ಮನೆ ರಾಜ್ಯ ವಿಧಾನ ಪರಿಷತ್‌ 6 ಸ್ಥಾನಗಳಿಗೆ ಜೂ.3 ರಂದು ಚುನಾವಣೆ

ವಿಧಾನ ಪರಿಷತ್‌ 6 ಸ್ಥಾನಗಳಿಗೆ ಜೂ.3 ರಂದು ಚುನಾವಣೆ

0

ಬೆಂಗಳೂರು:ರಾಜ್ಯದಲ್ಲಿ ಸದ್ಯದಲ್ಲೇ ತೆರವಾಗಲಿರುವ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಬಿಡುಗಡೆ ಮಾಡಿದೆ.

Join Our Whatsapp Group


ರಾಜ್ಯದ ಈಶಾನ್ಯ ಪದವೀಧರರ ಕ್ಷೇತ್ರದ ಡಾ.ಚಂದ್ರಶೇಖರ್‌ ಬಿ. ಪಾಟೀಲ್‌, ನೈರುತ್ಯ ಪದವೀಧರರ ಕ್ಷೇತ್ರದ ಆಯನೂರು ಮಂಜುನಾಥ್‌, ಬೆಂಗಳೂರು ಪದವೀಧರರ ಕ್ಷೇತ್ರದ ಎ.ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದ ವೈ.ಎ.ನಾರಾಯಣಸ್ವಾಮಿ, ನೈರುತ್ಯ ಶಿಕ್ಷಕರ ಕ್ಷೇತ್ರದ ಎಸ್‌.ಎಲ್‌.ಭೋಜೇಗೌಡ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಮರಿತಿಬ್ಬೇಗೌಡ ಅವರ ಅವಧಿ ಇದೇ ವರ್ಷ ಜೂನ್‌ 21 ರಂದು ಕೊನೆಗೊಳ್ಳಲಿದೆ.
ಮೇಲಿನ ಸ್ಥಾನಗಳಿಗೆ ಜೂನ್‌ 12ರ ಒಳಗೆ ಚುನಾವಣೆ ಪ್ರಕ್ರಿಯೆ ನಡೆಯಬೇಕಿದೆ. ಹೀಗಾಗಿ, ವೇಳಾಪಟ್ಟಿ ಪ್ರಕಟಿಸಲಾಗಿದೆ.
ಅಧಿಸೂಚನೆ ಪ್ರಕಟಿಸುವ ದಿನ-ಮೇ 9
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ-ಮೇ 16
ನಾಮಪತ್ರ ಪರಿಶೀಲನೆ-ಮೇ 17
ನಾಮಪತ್ರ ಹಿಂಪಡೆಯಲು ಕೊನೆಯ ದಿನ-ಮೇ 20
ಮತದಾನ ದಿನ-ಜೂ.3
ಮತ ಎಣಿಕೆ-ಜೂ.6
ಮತದಾನದ ಸಮಯ: ಬೆಳಗ್ಗೆ 8 ರಿಂದ ಸಂಜೆ 4

ಹಿಂದಿನ ಲೇಖನನ್ಯಾಯಾಲಯಗಳು ವಾಡಿಕೆಯಂತೆ ಜಾಮೀನು ರಹಿತ ವಾರಂಟ್ ಹೊರಡಿಸಬಾರದು: ಸುಪ್ರೀಂ ಕೋರ್ಟ್
ಮುಂದಿನ ಲೇಖನಅರಿಶಿನ  ಕಾಮಾಲೆ (ಜಾಂಡಿಸ್ )