ಮನೆ ಯೋಗಾಸನ ಏಕಪಾದ ಊರ್ಧ ಧನುರಾಸನ

ಏಕಪಾದ ಊರ್ಧ ಧನುರಾಸನ

0

 ‘ಏಕ’ ಎಂದರೆ ಒಂದು. ‘ಪಾದ’ವೆಂದರೆ ಹೆಜ್ಜೆ ಅಡಿ. ‘ಉರ್ಧ್ವ’  ಎಂದರೆ ಮೇಲ್ಬಾಗ ಧನು ಬಿಲ್ಲು.

Join Our Whatsapp Group

ಅಭ್ಯಾಸ ಕ್ರಮ:

1. ಮೊದಲು, ಕಾಣಿಸಿರುವಂತೆ ‘ಊರ್ಧ್ವಧನುರಾಸನ’ವನ್ನು ಮಾಡಿ ಮುಗಿಸಿದಮೇಲೆ ಉಸಿರನ್ನು ಹೊರಕ್ಕೆಬಿಟ್ಟು ಬಲಗಾಲನ್ನು ನೆಲದಿಂದ ಮೇಲೆತ್ತಬೇಕು.

2. ಬಳಿಕ, ಬಲಗಾಲನ್ನು ನೇರವಾಗಿ ಹಿಗ್ಗಿಸಿ,ಅದನ್ನು ನೆಲಕ್ಕೆ 45 ಡಿಗ್ರಿಗಳಷ್ಟು ಕೋನವಾಗುವಂತೆ ಇರಬೇಕು.

3. ಆಮೇಲೆ ಬಲಗೈಯನ್ನು ನೆಲದಿಂದ ಮೇಲೆತ್ತಿ ಅದನ್ನು ಬಲತೊಡೆಯ ಮೇಲೆ ಒರಗಿಸಿಡಬೇಕು.ಈಗ ದೇಹವು ಎಡಗೈ ಎಡಗಾಲುಗಳ ಆಧಾರದ ಮೇಲೆ ಸಮತೋಲನದಲ್ಲಿ ನಿಲ್ಲುತ್ತದೆ. ಈ ಭಂಗಿಯಲ್ಲಿ ಸುಮಾರು 10,-15 ಸೆಕೆಂಡುಗಳ ಕಾಲ ಸಾಮಾನ್ಯ ಉಸಿರಾಟದಿಂದ ನೆಲೆಸಬೇಕು.

4. ಆಮೇಲೆ,ಉಸಿರನ್ನು ಹೊರಕ್ಕೆ ಬಿಟ್ಟು ಬಲಗೈಯನ್ನು ಮೇಲೆತ್ತಿದ ಕಾಲನ್ನೂ ಕೆಳಗಿಳಿಸಿ ಮತ್ತೆ ಊರ್ಧ್ವಧನುರಾಸನದ ಭಂಗಿಗೆ ಹಿಂದಿರುಗಬೇಕು.

5. ಕೊನೆಯಲ್ಲಿ,ಎಡಗಾಲನ್ನು ಮೇಲೆತ್ತಿ ಎಡಗೈಯನ್ನು ಎಡ ತೊಡೆಯ ಮೇಲೆ ಒರಗಿಸಿಟ್ಟು ದೇಹವನ್ನು ಬಲಗಾಲು ಬಲಗೈಗಳ ಮೇಲೆ ಸಮತೋಲನಮಾಡಿಟ್ಟು,ಈ ಮೇಲಿನ ಭಂಗಿಯನ್ನು ಇನ್ನೊಂದು ಕಡೆಗೂ ಮಾಡಿ ಅದರಲ್ಲಿಯೂ ಅಷ್ಟೇ ಒತ್ತು ನೆಲೆಸಬೇಕು .

ಪರಿಣಾಮಗಳು :

ಊರ್ಧ್ವ ಧನುರಾಸನದಿಂದುಂಟಾಗುವ  ಸತ್ಛಲಗಳ ಜೊತೆಗೆ ಈ ರಮ್ಯವಾದ ಆಸನವು ಅಭ್ಯಾಸಿಯಲ್ಲಿ ಸಮತೋಲನಸ್ಥಿತಿಯನ್ನು ಬೆಳೆಸುವುದಲ್ಲದೆ, ಅದಕ್ಕೆ ಒಂದು ವಿಧವಾದ ರಮ್ಯತೆ ಶೋಭೆ, ಸಮತೆಯನ್ನು ಮೂಡಿಸುತ್ತದೆ.