ಮನೆ Uncategorized ರೈಲ್ವೆ ಕಂಬಿಗೆ ಸಿಲುಕಿ ಪರದಾಡಿದ ಕಾಡಾನೆ

ರೈಲ್ವೆ ಕಂಬಿಗೆ ಸಿಲುಕಿ ಪರದಾಡಿದ ಕಾಡಾನೆ

0

ಸಿದ್ದಾಪುರ (ಕೊಡಗು): ಕಾಡಾನೆ ಹಾವಳಿ ತಡೆಗಟ್ಟಲು ಅಳವಡಿಸಿದ್ದ ರೈಲ್ವೆ ಕಂಬಿಗೆ ಕಾಡಾನೆ ಸಿಲುಕಿ ಕೊನೆಗೆ ಅದರಿಂದ ಹೊರಬಂದು, ಅರಣ್ಯಕ್ಕೆ ತೆರಳಿದೆ.

ಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ನದಿ ದಡದಲ್ಲಿ ಕಾಡಾನೆ ತಡೆಗೆ ಅರಣ್ಯ ಇಲಾಖೆ ರೈಲ್ವೆ ಕಂಬಿ ಅಳವಡಿಸಿತ್ತು. ಗ್ರಾಮದ ಸುರೇಶ್ ಎಂಬುವರ ಕಾಫಿ ತೋಟದಲ್ಲಿದ್ದ ಅಂದಾಜು 25 ವರ್ಷ ಪ್ರಾಯದ ಸಲಗವೊಂದು ತೋಟದಿಂದ ಅರಣ್ಯಕ್ಕೆ ದಾಟುವಾಗ ರೈಲ್ವೆ ಕಂಬಿಗೆ ಸಿಲುಕಿಕೊಂಡಿದೆ.

ಕೆಲವು ಗಂಟೆಗಳ ಪ್ರಯತ್ನದ ಬಳಿಕ ಕಾಡಾನೆಯು ಸುರಕ್ಷಿತವಾಗಿ ಕಂಬಿಯಿಂದ ಹೊರಬಂದು ದುಬಾರೆ ಮೀಸಲು ಅರಣ್ಯಕ್ಕೆ ತೆರಳಿದೆ. ಸ್ಥಳೀಯರು ಕಾಡಾನೆಯ ಚಿತ್ರವನ್ನು ಸೆರೆಹಿಡಿದಿದ್ದಾರೆ.

ಹಿಂದಿನ ಲೇಖನತುಮಕೂರು: ಪೋಕ್ಸೋ ಕಾಯ್ದೆಯಡಿ 169 ಪ್ರಕರಣ ದಾಖಲು
ಮುಂದಿನ ಲೇಖನಪತ್ನಿಗೆ 25 ಸಾವಿರ ರೂ. ವ್ಯಾಜ್ಯ ವೆಚ್ಚ ನೀಡುವಂತೆ ಹೈಕೋರ್ಟ್‌ ಆದೇಶ