ಆಂಧ್ರಪ್ರದೇಶ(Andrapradesh): ಶ್ರೀ ಸತ್ಯಸಾಯಿ ಜಿಲ್ಲೆಯ ತಾಡಿಮರಿ ವಲಯದಲ್ಲಿ ಚಲಿಸುತ್ತಿದ್ದ ಚಲಿಸುತ್ತಿದ್ದ ಆಟೋ ಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು, ಆಟೋದಲ್ಲಿದ್ದ ಐದು ಮಂದಿ ಸಜೀವ ದಹನವಾಗಿರುವ ಘಟನೆ ವರದಿಯಾಗಿದೆ.
ಗುಡಂಪಲ್ಲಿಯಿಂದ ಚಿಲ್ಲಕೊಂಡಯ್ಯಪಲ್ಲಿಗೆ ಇಂದು ಬೆಳಗ್ಗೆ 5 ಮಂದಿ ಕೃಷಿ ಕೆಲಸಕ್ಕೆ ಆಟೋದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಮೃತರನ್ನು ಗುಡ್ಡಂಪಲ್ಲಿ ನಿವಾಸಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆಟೋ ಚಾಲಕ ಪೋತುಲಯ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಲಕ್ಷ್ಮಿ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಟ್ಟಲಪಲ್ಲಿ ಆರ್ ಟಿಡಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಕಣ್ಣೆದುರೇ ಬೆಂಕಿ ಹೊತ್ತಿಕೊಂಡಿದ್ದರಿಂದ ಸ್ಥಳೀಯರು ಓಡಿ ಬಂದರೂ ರಕ್ಷಿಸಲಾಗಿಲ್ಲ. ತಕ್ಷಣ ಆಂಬ್ಯುಲೆನ್ಸ್‌ಗೆ ಮಾಹಿತಿ ನೀಡಿದರೂ ಇವರೆಲ್ಲರ ಪ್ರಾಣ ಉಳಿಸಲಾಗಲಿಲ್ಲ.
ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಕಾರ್ಮಿಕರನ್ನು ಗುರುತಿಸುವುದು ಕಷ್ಟಕರವಾಗಿದೆ ಎಂದು ಸ್ಥಳಕ್ಕೆ ಆಗಮಿಸಿದ ಪೊಲೀಸರು ತಿಳಿಸಿದ್ದಾರೆ.