ಮನೆ ರಾಜ್ಯ ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ, ಹುಲಿ ಸಾವು

ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ, ಹುಲಿ ಸಾವು

0
ಸಾಂದರ್ಭಿಕ ಚಿತ್ರ

ಆನೇಕಲ್ (Anekal): ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ‘ಸುಂದರ್‌’, ಹುಲಿ ‘ಕಿರಣ್‌’ ಅನಾರೋಗ್ಯದಿಂದ ಮೃತಪಟ್ಟಿವೆ.

ಆ. 23ರಿಂದ ಸುಂದರ್‌ಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಪಶುವೈದ್ಯ ತಂಡವು ಪರೀಕ್ಷಿಸಿತ್ತು. ಅದು ಉದರ ನೋವು ಮತ್ತು ತೀವ್ರ ಬಾಯಿ ಹುಣ್ಣು ಸಮಸ್ಯೆಯಿಂದ ಬಳಲುತ್ತಿತ್ತು.

ಮಹಾರಾಷ್ಟ್ರದ ಕೊಲ್ಲಾಪುರ ದೇವಾಲಯದಿಂದ ಪೇಟಾದವರು ರಕ್ಷಿಸಿದ್ದರು. ಬನ್ನೇರುಘಟ್ಟ ಉದ್ಯಾನಕ್ಕೆ 2014ರಲ್ಲಿ ಕರೆ ತರಲಾಗಿತ್ತು. ಆರೋಗ್ಯ ಸಮಸ್ಯೆಯಿಂದ ಸುಂದರ್‌ ಮೃತಪಟ್ಟಿದ್ದು ಪೇಟಾ ಪ್ರತಿನಿಧಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಉದ್ಯಾನದ ನಿರ್ದೇಶಕರು ತಿಳಿಸಿದ್ದಾರೆ.

ಹುಲಿ ‘ಕಿರಣ್‌’ ರಕ್ತದ ಪ್ರೋಟೊಜೋವಾ ಸೋಂಕಿನಿಂದ ಮೃತಪಟ್ಟಿದೆ. ಕಳೆದ ನಾಲ್ಕು ತಿಂಗಳಿನಿಂದಲೂ ಹುಲಿಯು ದೀರ್ಘಾಕಾಲದ ಅನಾರೋಗ್ಯದಿಂದ ಬಳಲುತ್ತಿತ್ತು. ಉದ್ಯಾನದ ಹುಲಿಗಳಾದ ಅಮರ್‌ ಮತ್ತು ವಿಸ್ಮಯ ಹುಲಿಗೆ ಕಿರಣ್‌ ಜನಿಸಿದ್ದ. ಪಶುವೈದ್ಯಕೀಯ ತಂಡ ನಡೆಸಿದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.

ಹಿಂದಿನ ಲೇಖನವಿದ್ಯಾರ್ಥಿ ತಲೆ ಹೊಕ್ಕ ಜಾವೆಲಿನ್:‌ ಗಂಭೀರ ಗಾಯ
ಮುಂದಿನ ಲೇಖನಕೊಪ್ಪಳದಲ್ಲಿ ಬೋನಿಗೆ ಬಿದ್ದ ಚಿರತೆ