ಮನೆ Uncategorized ಪ್ರತಿಯೊಬ್ಬ ವಿದ್ಯಾರ್ಥಿಗಳು ಪುಸ್ತಕ ,ಪತ್ರಿಕೆ ಓದುವ ಹವ್ಯಾಸ  ಬೆಳೆಸಿಕೊಳ್ಳಿ : ಶ್ರೀ ಕವಿರಾಜ್

ಪ್ರತಿಯೊಬ್ಬ ವಿದ್ಯಾರ್ಥಿಗಳು ಪುಸ್ತಕ ,ಪತ್ರಿಕೆ ಓದುವ ಹವ್ಯಾಸ  ಬೆಳೆಸಿಕೊಳ್ಳಿ : ಶ್ರೀ ಕವಿರಾಜ್

0

ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿಗಳು ಪುಸ್ತಕ ಹಾಗೂ ಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು “ಚಿತ್ರೋದ್ಯಮ”ದ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ತಿಳಿ ಹೇಳಿ. ಬರವಣಿಗೆಯನ್ನು ಹೇಗೆ ರೂಢಿಸಿಕೊಳ್ಳಬೇಕು ಹಾಗೂ ಸ್ವಂತ ಕಲೆಗಳನ್ನು ಅಭ್ಯಾಸ ಮಾಡಿ ಮುಂದುವರೆಯುವುದು ಹೇಗೆ ಎಂಬುದರ ಬಗ್ಗೆ ಖ್ಯಾತ ಚಲನ ಚಿತ್ರ ಸಂಗೀತ ನಿರ್ದೇಶಕರು ಹಾಗೂ ಗೀತೆ ರಚನಕಾರ ಕವಿರಾಜ್ ತಿಳಿಸಿದರು.

ಇಂದು ವಿಶ್ವಪುಸ್ತಕ ಹಾಗೂ ಕೃತಿ ಸ್ವಾಮ್ಯ ದಿನಾಚರಣೆ ಅಂಗವಾಗಿ ನಗರಜಿಲ್ಲಾ ಕೇಂದ್ರ ಗ್ರಂಥಾಲಯ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಇಂದು ಪೀಪಲ್ಸ್ಪಾರ್ಕ್ ಗ್ರಂಥಾಲಯದಲ್ಲಿ ಪುಸ್ತಕ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯುಕ್ರಮದಲ್ಲಿ ಪ್ರಯೋಗ, ಮೈಸೂರು ಸಂಸ್ಥೆಯ ವತಿಯಿಂದ ಸುಮಾರು 25 ಮಕ್ಕಳು ಭಾಗವಹಿಸಿದ್ದು, ಮಕ್ಕಳಿಗೆ “ಗೊಗ್ಗಯ್ಯ ಎಲ್ಲಿ” ಎಂಬ ಕಥಾ ವಾಚನವನ್ನು ಹಾಗೂ ಇದರ ಸಂಬoಧಿಸಿತ ಚಟುವಟಿಕೆಯನ್ನು ಬೆಂಗಳೂರಿನ ಪ್ರಥಮ್ ಬುಕ್ಸ್ನ ಸಂಪಾದಕಿಯಾದ ಭಾರ್ಗವಿ ಅವರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತರಾದ ರಮೇಶ್ ನರಸಯ್ಯ, ನಗರ ಗ್ರಂಥಾಲಯ ಪ್ರಾಧಿಕಾರ ಸದಸ್ಯರು, ಕನ್ನಡ ಪ್ರಾಧ್ಯಾಪಕರಾದ ಲೋಲಾಕ್ಷಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಮಂಜುನಾಥ್, ಪೀಪಲ್ಸ್ ಪಾರ್ಕ್ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು, ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಮಂಜುನಾಥ್.ಬಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.