ಚಾಮರಾಜನಗರ: ಬಂಡೀಪುರದ ರಾಮಾಪುರ ಆನೆ ಬಿಡಾರದಲ್ಲಿ ಆನೆ ಮೃತಪಟ್ಟಿದೆ. ಹಾಸನದ ಬೇಲೂರಿನಲ್ಲಿ ಸೆರೆ ಹಿಡಿಯಲಾಗಿದ್ದ ತಣ್ಣೀರ್ ಕೊಂಬನ್ ಎಂಬ ಆನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರದ ಅರಣ್ಯಕ್ಕೆ ಬಿಟ್ಟಿದ್ದರು.
ಈ ತಣ್ಣೀರ್ ಕೊಂಬನ್ ಆನೆ ಕೇರಳದ ವಯನಾಡು ವ್ಯಾಪ್ತಿಯ ಮಾನಂದವಾಡಿ ಪಟ್ಟಣದ ಜನನಿಬೀಡ ಪ್ರದೇಶಕ್ಕೆ ನುಗ್ಗಿತ್ತು. ಈ ವಿಚಾರ ತಿಳಿದು ಕೇರಳದ ಅರಣ್ಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆನೆಗೆ ಡಾಟಿಂಗ್ ಮಾಡಿ ಸೆರೆ ಹಿಡಿದು, ಲಾರಿಯಲ್ಲಿ ಬಂಡೀಪುರದ ರಾಮಾಪುರ ಆನೆ ಶಿಬಿರಕ್ಕೆ ಶುಕ್ರವಾರ (ಫೆ.02) ರಾತ್ರಿ ಕರೆತಂದಿದ್ದರು.
ಲಾರಿ ನಿಲ್ಲಿಸುತ್ತಿದ್ದಂತೆ ಆನೆ ಕುಸಿದು ಬಿದ್ದು ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದ್ದಾರೆ. ಇಂದು (ಫೆ.03) ಆನೆಯ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ ಆನೆ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.