ಮನೆ ಅಪರಾಧ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’: ಪೋಸ್ಟರ್ ಅಂಟಿಸಿದ್ದ ಕಿಡಿಗೇಡಿಗಳ ವಿರುದ್ಧ ಎಫ್​ಐಆರ್

‘ವಿದ್ಯುತ್ ಕಳ್ಳ ಕುಮಾರಸ್ವಾಮಿ’: ಪೋಸ್ಟರ್ ಅಂಟಿಸಿದ್ದ ಕಿಡಿಗೇಡಿಗಳ ವಿರುದ್ಧ ಎಫ್​ಐಆರ್

0

ಬೆಂಗಳೂರು: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರನ್ನು ಕರೆಂಟ್ ಕಳ್ಳ ಎಂದು ಅವಹೇಳನಕಾರಿ ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬೆಂಗಳೂರಿನ ಶ್ರೀರಾಂಪುರ ಪೊಲೀಸ್​ ಠಾಣೆಯಲ್ಲಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಶೇಷಾದ್ರಿಪುರಂನಲ್ಲಿರುವ ರಾಜ್ಯ ಜೆಡಿಎಸ್​ ಕಚೇರಿ ಕಾಂಪೌಂಡ್ ಗೋಡೆಗಳ ಮೇಲೆ ಮಾಜಿ‌ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ‘ವಿದ್ಯುತ್​ ಕಳ್ಳ’ ಎಂದು ಬರೆದು ಪೋಸ್ಟರ್​ ಅಂಟಿಸಿದ್ದರು.

ಪೋಸ್ಟರ್ ಅಂಟಿಸಿದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸುವ ಹಾಗೂ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಡಿ ಬಿಂದು ಹಾಗೂ ನವೀನ್ ಗೌಡ ಎಂಬವರ ವಿರುದ್ಧ ಎಚ್.ಎಂ.ರಮೇಶ್ ಗೌಡ ಎಂಬವರು ನೀಡಿದ ದೂರಿನ ಮೇರೆಗೆ ಶೇಷಾದ್ರಿಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.‌

ನವೆಂಬರ್​ 14ರ ರಾತ್ರಿ ಜೆಡಿಎಸ್ ಪ್ರಧಾನ ಕಚೇರಿ ಬಳಿ ಆಟೋದಲ್ಲಿ ಬಂದಿದ್ದ ನಾಲ್ವರು ಅತಿಕ್ರಮ ಪ್ರವೇಶಿಸಿ ಗೋಡೆಗಳ ಮೇಲೆ‌ ಪೋಸ್ಟರ್ ಅಂಟಿಸಿ ಕುಮಾರಸ್ವಾಮಿ ವಿರುದ್ಧ‌ ಧಿಕ್ಕಾರ ಕೂಗಿದ್ದರು‌.

ಈ ಬಗ್ಗೆ ಪ್ರಶ್ನಿಸಲು ಮುಂದಾದ ಕಚೇರಿಯ ಭದ್ರತಾ ಸಿಬ್ಬಂದಿ ಮಹಾದೇವ ಅವರನ್ನು ಬೆದರಿಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ನಾಳೆಯಿಂದ ಇಲ್ಲಿ ಕೆಲಸ‌ ಮಾಡಕೂಡದು ಎಂದು ತಾಕೀತು ಮಾಡಿದ್ದಾರೆ ಎಂದು ರಮೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಪಟಾಕಿ ಸಿಡಿಸುವಾಗ ಲಘು ಗಾಯ: ಕೆ. ಆರ್. ಆಸ್ಪತ್ರೆಯಲ್ಲಿ 9 ಮಂದಿಗೆ ಚಿಕಿತ್ಸೆ
ಮುಂದಿನ ಲೇಖನವರ್ಗಾವಣೆ ಮುಖ್ಯಮಂತ್ರಿಗಳ ಪರಮೋಚ್ಛ ಅಧಿಕಾರ: ಸಚಿವ ಎಚ್.ಸಿ. ಮಹದೇವಪ್ಪ