ಮನೆ ಮನರಂಜನೆ ‘ಎದ್ದೇಳು ಮಂಜುನಾಥ 2’ ಟೀಸರ್ ಬಿಡುಗಡೆ

‘ಎದ್ದೇಳು ಮಂಜುನಾಥ 2’ ಟೀಸರ್ ಬಿಡುಗಡೆ

0

ನಿರ್ದೇಶಕ ಗುರುಪ್ರಸಾದ್ ಅವರ ಕೊನೆಯ ಚಿತ್ರ ‘ಎದ್ದೇಳು ಮಂಜುನಾಥ 2’ ಫೆಬ್ರುವರಿ 21 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಎದ್ದೇಳು ಮಂಜುನಾಥ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಗುರುಪ್ರಸಾದ್ ಎದ್ದೇಳು ಮಂಜುನಾಥ 2 ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರದ ಬಿಡುಗಡೆಗೂ ಮುನ್ನವೇ ನಿರ್ದೇಶಕರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಿರ್ಮಾಪಕರು ಬಾಕಿ ಉಳಿದಿದ್ದ ಕಾರ್ಯಗಳನ್ನು ಪೂರ್ಣಗೊಳಿಸಿ ಯೋಜನೆಯನ್ನು ತೆರೆಗೆ ತರಲು ಹರಸಾಹಸ ಪಟ್ಟಿದ್ದಾರೆ.

Join Our Whatsapp Group

ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮಾರ್ಗವನ್ನು ಅನುಸರಿಸುವ ಬದಲು, ಟೀಸರ್‌ಗಳ ರೂಪದಲ್ಲಿ ಚಿತ್ರದ ತುಣುಕುಗಳನ್ನು ಹೊರತರುವ ಮೂಲಕ ಸಂಚಲನ ಮೂಡಿಸಲು ಚಿತ್ರತಂಡ ನಿರ್ಧರಿಸಿದೆ. ‘ಕಿತ್ತೋದ ಪ್ರೇಮ’ ಹಾಡಿನ ಬಿಡುಗಡೆಯ ನಂತರ, ಚಿತ್ರತಂಡ ಇದೀಗ ಮೊದಲ ಟೀಸರ್ ಬಿಡುಗಡೆ ಮಾಡಲು ಸಜ್ಜಾಗಿದೆ.

ಮೈಸೂರು ರಮೇಶ್ ನಿರ್ಮಾಣದ ಎದ್ದೇಳು ಮಂಜುನಾಥ 2 ಚಿತ್ರಕ್ಕೆ ಗುರುಪ್ರಸಾದ್ ಅವರ ಬಹುತೇಕ ಎಲ್ಲ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ಅನೂಪ್ ಸೀಳಿನ್ ಅವರ ಸಂಗೀತವಿದೆ. ಅಶೋಕ್ ಸಾಮ್ರಾಟ್ ಅವರ ಛಾಯಾಗ್ರಹಣವಿದೆ. ಎದ್ದೇಳು ಮಂಜುನಾಥ ಚಿತ್ರದಲ್ಲಿ ನಾಯಕನಾಗಿ ಜಗ್ಗೇಶ್ ಕಾಣಿಸಿಕೊಂಡಿದ್ದರು. ಈ ಬಾರಿ ಗುರುಪ್ರಸಾದ್ ಅವರೇ ಬಣ್ಣ ಹಚ್ಚಿದ್ದರೆ, ನಾಯಕಿಯಾಗಿ ರಚಿತಾ ಮಹಾಲಕ್ಷ್ಮಿ ಕಾಣಿಸಿಕೊಂಡಿದ್ದಾರೆ. ರಂಗನಾಯಕದಲ್ಲಿಯೂ ರಚಿತಾ ನಾಯಕಿಯಾಗಿದ್ದರು. ಚಿತ್ರದ ತಾರಾಗಣದಲ್ಲಿ ಶರತ್ ಲೋಹಿತಾಶ್ವ, ಚೈತ್ರಾ ಆಚಾರ್, ವಿಘ್ನೇಶ್ ಕತ್ತಿ ಮುಂತಾದವರು ಇದ್ದಾರೆ.