ಮನೆ ರಾಷ್ಟ್ರೀಯ ಹಾರಾಟ ವೇಳೆ ಇಂಜಿನ್ ಸ್ಥಗಿತ – ಟೇಕಾಫ್ ಆದ ಸ್ವಲ್ಪ ಹೊತ್ತಿಗೆ ಏರ್‌ ಇಂಡಿಯಾ ಫ್ಲೈಟ್‌...

ಹಾರಾಟ ವೇಳೆ ಇಂಜಿನ್ ಸ್ಥಗಿತ – ಟೇಕಾಫ್ ಆದ ಸ್ವಲ್ಪ ಹೊತ್ತಿಗೆ ಏರ್‌ ಇಂಡಿಯಾ ಫ್ಲೈಟ್‌ ವಾಪಸ್‌

0

ನವದೆಹಲಿ : ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ, ಏರ್ ಇಂಡಿಯಾ ವಿಮಾನದ ಬಲಭಾಗದ ಇಂಜಿನ್ ಹಾರಾಟದ ವೇಳೆ ಏಕಾಏಕಿ ಸ್ಥಗಿತಕೊಂಡಿದ್ದು, ಪರಿಣಾಮ ಟೇಕಾಫ್ ಆದ ಸ್ವಲ್ಪ ಹೊತ್ತಲ್ಲೇ ದೆಹಲಿಗೆ ಮರಳಿದೆ.

ಇಂದು (ಸೋಮವಾರ) ದೆಹಲಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ 887 ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಕುರಿತು ಡಿಜಿಸಿಎ ಮಾಹಿತಿ ನೀಡಿದ್ದು, ವಿಮಾನ ಹಾರಾಟದ ವೇಳೆ ಒಂದು ಇಂಜಿನ್‌ನ ಕಾರ್ಯ ಸ್ಥಗಿತಗೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಲಾಗಿದೆ.

ಅವಳಿ ಇಂಜಿನ್ ಹೊಂದಿರುವ ವಿಮಾನಗಳು ಒಂದು ಇಂಜಿನ್ ಮೂಲಕ ಲ್ಯಾಂಡ್ ಆಗಬಹುದು. ವಿಮಾನದಲ್ಲಿ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.

ಇಂಜಿನ್ ವೈಫಲ್ಯದ ಕುರಿತು ಪರಿಶೀಲನೆ ನಡೆಯುತ್ತಿದೆ. ಬಲಭಾಗದ ಇಂಜಿನ್‌ನಲ್ಲಿ ಆಯಿಲ್ ಪ್ರೇಷರ್‌ ಶೂನ್ಯಕ್ಕೆ ಕುಸಿದಿತ್ತು. ಈ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ತಿಳಿದುಬಂದಿದೆ.