ಮನೆ ಅಪರಾಧ ಬಿಜೆಪಿ ಮುಖಂಡನ ಮನೆ ಚುನಾವಣಾಧಿಕಾರಿಗಳ ದಾಳಿ: 504 ಕುಕ್ಕರ್ ಜಪ್ತಿ

ಬಿಜೆಪಿ ಮುಖಂಡನ ಮನೆ ಚುನಾವಣಾಧಿಕಾರಿಗಳ ದಾಳಿ: 504 ಕುಕ್ಕರ್ ಜಪ್ತಿ

0
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಮನೆ ಮೇಲೆ ಚುನಾವಣಾಧಿಕಾರಿ ತಂಡ ದಾಳಿ ಮಾಡಿದ್ದು, 504 ಕುಕ್ಕರ್‌ ಜಪ್ತಿ ಮಾಡಿದೆ.

ಕೋರಮಂಗಲ 4ನೇ ಹಂತದಲ್ಲಿರುವ ಅನಿಲ್ ಶೆಟ್ಟಿ ಮನೆಯಲ್ಲಿ ಕುಕ್ಕರ್ ಸಂಗ್ರಹಿಸಿದ್ದ ಬಗ್ಗೆ ಮಾಹಿತಿ ಬಂದಿತ್ತು. ಮತದಾರರ ನೋಂದಣಾಧಿಕಾರಿ ವರಲಕ್ಷ್ಮಮ್ಮ ನೇತೃತ್ವದ ತಂಡ ಮಾರ್ಚ್ 28ರಂದು ದಾಳಿ ಮಾಡಿದೆ ಎಂದು ಪೊಲೀಸರು ಹೇಳಿದರು.

ಮನೆಯ ನೆಲ ಮಹಡಿ ಕೊಠಡಿಯಲ್ಲಿ 10 ಕುಕ್ಕರ್ ಹಾಗೂ 2ನೇ ಮಹಡಿಯ ಕೊಠಡಿಯಲ್ಲಿ 494 ಕುಕ್ಕರ್‌’ಗಳು ಪತ್ತೆಯಾಗಿವೆ. ದಾಳಿ ವೇಳೆ ಅನಿಲ್ ಶೆಟ್ಟಿ ಮನೆಯಲ್ಲಿ ಇರಲಿಲ್ಲ. ಮತದಾರರಿಗೆ ಹಂಚಲೆಂದು ಕುಕ್ಕರ್ ಸಂಗ್ರಹಿಸಿಟ್ಟಿದ್ದು ಗೊತ್ತಾಗಿದೆ. ಈ ಬಗ್ಗೆ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಹಿಂದಿನ ಲೇಖನಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದರೆ ಪರಿಶೀಲಿಸಿ: ಡಾ ಕೆ.ವಿ. ರಾಜೇಂದ್ರ
ಮುಂದಿನ ಲೇಖನವಿದ್ಯಾರ್ಥಿಯ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ; ಪರೀಕ್ಷೆ ಬರೆಯಲು ಅನುಮತಿ