ಬೆಂಗಳೂರು : ಬಿಗ್ ಬಾಸ್ ನಲ್ಲಿ ಗೋಲ್ಡ್ ನಿಂದಲೇ ಹವಾ ಸೃಷ್ಟಿಸಿದ್ದ ಸುರೇಶ್ ಅಲಿಯಾಸ್ ಗೋಲ್ಡ್ ಸುರೇಶ್ ಮೇಲೆ ಲಕ್ಷಾಂತರ ರೂಪಾಯಿ ವಂಚನೆ ಆರೋಪ ಕೇಳಿಬಂದಿದೆ.
ಕೇಬಲ್ ಚಾನೆಲ್ ಸೆಟ್ ಅಪ್ ಮಾಡಿ ಕೊಡೋದಾಗಿ ಹೇಳಿ ಹಣ ಪಡೆದು ಗೋಲ್ಡ್ ಸುರೇಶ್ ಲಕ್ಷಾಂತರ ಹಣ ನುಂಗಿ ನೀರು ಕುಡಿದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ.
ಚಾನೆಲ್ ಸೆಟ್ ಅಪ್ ಸಂಬಂಧ ರಾಯಚೂರು ಜಿಲ್ಲೆಯ ಮಾನ್ವಿಯ ಮೈನುದ್ದಿನ್ ಎನ್ನವವರು ಗಂಭೀರ ಆರೋಪ ಮಾಡಿದ್ದಾರೆ. ಹಣ ಪಡೆದು ಇದೀಗ ಗೋಲ್ಡ್ ಸುರೇಶ್ ಮೋಸ ಮಾಡಿದ್ದಾರೆ. ಫೋನ್ ಕಾಲ್ ಗೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ತನ್ನ ವೇಷ ಭೂಷಣಗಳಿಂದಲೇ ಗೋಲ್ಡ್ ಸುರೇಶ್ ಸಿಕ್ಕಾಪಟ್ಟೆ ಸೌಂಡ್ ಕ್ರಿಯೇಟ್ ಮಾಡಿದ್ದರು. ಬಿಗ್ ಬಾಸ್ ಗೆ ಬಂದ ಶ್ರೀಮಂತ ಸ್ಪರ್ಧಿಗಳಲ್ಲಿ ಇವರು ಕೂಡ ಒಬ್ಬರಾಗಿದ್ದರು. ಇದೀಗ ಇವರ ಮೇಲೆ ವಂಚನೆ ಆರೋಪ ಬಂದಿದೆ.
ಗೋಲ್ಡ್ ಸುರೇಶ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಧಿಕೃತವಾಗಿ ಮೈನುದ್ದಿನ್ ರಿಂದ ಯಾವುದೇ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿಲ್ಲ.














