ಮನೆ ವ್ಯಕ್ತಿತ್ವ ವಿಕಸನ ತೊಡಗಿ ಕೊಳ್ಳುವಿಕೆ

ತೊಡಗಿ ಕೊಳ್ಳುವಿಕೆ

0

ನಿಮಗೆ ಬಹುಮಾನ ಬರಲಿ; ಬಾರದಿರಲಿ ;ಸ್ಪರ್ಧೆಗಳಿಗೆ ಸೇರಿ” ಎಂದು ಹಲವು ಅಧ್ಯಾಪಕರುಗಳು ಮಕ್ಕಳಿಗೆ ಹೇಳುತ್ತಿರುತ್ತಾರೆ. ಈ ವಿಚಾರ ಬಹಳಷ್ಟು ಸರಿಯಾಗಿದೆ. ಆದರೆ ಸಾಕಷ್ಟು ಸಂದರ್ಭಗಳಲ್ಲಿ ಇದಕ್ಕಿರುವ ಸರಿಯಾದ ಕಾರಣವೇನೆಂಬುದನ್ನು ಹೇಳುವುದೇ ಇಲ್ಲ ಈ ಮಾತಿನ ಹಿಂದೆ ಬರುವ ನಿಜವಾದ ಕಾರಣ ವಿಕಾಸ ಸಿದ್ಧಾಂತ ಬೆಳವಣಿಗೆಯು ದೈಹಿಕವಾದದ್ದು.ದೇಹಕ್ಕೆ ಪೋಷಕಾಂಶಗಳು ದೊರೆತರೆ ಸಾಕು; ಬೆಳವಣಿಗೆಯು ತಾನೇ ತಾನಾಗಿ ಆಗುತ್ತದೆ ಆದರೆ ವಿಕಾಸ ಎಂತವಾದುದ್ದು ವೈಚಾರಿಕವಾದದ್ದು. ಅದು ತಾನೇ ತಾನಾಗಿ ಆಗುವುದಿಲ್ಲ.

Join Our Whatsapp Group

ವಿಕಾಸ ಚೆನ್ನಾಗಿ ನಡೆಯಬೇಕಾದರೆ ಸಾಕಷ್ಟು ಅನುಭವಗಳು ಆಗಬೇಕು. ಸೆಖೆ, ಚಳಿಯಂತಹ ಅನುಭವಗಳು ಭೌಗೋಳಿಕ  ಪರಿಸರದಿಂದ ಆಗುವಂತಾದ್ದಾಗಿದ್ದು ತಾನೇ ತಾನಾಗಿ ಆಗುತ್ತದೆ. ಆದರೆ ನಾಗರಿಕತೆಯಿಂದ ಉದ್ಭವವಾದ ಸಂಗತಿಗಳು ತಾನೇ ತಾನಾಗಿ ಅನುಭವಕ್ಕೆ ಬರುವುದಿಲ್ಲ. ಅವು ಅನುಭವಕ್ಕೆ ಬರಬೇಕಾದರೆ ನಾವು ಮುಕ್ತವಾಗಿ ತೆರೆದುಕೊಳ್ಳಬೇಕು. ಸ್ಪರ್ಧೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಷ್ಟೂ ಆ ನೆಲೆಯಿಂದ ಉಂಟಾಗುವ ಅನುಭವಗಳು ಹೆಚ್ಚುತ್ತಾ ಹೋಗುತ್ತವೆ. ಅನುಭವಗಳ ಜೊತೆಗೆ ವ್ಯಕ್ತಿತ್ವದ ವಿಕಾಸವೂ ಕೂಡ ನಮಗೇ ಗೊತ್ತಿಲ್ಲದ ರೀತಿಯಲ್ಲಿ ಆಗುತ್ತಾ ಹೋಗುತ್ತದೆ. ಅಂದರೆ ವ್ಯಕ್ತಿತ್ವದ ವಿಕಾಸವು ನಮ್ಮ ತೊಡಗಿಸಿಕೊಳ್ಳುವಿಕೆಯಿಂದಆಗುತ್ತದೆ. ಕೆಲವು ಶಾಲೆಗಳನ್ನು ನೀವು ಗಮನಿಸಿರಬಹುದು ; ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಗಳಲ್ಲಿ ಕೆಲವು ಶಾಲೆಗಳಿಗೆ ಕೆಲವು ವಿಷಯಗಳಲ್ಲಿ ಯಾವಾಗಲೂ ಬಹುಮಾನ ಬರುತ್ತಿರುತ್ತದೆ.ಆದರೆ ಆ ಎಲ್ಲ ಬಹುಮಾನಗಳನ್ನು ಹಾಯ್ದು ಕೆಲವೇ ವಿದ್ಯಾರ್ಥಿಗಳು ಹೊತ್ತು ತರುತ್ತಿರುತ್ತಾರೆ. ಅಂದರೆ ಅಷ್ಟು  ವಿದ್ಯಾರ್ಥಿಗಳು ಹೊತ್ತು ತರುತ್ತಿರುತ್ತಾರೆ ಅಂದರೆ ಅಷ್ಟು ವಿದ್ಯಾರ್ಥಿಗಳಿಗೆ ಮಾತ್ರವೇ ಅಲ್ಲಿ ವಿಕಾಸದ ಅವಕಾಶವು ಮುಕ್ತವಾಗಿ ತೆರೆದಿಡಲ್ಪಟ್ಟಿರುತ್ತದೆ. ನಮ್ಮ ದೇಶದಲ್ಲಿ ಮಕ್ಕಳ ವಿಕಾಸಕ್ಕೆ ಅನೇಕ ತಡೆಗಳು ಇವೆ.ಮಕ್ಕಳು ಅಲ್ಲಿಗೆ ಹೋಗಬಾರದು.ಇದನ್ನು ಮಾಡಬಾರದು,ಹೆಣ್ಣು ಮಕ್ಕಳು ಆಟವನ್ನು ಆಡಬಾರದು, ಗಂಡು ಮಕ್ಕಳು ಈ ಆಟವನ್ನು ಆಡಬಾರದು ಎಂಬಿತ್ಯಾದಿ ನಿಷೇಧಗಳು ಮಕ್ಕಳ ತೊಡಗಿಕೊಳ್ಳುವಿಕೆಯನ್ನು ಕಡಿಮೆ ಮಾಡಿ ಅವರ ವ್ಯಕ್ತಿತ್ವದ ವಿಕಾಸ ವಾಗದಂತೆ ಮಾಡಿಬಿಡುತ್ತವೆ.ಈ ವಿಚಾರದಲ್ಲಿ ಪಾಲಕರು ಮತ್ತು ಶಿಕ್ಷಕರು ಸಾಕಷ್ಟು ಯೋಚಿಸಬೇಕು. ತೀರಾ ಅನಿವಾರ್ಯವಲ್ಲದ ನಿಷೇಧಗಳನ್ನು ಮಕ್ಕಳ ಮೇಲೆ ಹೇರಬಾರದು.ಮಕ್ಕಳು ಸಾಕಷ್ಟು ಸಂದರ್ಭದಲ್ಲಿ ಅನಾಶಕ್ತಿ ತಳೆದು ತೊಡಗಿಸಿಕೊಳ್ಳುವಿಕೆಯಿಂದ ಹಿಂದೆ ಉಳಿಯುತ್ತಾರೆ. ಮನೋಭಾವವನ್ನು ಬದಲಾಯಿಸಿಕೊಳ್ಳಬೇಕು. ಅವಕಾಶ ಇರುವ ಎಲ್ಲ ಚಟುವಟಿಕೆಗಳಲ್ಲಿಯೂ ತೊಡಗಿಗೊಳಿಸಬೇಕು. ಹೀಗೆ ತೊಡಗಿಕೊಳ್ಳುತ್ತಾ ಹೋದರೆ ಅವಕಾಶಗಳನ್ನು ಸೃಷ್ಟಿಸಿಳಕೊಂಡು ತೊಡಗಿಸಿಕೊಳ್ಳುವುದು ಹೇಗೆಂದೂ ಗೊತ್ತಾಗುತ್ತದೆ.ಆದರಿಂದ ನಿರ್ದಿಷ್ಟ ಉದ್ದೇಶ  ಈಡೇರದಿರಬಹುದು. ಆದರೆ ವ್ಯಕ್ತಿತ್ವ ವಿಕಾಸ ಆಗುತ್ತದೆ.