1. ವೀರ್ಯಸ್ಖಲನವಾಗುತ್ತಿದ್ದಾಗ ರಾತ್ರಿ ಮಲಗುವಾಗ ದೇವರನ್ನು ಧ್ಯಾನ ಮಾಡುತ್ತಾ ದೇವರ ಕತಗಳನ್ನು ಕೇಳಿ ಮಾನನ ಮಾಡುತ್ತಾ ಮಲಗಿದರೆ ವೀರ್ಯಸ್ಖಲನ ನಿಂತುಹೋಗುವುದು.
2. ಪ್ರತಿದಿನ ತರಕಾರಿಗಳಲ್ಲಿ ಸೋರೆಕಾಯಿಯ ಕಡಬು, ಹುಳಿ, ಪಲ್ಯವನ್ನು ಮಾಡಿ ಸೇವಿಸುವುದರಿಂದ ವೀರ್ಯ ಸ್ಖಲನ ಹೆಸರಿಲ್ಲದೆ ಹೋಗುವುದು.
3. ಮಾನಸಿಕ ಬದ್ರತೆಯೇ ಮುಖ್ಯ ಭಾವತೀತ ಧ್ಯಾನ, ಯೋಗ, ಒಳ್ಳೆಯ ನಡೆನುಡಿ,ಸ್ತ್ರೀಯರ ಮುಖವನ್ನು ನೋಡದೆ ಕಾಲನ್ನು ಮಾತ್ರ ನೋಡುತಾ ಅಕ್ಕ, ತಂಗಿಯ ಭಾವನೆ ಬೆಳೆಸಿದರೆ ವೀರ್ಯಸ್ಖಲನ ನಿಂತು ಹೋಗುವುದು. 4. ವೀರ್ಯಸ್ಖಲನ ನಿಲ್ಲಲು ಜೇನುತುಪ್ಪದಲ್ಲಿ ಸಪೋಟ ಹಣ್ಣನ್ನು ಮಿಶ್ರ ಮಾಡಿ ಸೇವಿಸಿದರೆ ಹೇಳ ಹೆಸರಿಲ್ಲದೆ ಗುಣವಾಗುವುದು.
5. ವೀರ್ಯಸ್ಖಲವನ್ನು ತಹ ಬಂದಿಗೆ ತರುವ ಏಕೈಕ ಪದಾರ್ಥ ಗೋಡಂಬಿಯನ್ನು ಸೇವಿಸುತ್ತ, ಮನಸ್ಸನ್ನು ಕಾಮದೆಡೆಗೆ ತಿರುಗಿಸದೆ, ಧ್ಯಾನ, ಯೋಗ, ವೇದಾಂತದಲ್ಲಿ ಕಾಲಹರಣ ಮಾಡುವುದು ರಾತ್ರಿ ಮಲಗಿದ ಮೇಲೆ ಅಕಸ್ಮಾತ್ ಬೆಳಗಿನ ಜಾವ ಎಚ್ಚರವಾದರೆ ಎದ್ದ ತಕ್ಷಣ ತಣ್ಣೀರು ಸ್ನಾನ ಮಾಡಿ. ಅಧ್ಯಯನ ಪ್ರಾರಂಭಿಸಬೇಕು. ವಿರ್ಯಸ್ಖಲನಕ್ಕೆ ಬೆಳಗಿನ ಜಾವ ಅದರ ಉಲ್ಬಣ ಹೆಚ್ಚು.
ವೀರ್ಯಸ್ಥಂಬನಕ್ಕೆ
1. ಬಿಳಿ ಕಣಗಿಲು ಬೇರಿನ ತೊಗಟೆಯ ಚೂರ್ಣವನ್ನು ನೀರಿನಲ್ಲಿ ಕಲಸಿ ಲಿಂಗಕ್ಕೆ ಲೇಪಿಸುವ ವೀರ್ಯಸ್ಥಂಬನವಾಗುವುದು.
ಶ್ವಾಸಕೋಶದ ರೋಗ:-
1. ಪ್ರಾಣಾಯಾಮವನ್ನು ಪ್ರತಿದಿನವೂ ಮಾಡುತ್ತಾ ನೀರು ಕುಡಿಯಬೇಕೆಂದಾಗ ಬಿಸಿ ನೀರನ್ನೇ ಕುಡಿಯುತ್ತಾ ಬರಲು ಶ್ವಾಸಕೋಶ ರೋಗ ಪರಿಹಾರವಾಗುವುದು.
2. ಜೇನುತುಪ್ಪ ಒಂದು ಚಮಚದ ಚಕ್ಕೆ,ಕೊತ್ತಂಬರಿ ಸೊಪ್ಪಿನ ರಸ ಸೇರಿಸಿ ರಾತ್ರಿ ಮಲಗುವಾಗ ಕುಡಿದು ಮಲಗಿದರೆ ಶ್ವಾಸಕೋಶದ ತೊಂದರೆ ಇರುವುದಿಲ್ಲ.
3. ಹಾಲು ಕುರುಟಿಗೇ ಸೊಪ್ಪನ್ನು ಅರೆದು, ನೀರಿನಲ್ಲಾಗಲೀ ಹಾಲಿನಲ್ಲಾಗಲೀ ಸೇವಿಸಿದರೆ ಶ್ವಾಸಕೋಶ ರೋಗ ಹಾರವಾಗುತ್ತದೆ.