಾಳಿ ಬಳಿಕ ಮಾತನಾಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಹೆಚ್ಚಿನ ಹಣವನ್ನ ಕಂಪನಿ ಈಗಾಗಲೇ ಚೀನಾದಲ್ಲಿರುವ ತನ್ನ ಸಮೂಹ ಸಂಸ್ಥೆಗಳಿಗೆ ರವಾನೆ ಮಾಡಿದೆ. ಸದ್ಯ 5,551 ಕೋಟಿ ರೂಪಾಯಿ HSBC, ಸಿಟಿ ಬ್ಯಾಂಕ್, IDBI ಮತ್ತು Deutsche ಬ್ಯಾಂಕ್ನಿಂದ ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ.