ಮನೆ ರಾಷ್ಟ್ರೀಯ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಮತ್ತಷ್ಟು ಅಭಿವೃದ್ಧಿಪಡಿಸಲು ಒತ್ತು: ಪ್ರಧಾನಿ ನರೇಂದ್ರ ಮೋದಿ

ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಮತ್ತಷ್ಟು ಅಭಿವೃದ್ಧಿಪಡಿಸಲು ಒತ್ತು: ಪ್ರಧಾನಿ ನರೇಂದ್ರ ಮೋದಿ

0

ನವದೆಹಲಿ: ದೇಶದಲ್ಲಿ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಹಾಗೂ ವೈದ್ಯರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಸರ್ಕಾರ ಸಂಪೂರ್ಣವಾಗಿ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ.

Join Our Whatsapp Group

ವೈದ್ಯರ ದಿನದ ಅಂಗವಾಗಿ ‘ಎಕ್ಸ್‌‘ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಧಾನಿ ಮೋದಿ, ಆರೋಗ್ಯ ಕ್ಷೇತ್ರದ ಯೋಧರ  ಸಮರ್ಪಣೆ ಹಾಗೂ ಸಹಾನುಭೂತಿಯ ಸೇವೆ ಗೌರವಯುತವಾದದ್ದು. ಸವಾಲಿನ ಮಧ್ಯೆಯೂ ಅವರ ಕೆಲಸ ಗಮನಾರ್ಹವಾದದ್ದು ಎಂದು ಬರೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಖ್ಯಾತ ವೈದ್ಯರಾದ ಬಿಧನ್ ಚಂದ್ರ ರಾಯ್ ಅವರ ಸ್ಮರಣಾರ್ಥವಾಗಿ ರಾಷ್ಟ್ರೀಯ ವೈದ್ಯರ ದಿನವನ್ನು ಜುಲೈ 1ರಂದು ಆಚರಿಸಲಾಗುತ್ತದೆ.

ಚಾರ್ಟರ್ಡ್ ಅಕೌಂಟೆಂಟ್‌ ದಿನದ ಅಂಗವಾಗಿ ದೇಶದ ಆರ್ಥಿಕತೆ ರೂಪಿಸುವಲ್ಲಿ ಅವರ ಪಾತ್ರ ಪ‍್ರಮುಖವಾದದ್ದು ಎಂದು ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಮೋದಿ ಶ್ಲಾಘಿಸಿದ್ದಾರೆ.

ಹಿಂದಿನ ಲೇಖನಭಾರತೀಯ ನ್ಯಾಯ ಸಂಹಿತೆ: ಮೊದಲ ಎಫ್‌ಐಆರ್ ದಾಖಲು
ಮುಂದಿನ ಲೇಖನಒತ್ತಾಯಪೂರ್ವಕವಾಗಿ ಮೂರು ಕ್ರಿಮಿನಲ್ ಕಾನೂನುಗಳನ್ನು ಅಂಗೀಕರಿಸಲಾಗಿದೆ: ಮಲ್ಲಿಕಾರ್ಜುನ ಖರ್ಗೆ ಟೀಕೆ