ಮನೆ ಯೋಗಾಸನ ಏಕಪಾದ ಶೀರ್ಷಾಸನ ಚಕ್ರ

ಏಕಪಾದ ಶೀರ್ಷಾಸನ ಚಕ್ರ

0

    ಈ ಮುಂದೆ ವಿವರಿಸಿರುವ ಆಸನಗಳನ್ನು ಒಂದಾದಮೇಲೊಂ ದರಂತೆ ಕ್ರಮವಾಗಿ ಬಿಡದೆ, ‘ಏಕಪಾದ ಶೀರ್ಷಾಸನ’ದಿಂದ ಮುಂದುವರಿಸಿ ಅಭ್ಯಾಸಿಸಬೇಕು. ಅವುಗಳನ್ನು ಬೇರೆ ಬೇರೆಯಾಗಿ ಅಭ್ಯಾಸಿಸುವ ಅವಶ್ಯಕತೆಯಿಲ್ಲ.

Join Our Whatsapp Group

     ಮೊದಲು ‘ಏಕಪಾದ ಶ್ರೀ ಶಾಸನ’ದಲ್ಲಿ ಒಂದು ಕಾಲನ್ನು ಕತ್ತಿನಮೇಲಿಟ್ಟು,ಆ ಭಂಗಿಯ ಅಭ್ಯಾಸವು ಮುಗಿದ ಬಳಿಕ, ಅದಕ್ಕೆ ಸಂಬಂಧಿಸಿ ಉಳಿದ ಆಸನಗಳ ಚಕ್ರವನ್ನು ಅಭ್ಯಾಸ ಮಾಡಬೇಕು. ಆ ಬಳಿಕ ಒಂದೆರಡು ನಿಮಿಷಕಾಲ ಕಾಲ ವಿಶ್ರಮಿಸಿಕೊಳ್ಳಬೇಕು.  ಮತ್ತೆ ಕಾಲನ್ನು ಬದಲಾಯಿಸಿ, ಕತ್ತಿನ ಮೇಲೆರಿಸಿ,ಈ ಆಸನಚಕ್ರವನ್ನು ಮಾಡಿ ಮುಗಿಸಬೇಕು.ಆ ಭಂಗಿಗಳ ಅಭ್ಯಾಸವು ಕಷ್ಟಸಾಧ್ಯವಾದುದರಿಂದ ಅಭ್ಯಾಸ ಬಲದಿಂದ ಅದರಲ್ಲಿ ನೈಪುಣ್ಯವನ್ನು ಗಳಿಸಬಹುದು.

 ಬುದ್ಧಾಸನ:-

   ‘ಬುದ್ಧ’ ಎಂದರೆ ಜ್ಞಾನೋದಯ ವಾದದ್ದು ಎಂದು. ಈ ಆಸನವನ್ನು ‘ಸ್ಕಂದಾಸನ’ದಿಂದ ಮುಂದುವರಿಸಿ ಅಭ್ಯಸಿಸ ಬೇಕು.

 ಅಭ್ಯಾಸ ಕ್ರಮ

1. ಸ್ಕಂದಾಸನದಿಂದ ಮುಂದುವರೆಸಿ,ಮೊದಲು ಎಡಗಾಲನ್ನು ಕತ್ತಿನ ಹಿಂಬದಿಯಲ್ಲಿಟ್ಟು ಮುಂದೆ ಉಸಿರನ್ನು ಒಳಕ್ಕೆಳೆದು,ತಲೆ ಮತ್ತು ಮುಂಗಡವನ್ನು ಮೇಲೆತ್ತಬೇಕು.

2. ಬಳಿಕ,ಎಡಗೈಯಿಂದ,ಎಡದ ಕಾಲ್ಗಿಣನ್ನು ಹಿಡಿದು, ಆ ಕಾಲನ್ನು ಮತ್ತಷ್ಟು ಕೆಳಗಿಳಿಸಬೇಕು.

3. ಆಮೇಲೆ,ಬಲತೋಳನ್ನು ಭುಜದಿಂದ ಮೇಲೆತ್ತಿ,ಅದನ್ನು ಪಕ್ಕಕ್ಕೆ ಸರಿಸಿ ಬಳಿಕ ಮುಂದೋಳನ್ನು ಬೆನ್ನ ಹಿಂದೆ ತಿರುಗಿಸಿ ಎಡಪಾದದ ಗಿಣ್ಣಿನ ಮೇಲೆ ಅದನ್ನು ಹಾಯಿಸಿಡಬೇಕು.

4. ಈ ಭಂಗಿಯಲ್ಲಿ ಆಳವಾಗಿ ಉಸಿರಾಟ ನಡೆಸುತ್ತ. ಸುಮಾರು ಹದಿನೈದು ಸೆಕೆಂಡುಗಳ ಕಾಲ ನೆಲೆಸಿ,ಆ ಬಳಿಕ ಉಸಿರನ್ನು ಒಳಕ್ಕೆಳೆದು, ಮುಂಡವನ್ನೂ ಮೇಲುತ್ತಬೇಕು.

 ಕಪಿಲಾಸನ :-

   ‘ ಕಪಿಲ ’ನೆಂಬುದು ಒಬ್ಬ ಮಹರ್ಷಿಯ ಹೆಸರು. ಈ ಮಹರ್ಷಿಯೇ ಸಂಖ್ಯದರ್ಶನಕ್ಕೆ ಮೂಲಪುರುಷ ಈ ಆಸನವು ‘ಬುದ್ಧಾಸನ’ದಿಂದ ಮುಂದುವರೆಯುವುದು.

 ಅಭ್ಯಾಸ ಕ್ರಮ

1.ಮೊದಲು,ಎಡಗಾಲನ್ನು ಕತ್ತಿನ ಹಿಂಬದಿಯಲ್ಲಿಟ್ಟು ‘ಬುದ್ಧಾಸನ’ದಲ್ಲಿಯ ಕೈ ಬಿಗಿತವನ್ನು ಹಾಗೇ ಉಳಿಸಿ, ಆಮೇಲೆ ಉಸಿರನ್ನು ಹೊರ ಬಿಟ್ಟು ಮುಂಡವನ್ನು ಮುಂಭಾಗಿಸಿ ಗದ್ದವನ್ನು ‘ಪಶ್ಚಿಮೋತ್ತಾನಾಸನ’ ದಲ್ಲಿರುವಂತೆ ಚಾಚಿಟ್ಟು  ಬಲಗಾಲ ಮೇಲೆ ಒರಗಿಸಿರಬೇಕು.

2. ಬಳಿಕ, ಭಂಗಿಯಲ್ಲಿ ಆಳವಾದ ಉಸಿರಾಟ ನಡೆಸುತ್ತ ಸುಮಾರು ಹತ್ತು ಹದಿನೈದು ಸೆಕೆಂಡುಗಳ ಕಾಲ ನೆಲೆಸಬೇಕು.ಆಮೇಲೆ ಉಸಿರನ್ನು ಒಳಕ್ಕೆಳೆದು ತಲೆ ಮುಂಡಗಳನ್ನು ಮೇಲೆತ್ತಿ ಕೈ ಬಿಗಿತವನ್ನು ಸಲ್ಲಿಸಬೇಕು.