ಬೆಂಗಳೂರು: ಮುಂದಿನ ಜೂನ್ ತಿಂಗಳು ತೆರವಾಗಲಿರುವ ಕರ್ನಾಟಕ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ.
ಜೂನ್ 13 ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಜೂನ್ ೩ ಕೊನೆಯ ದಿನವಾಗಿದೆ. ಜೂನ್ ೪ ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ಮತದಾನ ನಡೆಯುವ ಜೂನ್ ೧೩ ರ ಸಂಜೆ ಐದು ಗಂಟೆಗೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಚುನಾಯಿತರಾಗಿರುವ 11 ಸದಸ್ಯರ ಅವಧಿ ಜೂನ್ ೧೭ ಕ್ಕೆ ಕೊನೆಗೊಳ್ಳಲಿದೆ.
ಅರವಿಂದ ಕುಮಾರ್ ಅರಳಿ, ಎನ್‌ಎಸ್ ಬೋಸರಾಜು, ಕೆ.ಗೋವಿಂದರಾಜ್, ಡಾ.ತೇಜಸ್ವಿನಿ ಗೌಡ, ಮುನಿರಾಜುಗೌಡ ಪಿ.ಎಂ, ಕೆ.ಪಿ. ನಂಜುಂಡಿ, ಬಿ.ಎಂ ಫಾರೂಕ್, ರಘುನಾಥ ರಾವ್ ಮಲ್ಕಾಪುರೆ, ಎನ್ ರವಿಕುಮಾರ್, ಎಸ್.ರುದ್ರೇಗೌಡ, ಕೆ.ಹರೀಶ್ ಕುಮಾರ್ ಅವರುಗಳ ಅವಧಿ ಜೂನ್ 17 ಕ್ಕೆ ಕೊನೆಗೊಳ್ಳಲಿದೆ.
Saval TV on YouTube