‘ಏಕಹಸ್ತ’= ಒಂದು ಕೈ ಭುಜದ= ತೋಳು, ಹೆಗಲು.
ಅಭ್ಯಾಸ ಕ್ರಮ
1. ಮೊದಲು ನೆಲದ ಮೇಲೆ ಕುಳಿತು, ಮುಂಭಾಗಕ್ಕೆ ಕಾಲುಗಳನ್ನು ನೀಳವಾಗಿ ಚಾಚಿರಬೇಕು.
2. ಬಳಿಕ,ಉಸಿರನ್ನು ಹೊರ ಹೋಗಿಸಿ ಬಲಗಾಲನ್ನು ಮಂಡಿಯಲ್ಲಿ ಭಾಗಿಸಿ, ಬಲಗೈಯಿಂದ ಆ ಕಾಲನ್ನು ಗಿಣ್ಣಿನ ಹತ್ತಿರ ಬಿಗಿಯಾಗಿ ಹಿಡಿದು, ಅದನ್ನು ಬಲ ಮೇಲ್ದೋಳಿನ ಹಿಂಬದಿಗೆ ಒರಗಿಸಿಟ್ಟು ಬಲದಂಗಾಲನ್ನು ಎಡಮಂಡಿಯ ಮೇಲೆರಿಸಬೇಕು. ಆಮೇಲೆ ಬಲತೊಡೆಯ ಹಿಂಬದಿಯು ಬಲಗೈ ಮೊಲ್ದೋಳಿನ ಹಿಂಬದಿಯನ್ನು ಮುಟ್ಟಿಕೊಂಡಿರುತ್ತದೆ.ಇದನ್ನು ಸಾಧ್ಯವಾದಷ್ಟು ಎತ್ತರ ಮಾಡಬೇಕು.
3. ಅನಂತರ, ಅಂಗೈಗಳನ್ನು ನೆಲದಮೇಲೂರಿ ಉಸಿರನ್ನು ಹೊರದುಡುತ್ತ, ಇಡೀ ದೇಹವನ್ನು ನೆಲದಿಂದ ಮೇಲೆತ್ತಿ, ಸಮತೋಲನ ಸ್ಥಿತಿಯಲ್ಲಿ ನಿಲ್ಲಿಸಬೇಕು.
4. ಆ ಭಂಗಿಯಲ್ಲಿ, ಸಮವಾಗಿ ಉಸಿರಾಟ ನಡೆಸುತ್ತ ಸುಮಾರು 20 30 ಸೆಕೆಂಡುಗಳ ಕಾಲ ನೆಲೆಸಬೇಕು.
5. ಆ ಬಳಿಕ,ಎಡಗಾಲನ್ನು ನೇರವಾಗಿಸಿ, ನೆಲದಮಟ್ಟಕ್ಕೆ ಅದನ್ನು ಸಮಾಂತರವಾಗಿರಿಸಿಯೇ ಸಮತೋಲನದಲ್ಲಿ ನಿಲ್ಲಬೇಕು.
6. ಇದಾದಮೇಲೆ,ಉಸಿರನ್ನು ಮತ್ತೆ ಹೊರಕ್ಕೆ ಬಿಟ್ಟು, ಮುಂಡವನ್ನು ನೆಲಕ್ಕಿಳಿಸಿ ಬಲಗಾಲನ್ನು ತೆಗೆದು ಮುಂಗಡಗೆ ಅದನ್ನು ನೆಟ್ಟಗೆ ಚಾಚಿಸಬೇಕು ಇದೇ ಭಂಗಿಯನ್ನು ಇನ್ನೊಂದು ಕಡೆಯಲ್ಲಿಯೂ ಮಾಡಿ, ಅಷ್ಟೇ ಕಾಲ ನೆಲೆಸಬೇಕು.
ಪರಿಣಾಮಗಳು
ಈ ಆಸನವು ತೋಳುಗಳಿಗೆ ಬಲ ಕೊಡುವುದು ಮಾತ್ರವಲ್ಲದೆ ಕಿಬ್ಬೊಟ್ಟೆಯೊಳಗಿನ ಅಂಗಗಳಿಗೆ ಚೆನ್ನಾಗಿ ವ್ಯಾಯಾಮವನ್ನು ದೊರಕಿಸುತ್ತದೆ.