ಮನೆ ರಾಷ್ಟ್ರೀಯ ರಾಹುಲ್ ಗಾಂಧಿಗೆ ಮತ್ತೆ ಸಮನ್ಸ್ ಜಾರಿ: ಇಂದು ಮತ್ತೆ ವಿಚಾರಣೆ

ರಾಹುಲ್ ಗಾಂಧಿಗೆ ಮತ್ತೆ ಸಮನ್ಸ್ ಜಾರಿ: ಇಂದು ಮತ್ತೆ ವಿಚಾರಣೆ

0

ನವದೆಹಲಿ (New Delhi): ನ್ಯಾಷನಲ್ ಹೆರಾಲ್ಡ್ ಪ್ರಕರಣದ ಅಕ್ರಮ ಹಣ ವರ್ಗಾವಣೆಗೆ ಸಂಬಂದಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮತ್ತೆ ಸಮನ್ಸ್ ಜಾರಿ ಮಾಡಲಾಗಿದೆ.

ನಾಲ್ಕನೇ ದಿನದ ವಿಚಾರಣೆ ನಂತರವೂ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತೆ ಸಮನ್ಸ್ ನೀಡಿದ್ದು, ಇಂದು (ಮಂಗಳವಾರ) ಅವರನ್ನು ಮತ್ತೆ ವಿಚಾರಣೆಗಾಗಿ ಹಾಜರಾಗಲು ತಿಳಿಸಿದೆ. ರಾಹುಲ್‌ ಗಾಂಧಿ ಅವರನ್ನು 4 ದಿನಗಳಲ್ಲಿ ಸುಮಾರು 40 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮಾಡಲಾಗಿದೆ.

ಕಳೆದ ವಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸತತ ಮೂರು ದಿನಗಳ ವಿಚಾರಣೆಯ ನಂತರ, ಇಡಿ ಸೋಮವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮತ್ತೆ ವಿಚಾರಣೆ ನಡೆಸಿತ್ತು. ಬಳಿಕ ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ಸೋಮವಾರ, ಮಂಗಳವಾರ ಮತ್ತು ಬುಧವಾರ ಸತತ ಮೂರು ದಿನಗಳ ಕಾಲ ಇಡಿ ಅಧಿಕಾರಿಗಳು ರಾಹುಲ್ ಗಾಂಧಿಯನ್ನು 30 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ಅವರ ಹೇಳಿಕೆಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾಗಿದೆ.

ಹಿಂದಿನ ಲೇಖನಇಂದಿನ ಹವಾಮಾನ ವರದಿ
ಮುಂದಿನ ಲೇಖನಮೈಸೂರಿನಲ್ಲಿ ಪ್ರಧಾನಿ ಮೋದಿ ಯೋಗ: ಯೋಗದಿಂದ ವಿಶ್ವ ಶಾಂತಿ