ಮನೆ ಅಪರಾಧ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌: ಮನೆಯ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌: ಮನೆಯ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿ

0

ಕುಣಿಗಲ್: ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಉಂಟಾಗಿ ಬೆಂಕಿ ಹೊತ್ತಿಕೊಂಡು ಟಿ.ವಿ ಸೇರಿದಂತೆ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಪಟ್ಟಣದ ಹಳೆಯ ರಾಷ್ಟ್ರೀಯ ಹೆದ್ದಾರಿ 48ರ ಆಸ್ಪತ್ರೆಯೊಂದರ ಬಳಿ ಜೂ.26ರ ಬುಧವಾರ ಸಂಭವಿಸಿದೆ.

Join Our Whatsapp Group

ಸುಶೀಲಮ್ಮ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಆಕೆ ತನ್ನ ಮಗಳ ಆರೋಗ್ಯ ಸರಿಯಿಲ್ಲದ ಕಾರಣ ಮನೆಗೆ ಬೀಗ ಹಾಕಿ ಜೂ.26ರ ಬುಧವಾರ ಬೆಳಗ್ಗೆ ಅದಿಚುಂಚನಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಈ ವೇಳೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಉಂಟಾಗಿ ಬೆಂಕಿ ಹೊತ್ತಿ, ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಅಗ್ನಿಶಾಮಕ ಪೊಲೀಸರು ಸ್ಥಳಕ್ಕೆ ಬಂದು ಮನೆಯ ಬೀಗ ಒಡೆದು ಮನೆಯೊಳಗೆ ಪ್ರವೇಶಿಸಿ ಬೆಂಕಿ ನಂದಿಸಿ, ಅಡುಗೆ ಮನೆಯಲ್ಲಿದ್ದ ಸಿಲಿಂಡರ್‌ಗೆ ಬೆಂಕಿ ಆವರಿಸದಂತೆ ತಡೆದಿದ್ದಾರೆ. ಇಲ್ಲವಾದಲ್ಲಿ ಸಿಲಿಂಡರ್ ಸ್ಪೋಟಗೊಂಡು ಭಾರಿ ಅನಾಹುತ ಆಗುತ್ತಿತು.

ಮನೆಯಲ್ಲಿದ್ದ ಟಿವಿ, ಸ್ಪೀಕರ್, ಬಟ್ಟೆ ಬರೆಗಳು ಸುಟ್ಟು ಕರಕಲಾಗಿ ಸಾವಿರಾರು ರೂ. ನಷ್ಟ ಉಂಟಾಗಿದೆ.

ಅಗ್ನಿಶಾಮಕ ಪೊಲೀಸ್‌ಗೆ ಗಾಯ : ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದ  ಅಗ್ನಿಶಾಮಕ ದಳದ ಪೊಲೀಸ್ ಪುರಂದರ್ ಅವರ ಕೈಗೆ ಗಾಜು ಚೂರು ತಾಗಿ ಹೊಡೆದು ಗಾಯಗಳಾಗಿದೆ.

ಹಿಂದಿನ ಲೇಖನನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು ಸೇರಿ ವಸ್ತುಗಳ ಕಳ್ಳತನ
ಮುಂದಿನ ಲೇಖನತಲೆನೋವು: ಭಾಗ ಎರಡು