ಮನೆ ಆರೋಗ್ಯ ಸ್ತ್ರೀಯರಲ್ಲಿ ಅಧಿಕ ಮೂತ್ರ ವಿಸರ್ಜನೆ : ಭಾಗ ಮೂರು

ಸ್ತ್ರೀಯರಲ್ಲಿ ಅಧಿಕ ಮೂತ್ರ ವಿಸರ್ಜನೆ : ಭಾಗ ಮೂರು

0

 ಮಧುಮೇಹ ರೋಗಿಗಳು ಪಾಲಿಸಬೇಕಾದ ಆಹಾರ ನಿಯಮಗಳು

Join Our Whatsapp Group

★ ಡಯಾಬಿಟೀಸ್ ವ್ಯಾದಿಯನ್ನುh  ಒಳ್ಳೆಯ ಆಹಾರ ನಿಯಮಗಳನ್ನು ಪಾಲಿಸುವ ಮೂಲಕ ಹಿಡಿತದಲ್ಲಿಟ್ಟುಕೊಳ್ಳಬಹುದು.

★ ಆಹಾರ ನಿಯಮಗಳ ವಿಷಯದಲ್ಲಿ ಕೆಳಗಿನ ಜಾಗೃತೆಗಳನ್ನು ತೆಗೆದುಕೊಳ್ಳಬೇಕು.

★ ಸಕ್ಕರೆ,ಬೆಲ್ಲ,ಜೇನುತುಪ್ಪ,ಸ್ವೀಟ್, ಚಾಕೊಲೇಟ್ ಗಳು, ಕೇಕ್ ಗ್ಲುಕೋಸ್ ಬಿಸ್ಕೆತ್ತುಗಳು ಐಸ್ ಕ್ರೀಮ್ ಜಾಮ್ ಸಿಹಿ ಮತ್ತು ತಂಪು ಪಾನೀಯಗಳು ಸಿಹಿ ಹಣ್ಣುಗಳನ್ನು  ಸೇವಿಸಬಾರದು..

★ಕಾಫಿ,ಟೀ,ಹಾಲನ್ನು ಸಕ್ಕರೆ ಯಿಲ್ಲದೆ ತೆಗೆದುಕೊಳ್ಳಬೇಕು. ಸ್ಯಕರಿನ್  ಸಹ ಬಳಸದಿರುವುದು ಒಳ್ಳೆಯದು, ಬಳಸಿದರೆ ಮೂತ್ರಕೋಶ ರೋಗ ಬರುವ ಸಂಭವವಿದೆ.

★ನೀರನ್ನು ಚೆನ್ನಾಗಿ ಕುಡಿಯುತ್ತಾ ಎಣ್ಣೆಯ ಬಳಗೆ ಕಡಿಮೆ ಮಾಡಬೇಕು.ಎಣ್ಣೆ ಕಡಿಮೆಯಿೂರುವ ಉಪಹಾರಗಳನ್ನು ಇಡ್ಲಿಯಂತಹವು ಅವರನ್ನು ಹೆಚ್ಚು ಬಳಸಬೇಕು.

★ ನಾರು ಪದಾರ್ಥ ಹೆಚ್ಚಾಗಿರುವ ಆಹಾರ ತೆಗೆದುಕೊಳ್ಳಬೇಕು.

★ ಆಹಾರವನ್ನು ಒಂದೇ ಬಾರಿಗೆ ಹೆಚ್ಚು ಪ್ರಮಾಣದಲ್ಲಿ ದಿಕ್ಕೇರಡು ಬಾರಿ ತಿನ್ನುವುದಕ್ಕಿಂತ ಸ್ವಲ್ಪ  ಪ್ರಮಾಣದಲ್ಲಿ ಆಗಾಗ ತೆಗೆದುಕೊಳ್ಳಬೇಕು ಪೂರ್ತಿಯಾಗಿ ನಿಲ್ಲಿಸುವುದು ಒಳ್ಳೆಯದಲ್ಲ.

★ರಾತ್ರಿಯ ವೇಳೆ ತರಕಾರಿ ಪಲ್ಯ ಚಪಾತಿಗಳನ್ನು ತಿನ್ನಬೇಕು.

★ರಕ್ತದಲ್ಲಿ ಗ್ಲುಕೋಸ್ ಕಡಿಮೆಯಾಗದೆ ಇರುವುದಕ್ಕಾಗಿ ನಡು ನಡುವೆ ಮಜ್ಜಿಗೆ, ಟೊಮ್ಯಾಟೋ, ನಿಂಬೆ ಹಣ್ಣುಗಳ ರಸವನ್ನು ತೆಗೆದುಕೊಳ್ಳಬಹುದು.

 ಹಬ್ಬಗಳ ದಿನಗಳಲ್ಲಿ ಉಪವಾಸವಿರಬಾರದು.

ಮಾನಸಿಕ ಒತ್ತಡದಿಂದಾಗಿ

★ ಬಹಳ ಕಳವಳಕ್ಕೆ ಈಡಾದಾಗ, ಬಹಳ  ಉದ್ರಿಕ್ತಸ್ಥಿತಿಯಲ್ಲಿರುವಾಗ ಕೂಡಾ ನಾವು ಪುನಃ ಪುನಃ ಮೂತ್ರ ವಿಸರ್ಜನೆ  ಮಾಡುತ್ತೇವೆ.

★ ಜೀವನದಲ್ಲಿ ಪ್ರತಿಯೊಬ್ಬರಿಗೂ ಮಾನಸಿಕ ಒತ್ತಡವುಂಟಾದಾಗ ಯಾವಾಗಲೋ ಒಂದು ಬಾರಿ ಹೀಗಾಗುತ್ತದೆ.ಅದು ಸಹಜ.ಅದಕ್ಕಾಗಿ ಪ್ರತ್ಯೇಕ ಚಿಕಿತ್ಸೆ ಮಾಡಬೇಕಾದ ಅಗತ್ಯವಿಲ್ಲ.

★ ಮಾನಸಿಕ ಒತ್ತಡ ಕಡಿಮೆಯಾಗಿತ್ತಲೇ, ಮೂತ್ರ ವಿಸರ್ಜನೆ ಸಹ ಮಾಮೂಲು ಸ್ಥಿತಿಗೆ ಬರುತ್ತದೆ.