ಮೆದುಳಿನ ನರಗಳ ಕಾರ್ಯವೈಖರಿಯಲ್ಲಿ ದೋಷವಿದ್ದಾಗ ಮೂರ್ಛೆ (ಫಿಟ್ಸ್) ಬರುವುದು ಒಂದು ಸಾಮಾನ್ಯ ಕಾರಣ. ಪ್ರತಿ ಸಾವಿರ ಮಕ್ಕಳಲ್ಲಿ 4-5 ಮಕ್ಕಳಿಗೆ ಫಿಟ್ಸ್ ಇರಬಹುದು. ಫಿಟ್ಸ್ ಬಂದಿದೆ ಎಂದರೆ ಮೆದುಳಿನಲ್ಲಿ ಯಾವುದು ದೋಷವಿದೆ ಎಂದು ತಿಳಿಯಬೇಕು. ಮೆದುಳಿನ ದೋಷವನ್ನು ತಿಳಿಯಲು ಅಗತ್ಯವಾದ ಪರೀಕ್ಷೆಗಳನ್ನು ತಪ್ಪದೆ ಮಾಡಬೇಕು. ದೋಷದ ಮೇಲೆ ಚಿಕಿತ್ಸೆ ಅವಲಂಬಿಸಿರುತ್ತದೆ.
ಫಿಟ್ಸ್ ಬರುವ ಬಹಳಷ್ಟು ಪ್ರಸಂಗಗಳಲ್ಲಿ ಮೂಲ ಕಾರಣವೇನೆಂಬುದು ಸ್ಪಷ್ಟವಾಗಿ ತಿಳಿಯಲಾಗದು. ಕಾರಣ ಸ್ಪಷ್ಟವಾಗಿ ನಿರ್ಧಾರವಾಗದಿದ್ದಾಗ ಅಂತಹ ಫಿಟ್ಸ್ ನ್ನು ಇಡಿಯೋಪತಿಕ್ ಸೀಜರ್ಸ್ ಎನ್ನುತ್ತಾರೆ.
ಒಂದು ವೇಳೆ ಮೆದುಳಿನಲ್ಲಿರುವ ದೋಷವೇನೆಂಬುದು ತಿಳಿದು ಬಂದರೆ ಅಂತಹ ಫಿಟ್ಸ್ ನ್ನು ಸಿಂಪ್ಟಮೇಟಿಕ್ ಸಿಸರ್ಸ್ ಎನ್ನುತ್ತಾರೆ. ಇಲ್ಲವೇ ಸೆಕೆಂಡರಿ ಸೀಜರ್ಸ್ ಇಲ್ಲವೇ ಆರ್ಗಾನಿಕ್ ಸೀಜರ್ಸ್ ಎನ್ನುತ್ತಾರೆ.
ಕೆಲವು ಮಕ್ಕಳಿಗೆ ಫಿಟ್ಸ್ ಬಂದಿದ್ದರೂ ಮತ್ತೆ ಮತ್ತೆ ಬರುವುದಿಲ್ಲ. ಇಲ್ಲವೇ ಚಿಕಿತ್ಸೆಯಿಂದಾಗಿ ಸುಲಭವಾಗಿ ವಾಸಿಯಾಗಿಬಿಡುತ್ತದೆ.
ಸೀಜರ್ಸ್ (ಫಿಟ್ಸ್) ಎಂದರೆ
ಮೆದುಳಿನ ಕಾರ್ಯವೈಖರಿಯಲ್ಲಿ ಅವ್ಯವಸ್ಥೆಯಾಗಿ ಇದ್ದಕ್ಕಿದ್ದಂತೆ ನಿಯಂತ್ರಣವಿಲ್ಲದೆ ಬರುವ ಫಿಟ್ಸ್ ನ್ನು ಸೀಜರ್ಸ್ ಎನ್ನುತ್ತಾರೆ. ಸೀಜರ್ಸ್ ಬಂದಾಗ ಪ್ರಜ್ಞೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಬಹುದು. ಇಲ್ಲವೇ ಅರೆಪ್ರಜ್ಞಾವಸ್ಥೆಯಲ್ಲಿರಬಹುದು. ಅಸಾಮಾನ್ಯವಾದ ಮಾಂಸಖಂಡಗಳ ಚಲನೆ ಉಂಟಾಗುತ್ತದೆ. ವ್ಯಕ್ತಿಯು ದೃಷ್ಟಿ ಮತ್ತು ಕೈಗಳು ಅಸಹಜವಾಗಿ ವರ್ತಿಸುತ್ತದೆ. ಬಿಡುವಿಲ್ಲದ ಕೈಕಾಲುಗಳು ಸೆಳೆಯಲ್ಪಡುತ್ತದೆ. ತಲೆ ಹಾಕುತ್ತಿರುತ್ತದೆ. ಬಾಯಿಯಿಂದ ನೊರೆ ಬರುತ್ತದೆ. ಕಣ್ಣಿನ ಗುಡ್ಡೆಗಳು ತಿರುಗುತ್ತವೆ. ಕೆಲವರಿಗೆ ಎಷ್ಟೇ ಶಾರೀರಿಕ ಚಲನೆ ಇದ್ದರೂ ಪ್ರಜ್ಞೆ ಕಳೆದುಕೊಳ್ಳುವುದಿಲ್ಲ.
ಜ್ವರ ಮತ್ತಿತರ ರೋಗಗಳಿಲ್ಲದೆ ಸದಾ ಫಿಟ್ಸ್ ಬರುತ್ತಿದ್ದರೆ, ಅವರನ್ನು ಎಪಿಲೆಪ್ಸಿ ರೋಗಿಗಳೆದು ಹೆಸರಿಸಬಹುದು.
ವಿವಿಧ ರೋಗಗಳಿದ್ದಾಗ ಫಿಟ್ಸ್ :-
ಪಿಟ್ಸ್ ಬರಲು ಹಲವಾರು ರೋಗಗಳು ಕಾರಣವಾಗುತ್ತದೆ. ಮೆದುಳಿನಲ್ಲಿ ಸೋಂಕಾದಾಗ ಫಿಟ್ಸ್ ಬರುತ್ತದೆ. ಮೆನಿಂಜೈಟಿಸ್, ಎನ್ ಕೆಫಲೈಟಿಸ್ ನಂಥ ರೋಗಗಳಿದ್ದಾಗ ಫಿಟ್ಸ್ ಬರುತ್ತದೆ. ಈ ರೋಗಗಳು ಮೆದುಳಿನ ಬಾವು ಎಂದು ಕರೆಯುತ್ತಾರೆ. ಮೆದುಳಿನಲ್ಲಿ ಕಿವು ಗಡ್ಡೆಗಳಿದ್ದಾಗ ಕೂಡ ಫಿಟ್ಸ್ ಬರುತ್ತದೆ.
ಯಾವುದಾದರೂ ಕಾರಣದಿಂದ ಉಸಿರಾಡಲು ಕಷ್ಟವಾದಾಗ, ಮೆದುಳಿಗೆ ಆಮ್ಲಜನಕದ ಕೊರತೆಯಾಗಿ ಫಿಟ್ಸ್ ಬರುತ್ತದೆ. ಮೆದುಳಿಗೆ ಸೋಂಕು ತಗುಲಿ ವಾಸಿಯಾಗಿದ್ದರೂ ಕೂಡ, ಮೆದುಳಿಗಾಗಿರುವ ತೊಂದರೆಯಾದರೆ ಫಿಟ್ಸ್ ಬರುತ್ತದೆ. ಮೆದುಳಿಗೆ ಪೆಟ್ಟಾದರೆ, ಮೆದುಳಿನಲ್ಲಿರುವ ಕ್ಯಾನ್ಸರ್ ಗಡ್ಡೆಗಲು ರಕ್ತನಾಳಗಳನ್ನು ತುಳಿದರೆ ಕೂಡ ಫಿಟ್ಸ್ ಬರುತ್ತದೆ.
ಮೆದುಳಿನಲ್ಲಿ ಗ್ಲುಕೋಸ್ ಪ್ರಮಾಣ ಕಡಿಮೆಯಾದರೆ ವಿಷ ಪದಾರ್ಥಗಳ ಸೇವನೆಯಿಂದಾಗಿ ಮೆದುಳಿನ ಕಣಗಳಿಗೆ ತೊಂದರೆಯಾದರೆ ಫಿಟ್ಸ್ ಬರುತ್ತದೆ ಹಾಗಾಗಿ ಸೀಸರ್ಸ್ ಬಂದಾಗ ಮೂಲ ಕಾರಣವನ್ನು ಪರಿಶೀಲಿಸಿ ಅದಕ್ಕೆ ಚಿಕಿತ್ಸೆ ಮಾಡಬೇಕಾಗುತ್ತದೆ.
ಸೀಸರ್ಸ್ ವಿಧಗಳು :-
ಸೀಸರ್ಸ್ ಫಿಟ್ಸ್ ನ್ನು ಸ್ಥೂಲವಾಗಿ ಎರಡು ಭಾಗ ಮಾಡುತ್ತಾರೆ.
1.ಪಾರ್ರ್ಷಿಯಲ್ ಸೀಜರ್ಸ್
2.ಜನರಲೈಜ್ಡ್ ಸೀಜರ್ಸ್
ಪಾರ್ಷಿಯಲ್ ಸೀಜರ್ಸ್ ನ್ನು ಸರಳ ಫಿಕ್ಸ್ ಎಂದು ಹೆಸರಿಸಬಹುದು. ಅದರಲ್ಲಿ ಮೆದುಳಿನ ಎಡ ಮತ್ತು ಬಲ ಭಾಗ ಪಾಕ್ಷಿಕವಾಗಿ ಫಿಟ್ಸ್ ಗೆ ಕಾರಣವಾಗುತ್ತದೆ. ಜನರಲೈಸೆಡ್ ಫಿಕ್ಸ್ ಕೊಟ್ಟು ಮೆದುಳು ಫಿಟ್ಸ್ ನಲ್ಲಿ ಭಾಗಿಯಾಗಿರುತ್ತದೆ.
ಜನರಲೈಜ್ಡ್ ಸೀಸರ್ ಸಂಪೂರ್ಣ ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಅರಿವು ಪೂರ್ತಿಯಾಗಿ ಇರದಿರುವುದರಿಂದ, ಪಿಟ್ಸ್ ಬಂದು ಹೋದ ನಂತರ ಅದು ಬಂದಿದ್ದು ರೋಗಿಗೆ ಗೊತ್ತಾಗುವುದಿಲ್ಲ. ಪಾರ್ಷಿಯಲ್ ಸೀಜರ್ಸ್ ನಲ್ಲಿ ಫಿಟ್ಸ್ ನ ಆರಂಭ ರೋಗಿಗೆ ಗೊತ್ತಿರುತ್ತದೆ. ಮೆದುಳಿನಲ್ಲಿ ಏನೋ ಮಿಂಚಿದಂತೆ, ಅರಚಿದಂತೆ ಜ್ಞಾಪಕವಿರುತ್ತದೆ.
ಸೆಕೆಂಡರಿ ಇಲ್ಲವೇ ಆರ್ಗಾನಿಕ್ ಎಪಿಲೆಪ್ಸಿಯಲ್ಲಿ ರೋಗಿಯ ಮಾನಸಿಕ ಸ್ಥಿತಿಗೆ ತೊಂದರೆಯಾಗುತ್ತದೆ. ತಿಳುವಳಿಕೆ ಮತ್ತು ಜ್ಞಾಪಕ ಶಕ್ತಿ ಮಂದವಾಗುತ್ತದೆ. ಇಂಡಿಯೋಪಥಿಕ್ ಎಪಿಲೆಪ್ಸಿಯಲ್ಲಿ ರೋಗಿಯ ತಿಳುವಳಿಕೆಗೆ ಧಕ್ಕೆಯಾಗುವುದಿಲ್ಲ.
ಪಾರ್ಷಿಯಲ್ ಸೀಜರ್ಸ್ :-
ಪಾರ್ಷಿಯಲ್ ಸೀಜರ್ಸ್ ಕೆಲವರಿಗೆ ಕಡಿಮೆ ಪ್ರಮಾಣದಲ್ಲಿ ಬರುತ್ತದೆ. ಇಂತಹ ಸಮಯದಲ್ಲಿ ಪ್ರಜ್ಞೆ ಕಳೆದುಕೊಳ್ಳುವುದಿಲ್ಲ. ಕಾಂಪ್ಲೆಕ್ಸ್ ಸೀಜರ್ಸ್ ನಲ್ಲಿ ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಪಾರ್ಷಿಯಲ್ ಸೀಜರ್ಸ್ ನಲ್ಲಿ ಮುಖ್ಯವಾಗಿ ಮುಖ, ಕತ್ತು, ಕೈಕಾಲುಗಳು, ಎದೆಯ ಸ್ನಾಯುಗಳು ಸಂಕುಚಿತವಾಗುತ್ತದೆ. ಕತ್ತಿನ ಸ್ನಾಯುಗಳವರೆಗೆ ಮಾತ್ರ ಪಾರ್ಷಿಯಲ್ ಸೀಜರ್ಸ್ ಬಂದಾಗ ತಲೆಯನ್ನು ಕಾಣಿಸುವುದು, ಕಣ್ಣುಗುಡ್ಡೆಗಳು ಒಂದು ಪಕ್ಕಕ್ಕೆ ಎಳೆಯುವುದು ಇರುತ್ತದೆ.
ಕೆಲವರಿಗೆ ಪಾರ್ಷಿಯಲ್ ಸೀಜರ್ಸ್ ಅಲ್ಲದ, ಮುಖ ಮತ್ತು ಭುಜದ ಬಳಿಯ ಸ್ನಾಯುಗಳು ಸ್ವಲ್ಪಮಟ್ಟಿಗೆ ಕಂಪಿಸುತ್ತದೆ. ಹೀಗೆ ಕಂಪಿಸುವುದನ್ನು ಟಿಕ್ಸ್ ಎನ್ನುತ್ತಾರೆ. ಟಿಕ್ಸ್ ಸಿಜರ್ಸ್ ಅಲ್ಲ. ಸೀಜರ್ಸ್ ಮೆದುಳಿನಲ್ಲಿನ ಅಸಾಮಾನ್ಯ ವರ್ತನೆಯಿಂದ ಬಂದರೆ, ಟಿಕ್ಸ್ ಕೇವಲ ಮುಖ ಮತ್ತು ಕೈಗಳ ಮಾಂಸಖಂಡಗಳಲ್ಲಿ ಉದ್ಭವಿಸುವ ಸಾಮಾನ್ಯ ವರ್ತನೆ ಯಿಂದಾಗಿರುತ್ತದೆ.ಇ.ಇ.ಜಿ ಪರೀಕ್ಷೆಯಿಂದ ಯಾವುದೆಂಬುದು ತಿಳಿಯುತ್ತದೆ. ಪಾರ್ಷಿಯಲ್ ಸೀಜರ್ಸ್ ಆದರೆ ಇ.ಇ.ಜಿ ಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಟಿಕ್ಸ್ ಆದರೆ ಇ.ಇ.ಜಿಯಲ್ಲಿ ವ್ಯತ್ಯಾಸ ವಾಗುವುದಿಲ್ಲ.
ಪಾರ್ಷಿಯಲ್ ಸೀಜರ್ಸ್ ತಾತ್ಕಾಲಿಕವಾಗಿ ಮಾನಸಿಕ ವ್ಯತ್ಯಾಸ, ಸ್ಪರ್ಷದ ಅಸಾಮಾನ್ಯತೆ ಗೋಚರವಾಗುತ್ತದೆ.
ಪೆಟಿಟ್ ಮಾಲ್ ಎಪಿಲೆಪ್ಸಿ :-
ಇದು ವಿಚಿತ್ರವಾದ ಮೂರ್ಛೆರೋಗ. ಇದರಲ್ಲಿ ಫಿಟ್ಸ್ ಬರುವುದಿಲ್ಲ ಮಗುವಿಗೆ ಎಲ್ಲ ಎಚ್ಚರವಿದ್ದಂತೆಯೇ, ಇದ್ದಕ್ಕಿದ್ದಂತೆ ಕ್ಷಣಕಾಲ ಮಾಂಸ ಖಂಡಗಳು ನಿಷ್ಕ್ರಿಯವಾಗುತ್ತದೆ. ಸ್ನಾಯುಗಳಲ್ಲಿ ಯಾವುದೇ ಚೈತನ್ಯವೂ ಇರುವುದಿಲ್ಲ. ಮಾತುಕೂಡ ನಿಂತು ಹೋಗುತ್ತದೆ. ಈ ಸಮಯದಲ್ಲಿ ಮುಖದಲ್ಲಿ ಯಾವುದೇ ಭಾವನೆಗಳಿರುವುದಿಲ್ಲ. ಕಣ್ಣುಗಳು ಪೂರ್ತಿ ತೆರೆದಿದ್ದು, ಯಾವ ಚಲನೆಯೂ ಇರದೆ ತೀಕ್ಷ್ಣವಾಗಿ ನೋಡುತ್ತಿರುವಂತಿರುತ್ತದೆ. ಈಗ ಸ್ಥಿತಿ ಕೇವಲ ಕೆಲವು ಸೆಕೆಂಡುಗಳು ಮಾತ್ರ. ನಂತರ ಯಥಾಸ್ಥಿತಿಗೆ ಹಿಂದಿರುಗುತ್ತಾರೆ. ಸ್ವಲ್ಪ ಓಡಾಡಿದಂತೆ ಕಂಡರೂ ವ್ಯಕ್ತಿಬಿದ್ದು ಹೋಗುವುದಿಲ್ಲ. ನಿಂತಿದ್ದರೆ ನಿಂತಿದ್ದಂತೆ ಇರುತ್ತಾರೆ. ಆದರೆ ಕೈಯಲ್ಲಿ ಏನಾದರೂ ಇದ್ದರೆ ಬಿದ್ದು ಹೋಗಿರುತ್ತದೆ. ಕ್ಷಣಕಾಲದ ನಂತರ ಆ ವ್ಯಕ್ತಿ ಏನು ಆಗಿಲ್ಲವೆಂಬಂತೆ ತನ ಕೆಲಸ ಮುಂದುವರಿಸುತ್ತಾನೆ. ನಡೆದದ್ದೇನೆಂದು ವ್ಯಕ್ತಿಗೆ ಗೊತ್ತಾಗಿರುವುದಿಲ್ಲ.
ಪೆಟಿಟ್ ಮಾಲ್ ಎಪಿಲೆಪ್ಸಿ 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವುದು ಅಪರೂಪ. ಹೆಣ್ಣು ಮಕ್ಕಳಿಗೆ ಇದು ಹೆಚ್ಚಾಗಿ ಕಂಡುಬರುತ್ತದೆ. 30 ಸೆಕೆಂಡುಗಳಿಗಿಂತಲೂ ಹೆಚ್ಚಾಗಿರುವುದಿಲ್ಲ. ಈ ಎಪಿಲೆಪ್ಸಿ ಬಂದ ನಂತರ 3-4 ನಿಮಿಷಗಳವರೆಗೆ ಹೆಚ್ಚು ಉಸಿರಾಟವಿರುತ್ತದೆ.
-ಮುಂದುವರೆಯುತ್ತದೆ…