ಮನೆ ಅಪರಾಧ ಸಾವಿನ ಹಾದಿಯಾದ ಕೊಲ್ಹಾಪುರ-ಹುಬ್ಬಳ್ಳಿ ಹೆದ್ದಾರಿ, ಅಪಘಾತ ತಡೆಗೆ ಕ್ರಮಕೈಗೊಳ್ಳಿ: ಹೆಚ್ ಡಿಕೆ

ಸಾವಿನ ಹಾದಿಯಾದ ಕೊಲ್ಹಾಪುರ-ಹುಬ್ಬಳ್ಳಿ ಹೆದ್ದಾರಿ, ಅಪಘಾತ ತಡೆಗೆ ಕ್ರಮಕೈಗೊಳ್ಳಿ: ಹೆಚ್ ಡಿಕೆ

0

ಬೆಂಗಳೂರು(Bengaluru): ಹುಬ್ಬಳ್ಳಿ ಹೊರವಲಯದಲ್ಲಿ ನಡೆದಿರುವ ಬೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ,ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಅವರು, ಅಪಘಾತ ಸಂಭವಿಸಿದ ಕೊಲ್ಹಾಪುರ-ಹುಬ್ಬಳ್ಳಿ ಹೆದ್ದಾರಿಯ ಈ ಜಾಗದಲ್ಲಿ ಪದೇಪದೆ ದುರಂತಗಳು ಸಂಭವಿಸುತ್ತಿವೆ, ಅದು ‘ಸಾವಿನ ಹೆದ್ದಾರಿ’ ಆಗಿದೆ ಎಂದು ಜನರು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಗಮನ ಹರಿಸಿ ಮತ್ತೆಅಪಘಾತಗಳು ಸಂಭವಿಸದಂತೆ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ ಹೊರ ವಲಯದಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ 8 ಜನರು ಸಾವನ್ನಪ್ಪಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಕಳೆದ ತಡರಾತ್ರಿ ಸಂಭವಿಸಿರುವ ಈ ದುರಂತದಲ್ಲಿ 26 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ದುರಂತದಲ್ಲಿ ಅಸುನೀಗಿದ ನತದೃಷ್ಟರೆಲ್ಲರಿಗೂ ಚಿರಶಾಂತಿ ಸಿಗಲಿ ಹಾಗೂ ಆವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ, ಗಾಯಾಳುಗಳೆಲ್ಲ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಹಿಂದಿನ ಲೇಖನಮಹಾಲಕ್ಷ್ಮಿ ಲೇ‌ಔಟ್ ಕ್ಷೇತ್ರದಲ್ಲಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕೆಲಸ: ಸಚಿವ ಕೆ.ಗೋಪಾಲಯ್ಯ
ಮುಂದಿನ ಲೇಖನಆಧಾರರಹಿತ ವರದಕ್ಷಿಣೆ ಕಿರುಕುಳ ಆರೋಪ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್