ಬೆಂಗಳೂರು: ನವೀನ್ ಗದಯಾನಗೌಡರ್ ಮೃತದೇಹವನ್ನು ಉಕ್ರೇನ್ ಶವಾಗಾರದಲ್ಲಿ ಸಂರಕ್ಷಿಡಲಾಗಿದೆ. ಅದನ್ನು ಭಾರತಕ್ಕೆ ತರಲು ಸರ್ವ ಪ್ರಯತ್ನ ಮಾಡಲಾಗಿತ್ತಿದೆ
ಎಂದು ವಿದೇಶಾಂಗ ಸಚಿವರು ತಮಗೆ ತಿಳಿಸಿದ್ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು .
ಉಕ್ರೇನ್ ನಲ್ಲಿ ಈಗ ಶೆಲ್ ದಾಳಿ ನಡೆಯುತ್ತಿದೆ. ದಾಳಿ ನಿಂತ ಕೂಡಲೇ ಮೃತದೇಹವನ್ನು ತರುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಭಾರತೀಯ ರಾಯಭಾರಿ ಕಚೇರಿಯವರೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಈ ವಿಚಾರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಅವರು ತಿಳಿಸಿದರು.