ಮೈಸೂರು: ಇಂದಿನ ಮಕ್ಕಳು ಇಂದಿನ ಪ್ರಜೆಗಳು. ಸಂಸ್ಥೆಯ ಹೆಸರೇ ತಿಳಿಸುವಂತೆ ಶಿಕ್ಷಣ ಮತ್ತು ಆರೋಗ್ಯ ಪ್ರಸ್ತುತ ದಿನಮಾನದಲ್ಲಿ ತುಂಬಾ ಪ್ರಮುಖವಾಗಿದೆ. ಇದಕ್ಕೆ ತಕ್ಕಂತೆ ಸಂಸ್ಥೆಯು ಅಂಬೇಡ್ಕರ್ ನಗರ ವನ್ನು ಆಯ್ಕೆಮಾಡಿ ಶಿಕ್ಷಣ ಮತ್ತು ಆರೋಗ್ಯ ಸಾಮಗ್ರಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯ. ಎಲ್ಲಾ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ನಿರಂತರವಾಗಿ ಶಾಲೆಗೆ ಬರಬೇಕು ಎಂದು ಶಿಕ್ಷಣ ಸಂಯೋಜಕ ಕುಮಾರಸ್ವಾಮಿ ತಿಳಿಸಿದರು.
ಕಿರಿಯ ಪ್ರಾಥಮಿಕ ಶಾಲೆ, ಅಂಬೇಡ್ಕರ್ ನಗರ ಮೈಸೂರು ತಾಲೂಕು ಇಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಉಧ್ಘಾಟನೆ ಮಾಡಿ ಮಾತನಾಡಿದರು.
RLHP ಸಂಸ್ಥೆ ನಿರ್ದೇಶಕರು ಸರಸ್ವತಿ ಮಾತನಾಡಿ, ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತಿದ್ದು, ವಿಶೇಷವಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಕ್ಲೂಬರ್ ಲೂಬ್ರಿಕೇಶನ್ ಪ್ರೈವೇಟ್ ಲಿಮಿಟೆಡ್ ಮೈಸೂರು ಇವರ ಸಹಯೋಗದೊಂದಿಗೆ ನಿಂಗರಾಜನಕಟ್ಟೆ, ಅಂಬೇಡ್ಕರ್‌ನಗರ, ಸಾತಗಳ್ಳಿ ಮತ್ತು ಹಂಚ್ಯಾ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ಅಂಬೇಡ್ಕರ್ ನಗರದಲ್ಲಿ ಕಂಪ್ಯೂಟರ್, ಶುದ್ದ ಕುಡಿಯುವ ನೀರಿನ ಮಿಷನ್, ನಲಿಕಲಿ ಮಕ್ಕಳಿಗೆ ಟೇಬಲ್ ಮತ್ತು ಕುರ್ಚಿಗಳ ವ್ಯವಸ್ಥೆ, ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಲಾಗಿದೆ. ಇವುಗಳೊಂದಿಗೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ನೈರ್ಮಲ್ಯ, ಓದುವ ಹವ್ಯಾಸ, ಗ್ರಂಥಾಲಯಗಳ ಬಳಕೆ, ಚಂದದ ಪ್ರೆರಣಾ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನವೋದಯ ಮತ್ತು ಮೊರಾರ್ಜಿದೇಸಾಯಿ ಶಾಲೆಗಳ ಪರೀಕ್ಷೆಗಾಗಿ ತರಬೇತಿ, ಆರೋಗ್ಯ ಶಿಬಿರ ಮತ್ತು ಆರೋಗ್ಯ ಅರಿವಿನ ಕಾರ್ಯಕ್ರಮ ಹೀಗೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 70 ಮಕ್ಕಳಿಗೆ ಸಾಮಗ್ರಿಗಳನ್ನು ವಿತರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರು ವಸಂತ, ಭಗವಾನ್, ರಾಮುಶೆಟ್ಟಿ, ಗೋಪಿನಾಥ್, ಸಂಸ್ಥೆಯ ಸಂಯೋಜಕರಾದ ಶಶಿಕುಮಾರ್ ಎಸ್.ಡಿ.ಎಂ.ಸಿ ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು.