ಇಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಗ್ರಾಜಯೇಟ್ ಇಂಜಿನಿಯರಿಂಗ್ ಅಪ್ರೆಂಟಿಸ್ ಹಾಗೂ ಡಿಪ್ಲೊಮ ಅಪ್ರೆಂಟಿಸ್ ತರಬೇತಿದಾರರ ಪೋಸ್ಟ್’ಗಳ ಭರ್ತಿಗೆ ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ.
ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಕೆಳಗಿನ ಇತರೆ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
ಗ್ರಾಜುಯೇಟ್ ಇಂಜಿನಿಯರ್ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : 150
ಟೆಕ್ನೀಷಿಯನ್ (ಡಿಪ್ಲೊಮ) ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : 62
ಶೈಕ್ಷಣಿಕ ಅರ್ಹತೆ
ಗ್ರಾಜುಯೇಟ್ ಇಂಜಿನಿಯರ್ ಅಪ್ರೆಂಟಿಸ್ ಹುದ್ದೆ: ಬಿಇ / ಬಿ.ಟೆಕ್
ಟೆಕ್ನೀಷಿಯನ್ (ಡಿಪ್ಲೊಮ) ಅಪ್ರೆಂಟಿಸ್ ಹುದ್ದೆ: ಡಿಪ್ಲೊಮ
ಮಾಸಿಕ ಸ್ಟೈಫಂಡ್ ವಿವರ
ಗ್ರಾಜುಯೇಟ್ ಇಂಜಿನಿಯರ್ ಅಪ್ರೆಂಟಿಸ್ ಹುದ್ದೆ: Rs.9000.
ಟೆಕ್ನೀಷಿಯನ್ (ಡಿಪ್ಲೊಮ) ಅಪ್ರೆಂಟಿಸ್ ಹುದ್ದೆ: Rs.8000.
ವಯೋಮಿತಿ ಅರ್ಹತೆ
ಕನಿಷ್ಠ 25 ವರ್ಷ ಆಗಿರಬೇಕು. ವರ್ಗವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ. ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು 3 ವರ್ಷ, ಎಸ್’ಸಿ / ಎಸ್’ಟಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 19-12-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 26-12-2022 ರ ರಾತ್ರಿ 10-00 ಗಂಟೆವರೆಗೆ.
ತಾತ್ಕಾಲಿಕ ಅರ್ಹತಾ ಪಟ್ಟಿ ಬಿಡುಗಡೆ ದಿನಾಂಕ: 28-12-2022
ಹುದ್ದೆಗೆ ನಿಯೋಜನೆಗೊಳ್ಳಲು ಪ್ರಕ್ರಿಯೆ ಪೂರ್ಣಗೊಳಿಸುವ ದಿನಾಂಕ : 31-12-2022
ಅಪ್ರೆಂಟಿಸ್ ತರಬೇತಿ ಆರಂಭ ದಿನಾಂಕ : 02-01-2023
ಇಲೆಕ್ಟ್ರಾನಿಕ್ ಕಂಮ್ಯೂನಿಕೇಷನ್ ಇಂಜನಿಯರಿಂಗ್, ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್, ಇಇಇ, ಇಐಇ, ಸಿವಿಲ್ ಇಂಜಿನಿಯರ್ ಬ್ರ್ಯಾಂಚ್’ಗಳಲ್ಲಿ ಅಪ್ರೆಂಟಿಸ್ ತರಬೇತುದಾರರನ್ನು ನೇಮಕ ಮಾಡಲಾಗುತ್ತದೆ.
ಆಯ್ಕೆ ಹೇಗೆ?
ನಿಗಧಿತ ವಿದ್ಯಾರ್ಹತೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ನೇಮಕ ಮಾಡಲಾಗುತ್ತದೆ.