ನವದೆಹಲಿ: ವಜ್ರ ಕತ್ತರಿಸುವುದು ಅಗಾಧ ಕುಶಲತೆ ಮತ್ತು ನಿಖರತೆ ಅಗತ್ಯವಾಗಿದ್ದು, ಈ ಕೆಲಸದಲ್ಲಿ ಒಂದು ಕಣ್ಣು ಕಳೆದುಕೊಂಡರು ಸಹ ಅದು ಸಂಪೂರ್ಣ ಅಂಗವೈಕಲ್ಯವಾಗಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್, ಪರಿಹಾರ ಮೊತ್ತ ಹೆಚ್ಚಿಸಿ ಆದೇಶಿಸಿದೆ.
ಏನಿದು ಪ್ರಕರಣ ?
2005 ರ ಫೆಬ್ರವರಿ 15 ರಂದು ಜಯನಂದನ್ ಅವರು ಬೈಕಿನಲ್ಲಿ ಕುನ್ನಂಕುಳಂ ವಡಂಕೇರಿಗೆ ಹೋಗುತ್ತಿದ್ದ ವೇಳೆಯಲ್ಲಿ ಆಟೋಗೆ ಡಿಕ್ಕಿ ಹೊಡೆದು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡರು. ಇವರು ವಜ್ರ ಕತ್ತರಿಸುವ ಕೆಲಸ ಮಾಡುತ್ತಿದ್ದರು. ತ್ರಿರೊರಿನ ಅಪಘಾತ ಕ್ಷೇಮುಗಳ
ನ್ಯಾಯಮಂಡಳಿಯು ಶೇಕಡ 49 ರಷ್ಟು ಅಂಗವೈಕಲ್ಯ ಎಂದು ಪರಿಗಣಿಸಿ ಶೇಕಡ 8 ರಬಡ್ಡಿ ಸೇರಿ 8.70 ಲಕ್ಷ ರೂಪಾಯಿ ಪರಿಹಾರ ನೀಡಿತು. ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಪರಿಹಾರ ಮೊತ್ತವನ್ನು 10,57.500 ರೂ.ಗೆ ಹೆಚ್ಚಿಸಿತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು. ವಿಚಾರಣೆ ನಡೆಸಿ ಒಂದು ಕಣ್ಣು ಕಳೆದುಕೊಂಡರೂ ಅದು ಶೇಕಡ 100 ರಷ್ಟು ಅಂಗವೈಕಲ್ಯವಾದಂತೆ. ಈ ಹಿನ್ನೆಲೆಯಲ್ಲಿ ಶೇಕಡ 8 ರ ಬಡ್ಡಿಯೊಂದಿಗೆ 15,98,000 ರೂಪಾಯಿ ಪರಿಹಾರ ನೀಡುವಂತೆ ನಿರ್ದೇಶನ ನೀಡಿದೆ.














