ಮನೆ ಅಂತಾರಾಷ್ಟ್ರೀಯ ಚುನಾವಣಾ ಅಕ್ರಮ ಪ್ರಕರಣ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಬಿಡುಗಡೆ

ಚುನಾವಣಾ ಅಕ್ರಮ ಪ್ರಕರಣ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಬಿಡುಗಡೆ

0

ಅಟ್ಲಾಂಟಾ: ಚುನಾವಣಾ ಅಕ್ರಮ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಬಂಧಿಸಿ, ಜಾರ್ಜಿಯಾ ಜೈಲಿನಲ್ಲಿ ಇಡಲಾಗಿತ್ತು. ತದನಂತರ  200,000 ಡಾಲರ್ ಬಾಂಡ್‌ ನಲ್ಲಿ ಜಾಮೀನು ಪಡೆದು ಸುಮಾರು ಜೈಲಿನಿಂದ ಹೊರಗೆ ಬಂದಿದ್ದಾರೆ.

2020 ರ ಚುನಾವಣಾ ಫಲಿತಾಂಶ ರದ್ದತಿಯಲ್ಲಿ ಇತರ 18 ಆರೋಪಿಗಳೊಂದಿಗೆ ಸಹಕರಿಸಿದ ಆರೋಪ ಹೊತ್ತಿರುವ ಟ್ರಂಪ್ ಅವರನ್ನು ಬಂಧಿಸಿ ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಲ್ಲಿ ಇಡಲಾಗಿತ್ತು. 20 ನಿಮಿಷಗಳ ನಂತರ ಅವರನ್ನು ಜೈಲಿನಿಂದ ಹೊರಗೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಪ್ರಕರಣದ ಇತರ ಆರೋಪಿಗಳಂತೆ 77 ವರ್ಷದ ಟ್ರಂಪ್ ಕೂಡಾ ಕಾನೂನಿಗೆ ಶರಣಾಗಿದ್ದಾರೆ. ಅಮೆರಿಕದಲ್ಲಿ ಈ ರೀತಿ ಜೈಲಿಗೆ ಹೋದ ಅಮೆರಿಕದ ಮಾಜಿ ಅಧ್ಯಕ್ಷರಲ್ಲಿ ಟ್ರಂಪ್ ಅವರೇ ಮೊದಲಿಗರಾಗಿದ್ದಾರೆ. 

ಜೈಲಿನಿಂದ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇದು “ಅಮೆರಿಕಕ್ಕೆ ಬಹಳ ದುಃಖದ ದಿನವಾಗಿದೆ. ಇಲ್ಲಿ ನಡೆದಿರುವುದು ನ್ಯಾಯದ ಅಣಕವಾಗಿದೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದರು.