ಮನೆ ಪೌರಾಣಿಕ ದಕ್ಷ ವಂಶಾಭಿವೃದ್ಧಿ:  ಭಾಗ ಎರಡು

ದಕ್ಷ ವಂಶಾಭಿವೃದ್ಧಿ:  ಭಾಗ ಎರಡು

0

    ಈ ರೀತಿ ಪದೇ ಪದೇ ಪುತ್ರ ಸಂತಾನವು ನಾಶವಾಗುತ್ತಿದ್ದರಿಂದ ದಕ್ಷ ಪ್ರಜಾಪತಿಯು ಮತ್ತೆ ವೈತರಣಿಯ ಗರ್ಭದಲ್ಲಿ  ಅರವತ್ತು ಹೆಣ್ಣು ಮಕ್ಕಳನ್ನು ಹೆತ್ತು ಅವರನ್ನು  ಪ್ರೀತಿಯಿಂದ ಬೆಳೆಸಿದನು, ದಕ್ಷನ ಪುತ್ರಿಯರಲ್ಲಿ ಹತ್ತು ಪುತ್ರಿಯರನ್ನು ಅಂದರೆ ವಿಶ್ವ, ಸಾಧ್ಯ, ಅರುಂಧತಿ, ಭಾನವಿ, ಮುಹೂರ್ತ, ಅರುಣ, ಯಾಮಿ, ಮರುದ್ವತ್ತೀ,  ವಸುವು, ಸಂಕಲ್ಪರೆಂಬುವವರನ್ನು ಧರ್ಮನು  ವಿವಾಹವಾದನು. ನಂತರ ದಕ್ಷನ ಪುತ್ರಿಯಾರಾದ ಅಧಿತಿ,ದಿತಿ, ಧನು, ಅರಿಷ, ಸುರಸ ಶ್ವಸನ, ಸುರಭಿ, ವಿನತ, ತಾಮ್ರ, ಕ್ರೋಧ, ವಶ, ಕದ್ರುವ,ಮುನಿ, ಈ ಹದಿಮೂರು ಪುತ್ರಿಯರನ್ನು ಕಶ್ಯಪ ಪ್ರಜಾಪತಿಯು ವಿವಾಹವಾದನು.ಪ್ರಜಾಪತಿಯ ಉಳಿದ ಇಪ್ಪತ್ತೇಳು ಪುತ್ರಿಯರಾದ ಅಶ್ವಿನಿ,ಭರಣೀ, ಕೃತಿಕ, ರೋಹಿಣಿ ಮೃಗಶಿರ, ಆರ್ದಾರ,ಪುನರ್ವಸು, ಪುಷ್ಪ, ಆಶ್ಲೇಷ, ಜನಕ,ಪಾಲ್ಗುಣೀ,ಉತ್ತರ ಪಾಲ್ಗುಣೀ, ಹಸ್ತ, ಚಿತ್ರ, ಸ್ವಾತಿ,ವಿಶಾಖ, ಅನೂರಾಧ,ಜೇಷ್ಠ, ಮೂಲ,ಪೂರ್ವಾಷಾಡ, ಉತ್ತರಾಷಾಡ, ಶ್ರೋಣ, ಶ್ರವಿಷ್ಠ, ಪ್ರಚೇತಸ, ಪೂರ್ವಪ್ರೋಷ್ಕಾಪದ, ಉತ್ತರಪ್ರೋಷ್ಕಾಪದ ರೇವತೀ ಎಂಬುವವರನ್ನು ಚಂದ್ರನ್ನು ವಿವಾಹವಾಗಿ ವಂಶಾಭಿವೃದ್ಧಿಯನ್ನು ಪಡೆದನು.

Join Our Whatsapp Group

     ದಕ್ಷ ಪ್ರಜಾಪತಿಯು ತನ್ನ ಸಂತಾನದಲ್ಲಿನ ಆರು ಪುತ್ರಿಯರನ್ನು ಅರಿಷ್ಠನೇಮಿಗೆ ಕೊಟ್ಟನು.ಅವರಿಗೆ ಹದಿನಾರು  ಜನ ಸಂತಾನವಾಯಿತು.ಅವರಲ್ಲಿ ಇಬ್ಬರನ್ನು ಬಹುಪುತ್ರನು, ಅಂಗೀರಸನು ವಿವಾಹವಾದರು.

     ದಕ್ಷನ ಹಿರಿಯ ಅಳಿಯನಾದ ಧರ್ಮನು ಹತ್ತು ಜನ ಪತ್ನಿಯರಲ್ಲಿ ವಿಶ್ವಳಿಗೆ ವಿಶ್ವಾದೇವತೆಗಳು ಹನ್ನೆರಡು ಜನರು ಜನಿಸಿದರು.ಸಾಧ್ಯಳಿಗೆ ಜನಿಸಿದ ಸಂತಾನಕ್ಕೆ ಸಾಧ್ಯರೆಂಬ ಹೆಸರು ಬಂದಿತು.ಅರುಣಳು ಅರುಣ್ವಂತರನ್ನು ಹೇತಳು. ಭಾನವಿಗೆ ಬಾನು ಹುಟ್ಟಿದನು. ಮೂಹೂರ್ತಗಳಿಗೆ ಮೂಹೂರ್ತ ದೇವತೆಗಳು ಜನಿಸಿ ದೇವತೆಗಳಾದರು ಮರುದ್ವತಿಗೆ ಮರುದ್ಗಣಗಳು ಹುಟ್ಟಿದವು. ಸಂಕಲ್ಪನಡಿಗೆ ಸಂಕಲ್ಪನೆಂಬ ಗಂಡು ಮಗನಾದನು.ಅರುಂಧತಿಗೆ ಪೃಥ್ವಿ ವಿಷಯರುಜನಿಸಿದರು. ವಸುವಿಗೆ ಅಷ್ಟವಸುರೆಂಬ  ಎಂಟು ಜನ ಗಂಡು ಮಕ್ಕಳಾದರು. ಅವರೇ ಅಪು, ಧ್ರುವ, ಸೋಮ ಧವ, ಅನಿಲ,ಅನಲ,ಪೃತ್ಯೂಷ, ಪ್ರಭಾಸರು.  ವಸುವರಲ್ಲಿ ಅಗ್ರಜನಾದ ಅಪುವಿಗೆ ನಾಲ್ವರು ಗಂಡು ಮಕ್ಕಳು. ವೈತ್ರಂಡ್ಯನು, ಶ್ರಮನು,ಶ್ರಾಂತನು ಮತ್ತು ಧ್ವನಿ. ಧ್ರುವನಿಗೆ ಜನಿಸಿದ ಮಗನೇ ಕಾಲನ್ನು ಭೂತ, ಭವಿಷ್ಯ, ವರ್ತಮಾನಗಳನ್ನೇ ಶರೀರವನ್ನಾಗಿ ಧರಿಸಿ ಕಾಲಸ್ವರೂಪವಾಗಿ ಪ್ರಸಿದ್ಧಿಯನ್ನು ಪಡೆದನು.ಸೋಮನಿಗೆ ವರ್ಚಸ್ಸು ಎಂಬುವನು ಉದಯಿಸಿದನು. ಆತನ ಮಗನೇ ವರ್ಚಸ್ವಿ. ಧವನು ಮಿಂಚಿನಂತೆ ಭ್ರಮೆಯನ್ನುಂಟು ಮಾಡುವ ಸೌಂದರ್ಯ ರಾಶಿ ಮನೋಹರಳನ್ನು ವಿವಾಹವಾದನು. ಅವರಿಗೆ ದ್ರಾವಿಣನು, ಹೃತಹವ್ಯನು, ಶಿಶಿರನು, ಪ್ರಣನು, ರಮಣನು, ಎಂಬ ಐವರು ಪುತ್ರರು ಜನಿಸಿ ಅಪಾರ ಶಕ್ತಿಸಂಪನ್ನರಾದರು.ಅನಿಲನನ್ನು ಶಿವ ಎಂಬಾಕೆಯನ್ನು ಸ್ವೀಕರಿಸಿ ಇಬ್ಬರು ಪುತ್ರನನ್ನು ಹೇತನು.ಅವರಲ್ಲಿ ಮನೋಜನವನು.ಮಾನವರ ಸಂಕಲ್ಪಗಳಲ್ಲಿಯೂ, ಅವಿಜ್ಞಾತಗತಿ ಅನೂಹ್ಯ ವೇಗದಲ್ಲಿಯೂ  ನಿವೇಶಿತ ಶರೀರರಾಗಿ ಚಿರಂಜೀವಿಗಳಾದರು. ಅನಲನ ಮಗನಾದ ಕುಮಾರನು ಸಸ್ಯರ ಶರಸ್ತಂಬದಲ್ಲಿ ಉದಯಿಸಿದನು ಅವನಿಗೆ ನಾಲ್ವರು ಗಂಡುಮಕ್ಕಳು ಶಾಖ,ವಿಶಾಖ, ನೈಗಮೇಯ, ಪುಷ್ಕಜರು. ಪ್ರತ್ಯೂಷನು ರುಷೋ ಉದ್ಯೋಶನು ತಪೋಧನನಾಗಿ ಮಹರ್ಷಿ ಪದವಿಯನ್ನು ಅಲಂಕರಿಸಿದನು. ಆತನ ಸುತನಾದ ದೇವತೆಗಳ ಮಹರ್ಷಿಗೆ ವೇದ ವೇದಾಂಗ ಪಾರಂಗತರಾದ ಶ್ರಮ ಕ್ಷಮಾವರ್ತನು,ಮನಸ್ವಿಯರು ಜನಿಸಿದರು.

ಹಿಂದಿನ ಲೇಖನಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ವಕೀಲ ದೇವರಾಜೇಗೌಡಗೆ ಜಾಮೀನು
ಮುಂದಿನ ಲೇಖನವನ್ಯಜೀವಿ ತಜ್ಞ ಉಲ್ಲಾಸ್‌ರ ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ ವಜಾಗೊಳಿಸಿದ್ದ ಕೇಂದ್ರದ ಆದೇಶ ರದ್ದುಪಡಿಸಿದ ಹೈಕೋರ್ಟ್‌