ಮನೆ ಉದ್ಯೋಗ DRDO ಅಧೀನದ ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್’ನಲ್ಲಿ ಉದ್ಯೋಗ

DRDO ಅಧೀನದ ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್’ನಲ್ಲಿ ಉದ್ಯೋಗ

0

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್( CABS) ಇದೀಗ ಸಿವಿಲಿಯನ್ ಮೆಡಿಕಲ್ ಆಫೀಸರ್ ಹುದ್ದೆಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿ ಆಹ್ವಾನಿಸಿದೆ.

Join Our Whatsapp Group

ಹುದ್ದೆಯ ಹೆಸರು : ಸಿವಿಲಿಯನ್ ಮೆಡಿಕಲ್ ಆಫೀಸರ್ (ಗುತ್ತಿಗೆ ಆಧಾರದ ಮೇಲೆ)

ಹುದ್ದೆಗಳ ಸಂಖ್ಯೆ : 1

ವೇತನ : ರೂ.55,000 / – ತಿಂಗಳಿಗೆ (ಕ್ರೂಢೀಕರಿಸಿದ / ಸ್ಥಿರಗೊಳಿಸಿದ)

ವಯಸ್ಸು : 65 ವರ್ಷಗಳಿಗಿಂತ ಕಡಿಮೆ.

ವಿದ್ಯಾರ್ಹತೆ : ಎಂಬಿಬಿಎಸ್, ಕೆಎಂಸಿ / ಐಎಂಸಿ’ಯೊಂದಿಗೆ ನೊಂದಾಯಿತರಾಗಿರಬೇಕು.

ಅಪೇಕ್ಷಣೀಯ : ಪಿಜಿ ಡಿಪ್ಲೊಮ / ವಾಯುಯಾನ ವೈದ್ಯಕೀಯದಲ್ಲಿ ಪದವಿ.

ಕೆಲಸದ ಅನುಭವ

– ಕ್ಲಿನಿಕ್ / ಆಸ್ಪತ್ರೆಯಲ್ಲಿ ಸ್ವತಂತ್ರ ಸಾಮರ್ಥ್ಯದಲ್ಲಿ ಆರ್ಎಂಪಿ ಆಗಿ ಕನಿಷ್ಠ 5 ವರ್ಷಗಳ ಕೆಲಸದ ಅನುಭವವಿರಬೇಕು.

– ಮೇಲಾಗಿ ಬೆಂಗಳೂರಿನವರು ಸ್ಥಳೀಯ ಕನ್ನಡ ಭಾಷೆಯನ್ನು ಚೆನ್ನಾಗಿ ತಿಳಿದಿರಬೇಕು.

ಈ ಹುದ್ದೆಯ ಅವಧಿಯು ಹುದ್ದೆಗೆ ಸೇರಿದ ದಿನಾಂಕದಿಂದ ಒಂದು ವರ್ಷ ಅವಧಿಗೆ ಅಥವಾ ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ ಸಿಎಬಿಎಸ್ ರವರಿಗೆ ಹುದ್ದೆಯು ಸ್ಥಾನಿಕವಾಗುವವರೆಗೆ ಯಾವುದು ಮುಂಚೆಯೋ ಅಲ್ಲಿಯವರೆಗೆ.

ಅರ್ಜಿ ಹಾಕುವ ವಿಧಾನ

ಅರ್ಹ ಅಭ್ಯರ್ಥಿಯು ತಮ್ಮ ಅರ್ಜಿಯನ್ನು ಖಾಲಿ ಹಾಳೆಯ ಮೇಲೆ ಹೆಸರು, ತಂದೆಯ ಹೆಸರು / ಗಂಡನ ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ವಿಳಾಸ, ವಿದ್ಯಾರ್ಹತೆ, ಅನುಭವದ ವಿವರಗಳು, ಕೆಎಂಸಿ / ಐಎಂಸಿ ನೊಂದಣಿ ಸಂಖ್ಯೆಯೊಡನೆ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ ಮತ್ತು ಸ್ವಯಂ ದೃಢೀಕರಿಸಿದ ಬೆಂಬಲಿತ ಧೃಢೀಕರಣ ಪತ್ರಗಳು / ಪ್ರಶಂಸಾ ಪತ್ರಗಳನ್ನು ಒಂದು ಖಾಲಿ ಕಾಗದದ ಮೇಲೆ ಬೆರಳಚ್ಚು ಮಾಡಿಸಬೇಕು. ಈ ವಿವರಗಳನ್ನೊಳಗೊಂಡ ಅರ್ಜಿಯನ್ನು ‘ದಿ ಡೈರೆಕ್ಟರ್, ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್, ವಿಂಡ್ ಟನಲ್ ರೋಡ್ ಬೆಲೂರ್, ಯಮ್ಲೂರ್ ಅಂಚೆ, ಬೆಂಗಳೂರು-560 037’ಗೆ ಕಳುಹಿಸಬೇಕು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಏಪ್ರಿಲ್ 15 ರಿಂದ ಆರಂಭವಾಗಿ 30 ದಿನಗಳೊಳಗಾಗಿ.

ಅರ್ಜಿ ಲಕೋಟೆಯ ಮೇಲೆ ಅಪ್ಲಿಕೇಶನ್ ಯಾವ ಹುದ್ದೆಗೆ ಎಂದು ಬರೆದಿರಬೇಕು.

ಅರ್ಜಿ ಸಲ್ಲಿಸುವವರು ಅರ್ಜಿಯೊಂದಿಗೆ ವಿದ್ಯಾರ್ಹತೆ, ಕಾರ್ಯಾನುಭವ ದಾಖಲೆಗಳ ಸ್ವಯಂ ದೃಢೀಕರಿಸಿದ ಜೆರಾಕ್ಸ್ ಪ್ರತಿಗಳನ್ನು ತಪ್ಪದೇ ಲಗತ್ತಿಸಬೇಕು.