ಮನೆ ರಾಜಕೀಯ ಬೆಲೆ ಏರಿಕೆ ವಿರುದ್ಧ ಹೋರಾಡುವುದಾದರೆ ನಾನು ಕೇಸರಿ ಶಾಲು ಹಾಕಿ ಬರುತ್ತೇನೆ: ಹೆಚ್ ಡಿಕೆ

ಬೆಲೆ ಏರಿಕೆ ವಿರುದ್ಧ ಹೋರಾಡುವುದಾದರೆ ನಾನು ಕೇಸರಿ ಶಾಲು ಹಾಕಿ ಬರುತ್ತೇನೆ: ಹೆಚ್ ಡಿಕೆ

0

ಬೆಂಗಳೂರು: ಬೆಲೆ ಏರಿಕೆ ವಿರುದ್ಧ ಹೋರಾಡುವುದಾದದರೆ ನಾನು ಕೇಸರಿ ಶಾಲು ಹಾಕಿಕೊಂಡು ಹೋರಾಟಕ್ಕೆ ಬರುತ್ತೇನೆ. ಹೋರಾಟಕ್ಕೆ ನೀವು ರೆಡಿ ಇದ್ದೀರಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ  ಹೆಚ್.ಡಿ.ಕುಮಾರಸ್ವಾಮಿ, ಮುಸ್ಲೀಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್ ನಿಷೇಧ ಹೀಗೆ ಅಭಿಯಾನ ಆರಂಭಿಸಿರುವ ಹಿಂದೂಪರ ಸಂಘಟನೆಗಳ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದ್ದಾರೆ.

ಇದೇ ವೇಳೆ  ಸಿಎಂ ಬಸವರಾಜ ಬೊಮ್ಮಾಯಿ ಮೌನದ ಬಗ್ಗೆ ಟೀಕಿಸಿರುವ ಹೆಚ್.ಡಿ ಕುಮಾರಸ್ವಾಮಿ, ಹಲವಾರು ವಿವಾದಗಳಿದ್ದರೂ ಸಿಎಂ ಮೌನವಾಗಿದ್ದಾರೆ. ಮನ್ ಮೋಹನ್ ಸಿಂಗ್ ಮೌನಿ ಅನ್ನುತಿದ್ದರು ಈಗ ಬೊಮ್ಮಾಯಿ ಮೌನವಾಗಿದ್ದಾರೆ. ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ ರಿಮೋಟ್ ಕಂಟ್ರೋಲ್ ನಲ್ಲಿ ನಡೆಯುತ್ತಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ… ಮುಸ್ಲಿಂ ಸಮುದಾಯದ ಮತ ವಿಭಜನೆಗೆ ಹೆಚ್ ಡಿಕೆಗೆ ಬಿಜೆಪಿ ಸುಪಾರಿ: ಎಂ.ಲಕ್ಷ್ಮಣ್ ಆರೋಪ

ಹೆಚ್.ಡಿಕೆ ಗಾಳಿಪಟ, ಸ್ವಂತಿಕೆ ಇಲ್ಲದ ರಾಜಕಾರಣಿ ಎಂದು ಕುಟುಕಿದ್ದ ರಾಜ್ಯ ಬಿಜೆಪಿಗೆ ಟಾಂಗ್ ನೀಡಿದ ಹಚ್.ಡಿ ಕುಮಾರಸ್ವಾಮಿ,  ಮುಂದಿನ ಚುನಾವಣೆಯಲ್ಲಿ ಗಾಳಿಪಟದ ಶಕ್ತಿ ಏನೆಂದು ತೋರಿಸುತ್ತೇನೆ ಎಂದರು.