ಮನೆ ಸ್ಥಳೀಯ ವಿಕಾಸ ಸಂಕಲ್ಪ ಯಾತ್ರೆಗೆ ವಿದ್ಯುಕ್ತ ಚಾಲನೆ

ವಿಕಾಸ ಸಂಕಲ್ಪ ಯಾತ್ರೆಗೆ ವಿದ್ಯುಕ್ತ ಚಾಲನೆ

0

ಮೈಸೂರು: ಮೈಸೂರಿನ ನಗರ ಪ್ರದೇಶಗಳಲ್ಲಿನ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಹಾಗೂ ಅರ್ಹರಿಗೆ ಯೋಜನೆಗಳನ್ನು ತಲುಪಿಸುವ ವಿಕಾಸ ಸಂಕಲ್ಪ ಯಾತ್ರೆಗೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ.

ಮೈಸೂರು ನಗರಕೆ ಆಗಮಿಸಿರುವ ವಿಕಸಿತ ಸಂಕಲ್ಪ ಭಾರತದ ಯಾತ್ರೆಗೆ  ರೈಲ್ವೆ ನಿಲ್ದಾಣದ ಮುಂಭಾಗ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯವಸ್ಥಾಪಕರಾದ (DRM) ಶಿಲ್ಪಿ ಅಗರ್ವಾಲ್ ರವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕೇಂದ್ರ ಸರ್ಕಾರದ ಯೋಜನೆಗಳನ್ನು ನಗರ ಪ್ರದೇಶದ ಕಟ್ಟಡ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ವಿಕಾಸ ಸಂಕಲ್ಪ ಯಾತ್ರೆ ಮುಖಾಂತರ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ನಗರ ಪ್ರದೇಶದಲ್ಲಿರುವ ಲಕ್ಷಾಂತರ ಜನರು ಕೇಂದ್ರ ಸರ್ಕಾರದ ಯೋಜನೆಗಳ ಪಡೆಯಲು ಸಹಕಾರಿಯಾಗಲಿದೆ. ಅರ್ಹರು ಈ ಯೋಜನೆಗಳನ್ನು ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು.

ಪ್ರಧಾನ ಮಂತ್ರಿಗಳು ನೀಡುವ ಸಾಲದ ಯೋಜನೆಯಲ್ಲಿ ಸಾಲ ಪಡೆದು ಹೊಸ ಆಟೋ ಖರೀದಿಸಿ ಆರ್ಥಿಕತೆ ಹೆಚ್ಚಿಸಿಕೊಂಡಿದ್ದೇನೆ. ಮೊದಲು ಬಾಡಿಗೆ ಆಟೋ ಮುಖಾಂತರ ಹಣ ಉಳಿತಾಯವಾಗುತ್ತಿರಲಿಲ್ಲ. ಇದೀಗ ಸ್ವಂತ ಆಟೋದಲ್ಲಿ ಹೆಚ್ಚಿನ ದುಡಿಮೆ ಮಾಡಿ ಜೀವನಕ್ಕೆ ಸಹಕಾರಿಯಾಗಿದೆ. ಎಂದು ಫಲಾನುಭವಿ ಸಲೀಂ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಪಿಎಂಐಜಿಪಿ ಯೋಜನೆ ಅಡಿಯಲ್ಲಿ ನೀಡುವ ಸಾಲದಲ್ಲಿ 10 ಲಕ್ಷ ರೂಗಳ ಸಾಲ ಪಡೆದು ಮರದ ಕೆಲಸ ವೃದ್ಧಿಸಿಕೊಂಡಿದ್ದೇನೆ. ಈ ಸಾಲದ ಮುಖಾಂತರ 10 ಜನರಿಗೆ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆ ನೀಗಿಸಲು ಮುಂದಾಗಿದ್ದೇನೆ. ಎಂದು ಫಲಾನುಭವಿ ನವೀನ್ ಕುಮಾರ್ ತಿಳಿಸಿದ್ದಾರೆ.

ಗ್ರಾಮಾಂತರ ಪ್ರದೇಶದ ಜನರಿಗೆ ವಿಕಸಿತ ಸಂಕಲ್ಪ ಯಾತ್ರೆ ಮುಖಾಂತರ ಯೋಜನೆಯ ಕಾರ್ಯ ಮಾಡುವುದರ ಜೊತೆಗೆ ನಗರ ಪ್ರದೇಶದ ಕೊಳಗೇರಿ ಹಾಗೂ ಹೆಚ್ಚಾಗಿ ಬಡತನ ರೇಖೆಗಿಂತ ಕೆಳಗಿರುವ ಬಡಾವಣೆಗಳಿಗೆ ವಿಕಸಿತ ಯಾತ್ರೆಯು ಸಂಚರಿಸಿ ಕೇಂದ್ರದ ಯೋಜನೆಗಳ ಮಾಹಿತಿ ನೀಡಿ ಅರ್ಹರಿಗೆ ಸ್ಥಳದಲ್ಲೇ ಬ್ಯಾಂಕ್ ಖಾತೆ ಆರಂಭದ ಜೊತೆಗೆ ಸಾಲ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ ಹಾಗೂ ಪೂರ್ಣಪ್ರಮಾಣದ ದಾಖಲೆ ಒದಗಿಸುತ್ತಿದ್ದಂತೆ ಸ್ಥಳದಲ್ಲೇ ಉಜ್ವಲ ಯೋಜನೆಯ ಗ್ಯಾಸ್ ಸಿಲೆಂಡರ್ ಹಾಗೂ ಸ್ಟವ್ ಅನ್ನು ಉಚಿತವಾಗಿ ನೀಡುವ ಕಾರ್ಯ ಮಾಡುತ್ತಿದ್ದೇವೆ ಎಂದು ಎಸ್ ಬಿ ಐ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕರಾದ ಜಯಂತಿ ತಿಳಿಸಿದ್ದಾರೆ. ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಮೈಸೂರು ನಗರದ ಎಲ್ಲಾ ಪ್ರದೇಶಗಳಿಗೂ ಸಂಚರಿಸಿ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಿದೆ.