ಮನೆ ಆರೋಗ್ಯ ಸ್ತ್ರೀಯರಲ್ಲಿ ಅಧಿಕ ಮೂತ್ರ ವಿಸರ್ಜನೆ : ಭಾಗ 2

ಸ್ತ್ರೀಯರಲ್ಲಿ ಅಧಿಕ ಮೂತ್ರ ವಿಸರ್ಜನೆ : ಭಾಗ 2

0

 ಚಳಿ , ಏರ್ ಕಂಡೀಷನ್ಡ್ ಕೋಣೆಗಳಲ್ಲಿ

Join Our Whatsapp Group

★ ಸಾಧಾರಣವಾಗಿ ನಮ್ಮ ಶರೀರದಲ್ಲಿನ ನೀರಿನ ಸ್ವಲ್ಪಭಾಗ

ಬೆವರಿನ ರೂಪದಲ್ಲಿ ಹೊರಬಿಳುತ್ತದೆ. ಆದರೆ ನಾವು ತಂಪಾದ ವಾತಾವರಣದಲ್ಲಿದ್ದಾಗ, ಇಲ್ಲವೇ ಹವಾನಿಯಂತ್ರಿತ ಕೋಣೆಯಲ್ಲಿದ್ದಾಗ ನಮಗೆ ಬೆವರು ಬರದು. ಅಂತಹ ಸಂದರ್ಭಗಳಲ್ಲಿ ಶರೀರದಲ್ಲಿನ ನೀರಿನ ಪ್ರಮಾಣವನ್ನು ಸಮತೋಲನಗೊಳಿಸಲು ಶರೀರ ಮೂತ್ರ ವಿಸರ್ಜನೆಯ ಮೂಲಕ ನೀರನ್ನು ಹೊರ ಹಾಕುತ್ತದೆ.

   ★ಆಗ ಪದೇ ಪದೇ ಮೂತ್ರಕ್ಕೆ ಹೋಗುವುದೋ,ಇಲ್ಲವೇ ಅಧಿಕ ಮೂತ್ರ ವಿಸರ್ಜನೆ ಮಾಡುವುದೋ ಮಾಡುತ್ತವೆ. ಇದೂ ಸಹ ಬಹಳ ಸಹಜ ತಾತ್ಕಾಲಿಕವಾಗಿರುವ ಇದರ ಕುರಿತು  ಚಿಂತಿಸಬೇಕಾದ ಅಗತ್ಯವಿಲ್ಲ.

 ಗರ್ಭಾಶಯ ಜಾರಿ ಹೋಗುವುದು 

     ★ಕೆಲವು ಸ್ತ್ರೀಯರಿಗೆ ಮೂತ್ರ ವಿಸರ್ಜನೆ ಮಾಡಬೇಕೆಂಬ ಕೋರಿಕೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾರದೆ ಹೋಗಬಹುದು.ಚಿಮ್ಮಿದಾಗಲು ಸೀನಿದಾಗಲೋ ನಕ್ಕಾಗಲೋ ಕೆಲವು ಹನಿ ಮೂತ್ರ ಲೀಕ್ ಆಗಬಹುದು ಕೂಡಾ.

     ★ಈ ಸ್ಥಿತಿ ಗರ್ಭಾಶಯವನ್ನು  ಸಪೋರ್ಟ್ ಮಾಡುವ ಸ್ನಾಯುಗಳು ಬಲಹೀನನಗೊಂಡು, ಜಾರಿಹೋದಾಗ ಸಂಭವಿಸುತ್ತದೆ. ಹೆಚ್ಚಾಗಿ ಇದು 50 ವರ್ಷ ಮೀರಿದ ಮಹಿಳೆಯರಲ್ಲಿ ಕಂಡುಬರುತ್ತದೆ

 ಮೂತ್ರದ ಬಣ್ಣ

    ★ಸಾಧಾರಣವಾಗಿ ಮೂತ್ರ ನೀರಿನ ಬಣ್ಣದ್ದಾಗಲಿ, ತೆಳು ಹಳದಿ ಬಣ್ಣವಾಗಲಿ ಇರುತ್ತದೆ. ಬೇಸಿಗೆಯ ಕಾಲದಲ್ಲಿ ಮೂತ್ರ ಬಹಳ ಕಡಿಮೆಯಾಗುವುದರಿಂದ, ಗಾಢ ಹಳದಿ ಬಣ್ಣವು ಇರಬಹುದು ಅದಕ್ಕೆ ಕೆಲವೂ ಇರಬಹುದು ಆದರೆ ಕೆಲವು  ಸಂದರ್ಭಗಳಲ್ಲಿ ಮೂತ್ರದ ಬಣ್ಣ ಬದಲಾಗುತ್ತದೆ.

 ಪಿಂಕ್ ಇಲ್ಲವೇ ಕೆಂಪು ಬಣ್ಣ

    ★ಮೂತ್ರ ಈ ಬಣ್ಣದಲ್ಲಿರುವ ಕಾರಣ,ಬಹುಶಃ ಮೂತ್ರದಲ್ಲಿ ರಕ್ತ ಮಿಶ್ರ ವಾಗುವುದರಿಂದಿರಬಹುದು.  ಒಳಗಡೆ ಸೋಂಕು ಆಗಲಿ,ಊತ ವಾಗಲಿ ಇರಬಹುದು.

    ★ ಕೆಲವು ಸಂದರ್ಭಗಳಲ್ಲಿ ಮೂತ್ರದಲ್ಲಿ ಕಲ್ಲುಗಳ ಮೂತ್ರನಾಳವನ್ನು ಗಾಯಗೊಳಿಸಿ ರಕ್ತ ಸೂಸುವಂತೆ  ಮಾಡುತ್ತವೆ. ಆದರೆ ಒಮ್ಮೊಮ್ಮೆ ನೀವು ತಿನ್ನುವ ಆಹಾರದ ಬಣ್ಣ ಕೂಡಾ ಮೂತ್ರವನ್ನು ಕೆಂಪಗಾಗುವಂತೆ ಮಾಡಬಹುದು. ಮೂತ್ರ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡ ಕೂಡಲೇ ಡಾಕ್ಟರ್ ನ್ನು ಸಂಪರ್ಕಿಸುವುದು ಅಗತ್ಯ. ಮೂಲ ಕಾರಣಕ್ಕನುಗುಣವಾಗಿ ಚಿಕಿತ್ಸೆ ಮಾಡುತ್ತಾರೆ.

      ★ಗಾಢ ಹಳದಿ ಇಲ್ಲವೇ ಕಿತ್ತಲೆ ಬಣ್ಣ: ಬೇಸಿಗೆ ಕಾಲದಲ್ಲಿ ಸಾಕಷ್ಟು ನೀರು ಕುಡಿಯದಿದ್ದರೂ, ವಾಂತಿ, ನೀರು ಬೇಧಿಯಂತಹ ಸಂದರ್ಭಗಳಲ್ಲೂ ಅತಿಯಾಗಿ ಬೆವರು ಸುರಿದಾಗಲೂ, ಮೂತ್ರ ಗಾಢ ಹಳದಿ ಬಣ್ಣದಲ್ಲಿ ಹೊರಬೀಳಬಹುದು.

    ★ಟೀಬಿಗೆ ಬಳಸುವ ಕೆಲವು ಔಷಧಿಗಳು ಕೂಡ ಮೂತ್ರವನ್ನು ಅರೆಂಜ್ ಬಣ್ಣಕ್ಕೆ ತಿರುಗಿಸುತ್ತದೆ. ಬಿ ಕಾಂಪ್ಲೆಕ್ಸ್ ವಿಟಮಿನ್ ಗಳನ್ನು ಬಳಸುತ್ತಿರುವಾಗ ಮೂತ್ರ. ಗಾಢ ಹಳದಿ ಬಣ್ಣಕ್ಕೆ ತಿರುಗುತ್ತದೆ.

    ★ ನೀವು ಯಾವುದಾದರೂ ಔಷದ ಸೇವನೆ ಮಾಡುತ್ತಿರುವಾಗ, ಮೂತ್ರ ಗಾಢಾಳದಿ ಬಣ್ಣಕ್ಕೆ ತಿರುಗಿದರೆ ಅದಕ್ಕೆ ಕಾರಣ ಔಷಧಿಗಳೇ ಅಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಡಾಕ್ಟರ್ ರನ್ನು ಕೇಳಬೇಕೇ ವಿನಾ,  ನೀವೇ ತೀರ್ಮಾನಕ್ಕೆ ಬರಬಾರದು.

      ★ಲಿವರ್ ಗೆ ಹಾನಿಯಾಗಿ ಕಾಮಲೆ ರೋಗ ಬಂದಾಗ ಕೂಡಾ, ಮೂತ್ರ ಗಾಢ ಹಳದಿ ಬಣ್ಣಕ್ಕೆ ತಿರುಗುತ್ತದೆ ಮಲ ಬಿಳಿಯ ಬಣ್ಣಕ್ಕೆ ತಿರುಗಿ, ನಾಶವಾಗಿ ವಾಕರಿಕೆ, ವಾಂತಿಗಳಂತಹವು ಕೂಡಾ  ಆದರೆ, ಅದು ಹೈ ಪಟೈಟಿಸ್ ಸೋಂಕಿಗೆ ಸಂಬಂಧಿಸಿದ ಕಮಲೆಯಾಗಿರುವ ಸಂಭವ ಹೆಚ್ಚು.

     ★ ಕೂಡಲೇ ಡಾಕ್ಟರನ್ನು ನೋಡಬೇಕು. ಹಾಗಲ್ಲದೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಡಾಕ್ಟರ್ ರಕ್ತ ಪರೀಕ್ಷೆ ಮಾಡಿ ಆ ರಿಪೋರ್ಟಗಳಿಗನುಗುಣವಾಗಿ  ಚಿಕಿತ್ಸೆ  ಮಾಡುವರು.