ಮನೆ ಕಾನೂನು ಮುಡಾ ಕಚೇರಿಯಲ್ಲಿ ಶೋಧ ಮುಂದುವರೆಸಿದ ಇಡಿ

ಮುಡಾ ಕಚೇರಿಯಲ್ಲಿ ಶೋಧ ಮುಂದುವರೆಸಿದ ಇಡಿ

0

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯದ ತನಿಖಾ ತಂಡವು ಶನಿವಾರ ಶೋಧ ಮುಂದುವರಿಸಿದೆ.

Join Our Whatsapp Group

ಶುಕ್ರವಾರ ರಾತ್ರಿ ಮುಡಾ ಕಚೇರಿ ಒಳಗೇ ತಂಗಿದ್ದ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಶನಿವಾರ ಬೆಳಿಗ್ಗೆಯಿಂದಲೇ ತನಿಖೆ ಮುಂದುವರಿಸಿದ್ದಾರೆ. ಕಚೇರಿಯ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದ್ದು, ಒಳಗೆ ತನಿಖಾ ತಂಡವು 50:50 ನಿವೇಶನ ಹಂಚಿಕೆಗೆ ಸಂಬಂಧಿಸಿದ ಪ್ರತಿ ಮಾಹಿತಿಯನ್ನೂ ಕಲೆಹಾಕುತ್ತಿದೆ. ಈ ಸಂದರ್ಭ ಕೆಲವು ಮೂಲ ದಾಖಲೆಗಳು ನಾಪತ್ತೆ ಆಗಿದ್ದು, ಆ ಸಂಬಂಧ ಅಧಿಕಾರಿಗಳನ್ನು ಇ.ಡಿ. ಪ್ರಶ್ನಿಸಿದೆ ಎನ್ನಲಾಗಿದೆ.

ಮುಡಾದ ಹಿಂದಿನ ಆಯುಕ್ತರಾದ ಜಿ.ಟಿ. ದಿನೇಶ್‌ಕುಮಾರ್‌ ಹಾಗೂ ಡಿ.ಬಿ. ನಟೇಶ್ ಅವರನ್ನು ವಿಚಾರಣೆಗೆ  ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.